ರಾಹುಲ್ ಗಾಂಧಿ ಅನರ್ಹತೆಯನ್ನು ಗಮನಿಸಿದ ಅಮೇರಿಕಾ ನ್ಯಾಯಾಂಗ ಸ್ವತಂತ್ರ ಪ್ರಜಾಪ್ರಭ್ತ್ವದ ಆಧಾರ ಸ್ಥಂಬ ಎಂದು ಹೇಳಿದೆ. ಕಾನೂನಿಗೆ ಗೌರವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವು ಯಾವುದೇ ಪ್ರಜಾಪ್ರಭುತ್ವದ ಮೂಲ ಆಧಾರ ಸ್ಥಂಬ ಎಂದು ಅಮೇರಿಕಾ ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ಯ ಸೇರಿದಂತೆ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತಂತೆ ಬದ್ಧತೆಯ ಕುರಿತಂತೆ ಭಾರತ ಸರ್ಕಾರದ ಜೊತೆ ಮಾತನಾಡುತ್ತೇವೆ. ನಮ್ಮ ಭಾರತೀಯ ಪಾಲುದಾರರ ಜೊತೆ ಮಾತುಕತೆಗಳ ವೇಳೆ ನಾವು ಪ್ರಜಾಪ್ರತಾತ್ಮಕ ತತ್ವಗಳ ಮಾನವ ಹಕ್ಕುಗಳ ರಕ್ಷಣೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳುತ್ತೇವೆ ಹಾಗೂ ಇವುಗಳು ನಮ್ಮ ಪ್ರಜಾಪ್ರಭುತ್ವಗಳನ್ನು ಬಲವರ್ದಿಸಲು ಪ್ರಮುಖ ಪಾತ್ರ ವಹಿಸಲಿವೆ ಎಂದು ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಮುಖ್ಯ ಉಪವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.
“ರಾಹುಲ್ ಗಾಂಧಿ ವಿರುದ್ಧದ ತೀರ್ಪು ಮತ್ತು ಅವರ ಸಂಸದೀಯ ಹಕ್ಕನ್ನು ಅಮಾನತು ಮಾಡಿರುವ ಕ್ರಮವನ್ನು ಸರ್ಕಾರ ಗಮನಿಸಿದೆ” ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯದ ಭಕ್ತರು ಹೇಳಿದ್ದಾರೆ ಜರ್ಮನಿ ಅಥವಾ ಯಾವುದೇ ಯುರೋಪಿಯನ್ ದೇಶ ರಾಹುಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು ಇದೇ ಮೊದಲು.
“ನಮಗೆ ತಿಳಿದಂತೆ ಗಾಂಧಿಯವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಂತದಲ್ಲಿದ್ದಾರೆ ಆಗ ಈ ತೀರ್ಪು ನಿಲ್ಲುತ್ತದೆಯೇ ಅಥವಾ ಅವರ ಸಂಸದೀಯ ಹಕ್ಕು ಅಮಾನತು ಮಾಡುವುದಕ್ಕೆ ಯಾವುದೇ ಆಧಾರ ಇದೆ ಎನ್ನುವುದು ಸ್ಪಷ್ಟವಾಗುತ್ತದೆ” ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರ.