ರಾಹುಲ್ ಗಾಂಧಿಗೆ ೨ ವರ್ಷ ಜೈಲು, ಗುಜರಾತ್ ಕೋರ್ಟ್ ತೀರ್ಪು. ಲೋಕಸಭಾ ಸದಸ್ಯತ್ವ ದಿಂದ ಅನರ್ಹಗೊಳ್ಳುವ ಸಾಧ್ಯತೆ

0
97

2019ರಲ್ಲಿ ರಾಹುಲ್ ಗಾಂಧಿ ಅವರು ಮೋದಿ ಅನ್ನೋ ಹೆಸರು ಇರುವವರು ಎಲ್ಲರೂ ಕಳ್ಳರೇ ಎಂದು ಹೇಳಿದ್ದಕ್ಕೆ ರಾಹುಲ್ ಗಾಂಧಿಯವರಿಗೆ ಗುಜರಾತ್ ಕೋರ್ಟ್ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕಾಂಗ್ರೆಸ್
ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ ಗಾಂಧಿ ಕೋರ್ಟ್ ತೀರ್ಪಿನ ವಿರುದ್ಧವಾಗಿ ಹಿಡಿ ಕಾರಿದ್ದಾರೆ. ಪ್ರಿಯಾಂಕ ಗಾಂಧಿಯವರು ನನ್ನ ಸಹೋದರ ಯಾವಾಗೂ ಸುಳ್ಳನ್ನು ಹೇಳುವುದಿಲ್ಲ ಯಾವತ್ತೂ ಸತ್ಯವನ್ನೇ ಹೇಳುತ್ತಾನೆ ಹಾಗೂ ಜನರ ಪರ ಕೆಲಸ ಮಾಡುತ್ತಾನೆ ಎಂದು ಹೇಳಿದ್ದಾರೆ.
ಇನ್ನೂ ಈ ಕುರಿತು ಮೇಲ್ಮನೆಯಲ್ಲಿ ಅರ್ಜಿ ಸಲ್ಲಿಸುವುದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜಯರಾಮ್ ರಮೇಶ್ ಅವರು ಸತ್ಯ ಮಾತಾಡಿದ್ದಕ್ಕಾಗಿ ಮತ್ತು ಸರ್ವಾಧಿಕಾರಿಯ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಈ ಶಿಕ್ಷೆ ಎಂದು ಹೇಳುತ್ತಾರೆ. ಈ ತೀರ್ಪಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಲೋಕಸಭಾ ಸದಸ್ಯತ್ವಕ್ಕೆ ಅನರ್ಹವಾಗುವ ಸಾಧ್ಯತೆ ಇದೆ.

ಕಳ್ಳರ ಹೆಸರೆಲ್ಲ ಮೋದಿಯಂದೆ ಏಕೆ ಇರುತ್ತದೆ ಎಂದು ಪರೋಕ್ಷವಾಗಿ ಪ್ರಧಾನಮಂತ್ರಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಮಾತಾಡಿದ್ದಕ್ಕಾಗಿ ಬಿಜೆಪಿಯ ವರಿಷ್ಠರೊಬ್ಬರು ರಾಹುಲ್ ಗಾಂಧಿ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೊಡಿದ್ದರು.

ಎರಡೂ ಕಡೆಯ ವಾದವನ್ನು ಆಲಿಸಿದ ಕೋರ್ಟ್ ಗಾಂಧಿ ಇವರನ್ನು ದೋಷಿ ಎಂದು ತೀರ್ಪು ನೀಡಿದೆ ಮತ್ತು ಎರಡು ವರ್ಷ ಜೈಲು ಶಿಕ್ಷೆ ಹಾಗೂ 15,000 ದಂಡವನ್ನು ವಿಧಿಸಿದೆ ಜೈಲು ಶಿಕ್ಷೆ ವಿಧಿಸಿ ನಂತರ ಜಾಮೀನು ಮಂಜೂರು ಮಾಡಿದ್ದು 30 ದಿನಗಳವರೆಗೆ ಶಿಕ್ಷೆ ಅಮಾನತುಗೊಳಿಸಿ ತೀರ್ಪು ನೀಡಿದೆ ಪರಿಣಾಮದಿಂದಾಗಿ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ.


ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಯಾವುದೇ ಜನಪ್ರತಿನಿಧಿಯನ್ನು ಯಾವುದೇ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದರೆ ಅಥವಾ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದರೆ ಅಂತಹ ಜನಪ್ರತಿನಿಧಿಯನ್ನು ಸದನದಿಂದ ಅನರ್ಹಗೊಳಿಸಲಾಗುತ್ತದೆ ಹಾಗೂ ಚುನಾಯಿತ ಅವಧಿ ಮುಕ್ತಾಯಗೊಂಡ ಬಳಿಕ 6 ವರ್ಷಗಳ ಕಾಲ ಅನರ್ಹತೆಯನ್ನು ಎದುರಿಸಬೇಕಾಗುತ್ತದೆ

          ಯುಗಾದಿ ಹಬ್ಬದ ವಿಶೇಷತೆ, ಮಹತ್ವ ಮತ್ತು ಆಚರಣೆ

 

ಉತ್ತಮ ಯುಟ್ಯೂಬ್ ಗೀತೆಗಳನ್ನು ಕೇಳಿ ಆನಂದಿಸಿ

LEAVE A REPLY

Please enter your comment!
Please enter your name here