ಬೇಸರದ ಅಂಶಗಳು
‘ಕಬ್ಜ’ ಚಿತ್ರಕಥೆ ದೊಡ್ಡದಾಗಿದೆ . ಆ ಕಥೆಯನ್ನು ಹೇಳಲು ಹೋಗಿ ಚಿತ್ರಕಥೆಗೆ ವೇಗ ಕೊಟ್ಟಿದ್ದಾರೆ.ಇದರಿಂದ ಪ್ರೇಕ್ಷಕನಿಗೆ ಯಾವುದೇ ಅಂಶಗಳು ಅರ್ತವಾಗದೆ ಕಸಿವಿಸಿಗೊಳ್ಳುತ್ತಾನೆ. ಸಾಕಷ್ಟು ಪಾತ್ರಗಳು ಸಿನಿಮಾಗಳಲ್ಲಿ ಬರುವುದರಿಂದ ಪಾತ್ರಗಳು ಕನ್ಫ್ಯೂಸ್ ಆಗುತ್ತವೆ. ಅನಾವಕ್ಷಕ ಆಕ್ಷನ್ ಸೀನ್‌ಗಳು , ಹಾಗೇ ಅಲ್ಲಲ್ಲಿ ‘ಕೆಜಿಎಫ್’,’ಮಪ್ತಿ’, ‘ಅಗ್ನಿಪತ್’ ಸಿನಿಮಾ ಸಂಜಯ್ ದತ್ ಪಾತ್ರ ಕಣ್ಮುಂದೆ ಪಾಸಾದಂತೆ ಅನಿಸುತ್ತೆ. ಒಟ್ಟಿನಲ್ಲಿ ‘ಕಬ್ಜ’ ಆರ್ ಚಂದ್ರು ಕಡೆಯಿಂದ ಉತ್ತಮ ಪ್ರಯತ್ನವೇ.. ಸುದೀಪ್ ಮತ್ತು ಶಿವರಾಜಕುಮಾರ್ ಅವರ ಅವಶ್ಯಕತೆ ಈ ಕಳಪೆ ಚಿತ್ರಕ್ಕೆ ಬೇಕಾಗಿರಲಿಲ್ಲ.
ಅಂಡರ್ವರ್ಲ್ಡ್ ಕಥೆಯನ್ನು ಬೇರೆ ರೀತಿ ತೆರೆಮೇಲೆ ತರಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಆರ್ ಚಂದ್ರು . ಮೊದಲ ಬಾರಿಗೆ ಉಪೇಂದ್ರ ಅವರು ಗೆದ್ದಿದ್ದು ಭೋಗತ ಲೋಕದ ಕಥೆ ಓಂ ಚಿತ್ರದಿಂದ. ಭೂಗತಲೋಕದ ಭಯಂಕರ ಇತಿಹಾಸ ನೋಡಿ ಮೆಚ್ಚಿಕೊಂಡಿದ್ದೂ ಇದೆ. ಸಮಾಜಕ್ಕೆ ಇಂತಹ ಸಿನಿಮಾಗಳ ಅಗತ್ಯವಿದೆಯೇ ಎಂದು ವಾದ ಮಾಡುತ್ತಲೇ ಅಂಡರ್‌ವರ್ಲ್ಡ್ ಚರಿತ್ರೆಯನ್ನು ಕಣ್ತುಂಬಿಕೊಂಡು ಬಂದ ಇತಿಹಾಸವೂ ಇದೆ. ಇದೇ ಭೂಗತಲೋಕದ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿವೆ.
ಸಿನಿಮಾ ಮಂದಿಗೆ ಕೊಲೆ, ಸುಲಿಗೆ ಮತ್ತು ಭೂಗತಲೋಕದಲ್ಲಿ ಸಿಗುವಷ್ಟು ಕಥೆ ಬೇರೆಲ್ಲೂ ಸಿಕ್ಕಿರಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ನಿರಂತರವಾಗಿ ಈ ಕಗ್ಗತ್ತಲ ಜಗ್ಗತ್ತಿನಲ್ಲಿ ಹೊಸ ಹೊಸ ಕಥೆಗಳನ್ನು ಹುಡುಕುತ್ತಲೇ ಇರುತ್ತಾರೆ. ಈ ಬಾರಿ ನಿರ್ದೇಶಕ ಆರ್ ಚಂದ್ರು ಕೂಡ ಹಾಗೇ ಮಾಡಿದ್ದಾರೆ. ಒಂದ್ವೇಳೆ ಪ್ಯಾನ್ ಇಂಡಿಯಾ ಸಿನಿಮಾ ಕಲ್ಪನೆ ಇಲ್ಲದೆ ಹೋಗಿದ್ದಿದ್ದರೆ, ‘ಕಬ್ಜ’ ಬೇರೆ ರೂಪ ಪಡೆದುಕೊಳ್ಳುತ್ತಿತ್ತೋ ಏನೋ?. ಆದರೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ಸಂಪೂರ್ಣ ವಿಫಲವಾಗಿದೆ.
ಮೃದು ಸ್ವಭಾವ ಅಂದ್ಕೊಂಡ ಸವಾರಿ ಮಾಡೋಕೆ ಹೋದರೆ, ಸೈಲೆಂಟ್ ಆಗಿರೋನು ವೈಲೆಂಟ್ ಆಗುತ್ತಾನೆ. ಅವನು ವೈಲೆಂಟ್ ಆದರೆ, ಭೂಗತಲೋಕದಲ್ಲೊಂದು ಚರಿತ್ರೆ ಸೃಷ್ಟಿಯಾಗುತ್ತೆ. ‘ಕಬ್ಜ’ ಇದೇ ಎಳೆಯ ಮೇಲೆ ಸೃಷ್ಟಿಸಿದ ಕಥೆ. ಹಾಗಿದ್ದರೆ, ಕನ್ನಡ ಹಾಗು ಹಿಂದಿ ಚಿತ್ರರಂಗದಲ್ಲಿ ಇಂತಹ ಬೇಕಾದಷ್ಟು ಚಿತ್ರಗಳು ಬಂದು ಹೋಗಿವೆ. ಉಪೇಂದ್ರ ನಿರ್ದೇಶನದ ಓಂ ಚಿತ್ರವನ್ನೇ ನೆನಪಿಸಬಹುದು.
ಕಥೆಯ ಹಿನ್ನೆಲೆ
1945 ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಅರ್ಕೇಶ್ವರನ ಅನ್ನೋ ಕ್ಯಾರೆಕ್ಟರ್ ಸೃಷ್ಟಿ ಮಾಡಲಾಗಿದೆ . ಅರ್ಕೇಶ್ವರನ ತಂದೆ ಸ್ವಾತಂತ್ರ್ಯ ಹೋರಾಟಗಾರ. ಉತ್ತರ ಭಾರತದಲ್ಲಿ ನೆಲೆಸಿದ್ದ ಅರ್ಕೇಶ್ವರನ ತಂದೆ ಬ್ರಿಟಿಷರ ಕತಂತ್ರಕ್ಕೆ ಬಲಿಯಾಗಬೇಕಾಗುತ್ತೆ. ಇಡೀ ಊರೇ ನಾಶವಾಗುತ್ತೆ. ಅಲ್ಲಿಂದ ಅರ್ಕೇಶ್ವರ ಹಾಗೂ ಸಂಕೇಶ್ವರ ಇಬ್ಬರು ಮಕ್ಕಳನ್ನು ಕರೆದುಕೊಂಡು ತಾಯಿ ದಕ್ಷಿಣ ಭಾರತದ ಅಮರಾಪುರದಲ್ಲಿ ಬಂದು ನೆಲೆಸುತ್ತಾರೆ. ಚರಕದಿಂದ ಬಟ್ಟೆ ನೇಯುತ್ತಾ? ಜೀವನ ಸಾಗಿಸುತ್ತಾ ಮಕ್ಕಳನ್ನು ಬೆಳೆಸುತ್ತಾರೆ. ಇಬ್ಬರು ಗಂಡು ಮಕ್ಕಳಲ್ಲಿ ಅರ್ಕೇಶ್ವರ ಚಿಕ್ಕವನು. ಹೀಗಾಗಿ ಅಣ್ಣನೇ ಮನೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇವರಿಬ್ಬರು ಬೆಳೆದು ನಿಲ್ಲುವಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿರುತ್ತೆ. ಅದೇ ವೇಳೆ ಅಮರಾಪುರದಲ್ಲಿ ಖಲೀಲ್ ಎಂಬ ಅಂಡರ್ವರ್ಲ್ಡ್ ರೌಡಿ ಅಟ್ಟಹಾಸ ಜೋರಾಗಿರುತ್ತೆ.
ಅಣ್ಣ ಸಂಕೇಶ್ವರ ಕೊಲೆ ನಂತರ ಅರ್ಕೇಶ್ವರನ ಆರ್ಭಟ ಪ್ರಾರಂಭ
ಅರ್ಕೇಶ್ವರ ವಾಯುಸೇನೆಯಲ್ಲಿ ತರಬೇತಿ ಪಡೆದು ಪೋಸ್ಟಿಂಗ್ ಹೋಗುವ ಮುನ್ನ ಅಮರಾಪುರಕ್ಕೆ ಮರಳುತ್ತಾನೆ. ಆ ವೇಳೆ ಅಮರಾಪುರದಲ್ಲಿ ರಾಜಮನೆತನ, ರಾಜಕೀಯ ಮುಖಂಡರು ಹಾಗೂ ಭೂಗತಲೋಕದ ಮಧ್ಯೆ ಸಮರ ಶುರುವಾಗಿತ್ತೆ. ಅಂಡರ್‌ವರ್ಲ್ಡ್ ಡಾನ್‌ಗಳು ಒಳಗೊಳಗೆ ಕತ್ತಿ ಮಸೆಯುತ್ತಿರುತ್ತಾರೆ. ಈ ವೇಳೆ ಅಮರಾಪುರದಲ್ಲಿ ನಡೆದ ಒಂದು ಘಟನೆಯಿಂದ ಅಣ್ಣ ಸಂಕೇಶ್ವರನ ಕೊಲೆಯಾಗತ್ತೆ. ಇಲ್ಲಿಂದ ಅರ್ಕೇಶ್ವರನ ಆರ್ಭಟ ಶುರು.
ಭೂಗತ ಲೋಕದ ಕಬ್ಜ
ಅರ್ಕೇಶ್ವರ ಅಲಿಯಾಸ್ ಅರ್ಕ ಅಂಡರ್‌ವರ್ಲ್ಡ್‌ಗೆ ಎಂಟ್ರಿ ಕೊಡುವವರೆಗೂ ಫಸ್ಟ್ ಹಾಫ್ ಮುಗಿದಿರುತ್ತೆ. ಅಸಲಿಗೆ ಇಂಟರ್‌ವಲ್‌ನಿಂದಲೇ ‘ಕಬ್ಜ’ ಆರಂಭ. ಅಣ್ಣ ನ ಕೊಲೆ ಮಾಡಿದವರ ನಾಶ ಹೇಗೆ ಮಾಡುತ್ತಾನೆ ಅನ್ನೋದನ್ನ ತೋರಿಸಲು ಪ್ರಯತ್ನಿಸಿದ್ದಾರೆ. ಅರ್ಕೇಶ್ವರ ಸೆಕೆಂಡ್ ಹಾಫ್‌ನಲ್ಲಿ ಭೂಗತಲೋಕವನ್ನೇ ‘ಕಬ್ಜ’ ಮಾಡು ತ್ತಾನೆ.ಇಲ್ಲಿಂದ ಮುಂದೆ ಅರ್ಕೇಶ್ವರನ ಏನಾದ? ಅವನ ಭವಿಷ್ಯ ಏನಾಯ್ತು? ಪತ್ನಿ ಮತ್ತು ಮಕ್ಕಳ ಭವಿಷ್ಯ ಏನಾಯ್ತು ಅನ್ನೋದನ್ನ ತೋರಿಸ್ತಾರೆ.
ನಾಯಕಿಯಾಗಿ ಶ್ರಿಯಾ ಸರನ್
ಚಿತ್ರದಲ್ಲಿ ಶ್ರಿಯಾ ಶರಣ್ ಸಹಜ ಸುಂದರಿ ಎನಿಸುತ್ತಾರೆ. ಆದರೆ ಅವರಿಗೆ ಮೊದಲಿದ್ದ ಮುಖದ ಕಾಂತಿ ಮಾಯವಾಗಿದೆ. ನಮಾಮಿ ನಮಾಮಿ ಹಾಡಿನಲ್ಲಿ ಶ್ರಿಯಾ ಶರಣ್ ಸಾಧಾರಣವಾಗಿ ಕಾಣಿಸುತ್ತಾರೆ. ಸಿನಿಮಾದುದ್ದಕ್ಕೂ ಟ್ರೆಡಿಷನಲ್ ಲುಕ್‌ನಲ್ಲಿ ಪ್ರಬುದ್ಧರಾಗಿ ಕಾಣಿಸುತ್ತಾರೆ. ಮಧ್ಯೆದಲ್ಲಿ ಶ್ರಿಯಾ ತಂದೆ ವೀರ ಬಹದ್ದೂರ್ ಪಾತ್ರದಲ್ಲಿ ಮುರಳಿ ಶರ್ಮಾ ವಿರೋಧ.. ವಿಲನ್ ಸ್ವರೂಪ ಎದ್ದು ಕಾಣುತ್ತೆ.
ಕಿಚ್ಚನ ಆಗಮನ
ಅಸಲಿಗೆ ಸಿನಿಮಾ ಆರಂಭ ಆಗೋದೇ ಕಿಚ್ಚ ಸುದೀಪ್ ಪಾತ್ರದಿಂದ. ಭಾರ್ಗವ್ ಭಕ್ಷಿ ಇಂಟ್ರುಡಕ್ಷನ್ ಒಬ್ಬರು ಕೊಟ್ಟರೆ, ಅರ್ಕೇಶ್ವರನ ಇಂಟ್ರುಡಕ್ಷನ್ ಕೊಡೋದು ಕಿಚ್ಚ ಸುದೀಪ್. ಪೊಲೀಸ್ ಅಧಿಕಾರಿಯಾಗಿ ಕಿಚ್ಚನ ಎಂಟ್ರಿಗೆ ಸಿಕ್ಕಾಪಟ್ಟೆ ಶಿಳ್ಳೆಗಳು ಬೀಳುತ್ತವೆ. ಸ್ಟೈಲಿಷ್ ಎಂಟ್ರಿ.. ಬೇಸ್ ವಾಯ್ಸ್‌ನಲ್ಲಿ ನಿರೂಪಣೆ ಸೂಪರ್.. ಸಿನಿಮಾದ ಉದ್ದಕ್ಕೂ ಆಗಾಗ ಕಿಚ್ಚ ಧ್ವನಿ ಬಂದಿರುವುದು ಪ್ಲಸ್ ಪಾಯಿಂಟ್. .
ಮೆಚ್ಚುಗೆಯ ಅಂಶಗಳು
ಅರ್ಕೇಶ್ವರನ ಪಾತ್ರದಲ್ಲಿ ಉಪೇಂದ್ರ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಇದೇ ಮೊದಲ ಬಾರಿಗೆ ರೆಟ್ರೋ ಲುಕ್‌ನಲ್ಲಿ ಕಂಡಿರೋ ಉಪ್ಪಿ ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಆಕ್ಷನ್ ಸೀಕ್ವೆನ್ ಅದ್ಧೂರಿಯಾಗಿದೆ. ಎಜೆ ಶೆಟ್ಟಿ ಸಿನಿಮ್ಯಾಟೋಗ್ರಫಿ ಕಣ್ಣುಗಳಿಗೆ ಖುಷಿ ಕೊಡುತ್ತೆ. ಹಾಡುಗಳು ಮಾಸ್ ಆಗಿವೆ. ಸುನೀಲ್ ಪುರಾಣಿಕ್, ಅನೂಪ್ ರೇವಣ್ಣ ಗಮನ ಸೆಳೆಯುತ್ತಾರೆ. ತಾನ್ಯ ಹೋಪ್ ಸ್ಪೆಷಲ್ ಸಾಂಗ್ ಪ್ರೇಕ್ಷಕರಿಗೆ ರಿಲೀಫ್ ಕೊಡುತ್ತೆ. ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಎಂಟ್ರಿ ಚಿಂದಿ. ಇಡೀ ಸಿನಿಮಾಗೆ ಮಾಸ್ ಸೀನ್ ಇದೇ ಅಂತ ಅನಿಸಿದರೂ ಅಚ್ಚರಿ ಪಡಬೇಕಿಲ್ಲ.
ಸಂಗ್ರಹ : ವಿವಿಧ ಮೂಲಗಳಿಂದ
ಪ್ರಜಾಟೈಮ್ಸ್
ವೆಬ್ಸೈಟ್ : www.prajatimes.com