ಬ್ಯಾಟರಾಯನಪುರ ಈ ಸಲ ಕಾಂಗ್ರೆಸ್ ನ ಕೃಷ್ಣ ಬೈರೇಗೌಡರರಿಗೆ ಬಿಜೆಪಿ ಪ್ರತಿಸ್ಪರ್ಧಿ ತಮ್ಮೇಶ್ ಗೌಡ

0
81

ನಗರದಲ್ಲಿ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಬ್ಯಾಟರಾಯನಪುರವು ಉತ್ತರ ಬೆಂಗಳೂರಿನಲ್ಲಿ ತುಲನಾತ್ಮಕವಾಗಿ ಹೊಸ ಕ್ಷೇತ್ರವಾಗಿದೆ. ಇದು ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೋಡಿಗಹಳ್ಳಿ, ವಿದ್ಯಾರಣ್ಯಪುರ, ದೊಡ್ಡ ಬೊಮ್ಮಸಂದ್ರ ಮತ್ತು ಕುವೆಂಪು ನಗರ ವಾರ್ಡ್‌ಗಳನ್ನು ಒಳಗೊಂಡಿದೆ.

ಗಾಲಿ ಆಂಜನೇಯ ದೇವಸ್ಥಾನಕ್ಕೆ ಹೆಸರುವಾಸಿಯಾದ ಈ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳೊಂದಿಗೆ ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶಗಳ ಮಿಶ್ರಣವಾಗಿದೆ. ಮಾಲ್‌ಗಳು, ಹೊಸ ಕಾಲೇಜುಗಳು ಮತ್ತು ವಸತಿ ಪ್ರದೇಶಗಳ ಜೊತೆಗೆ ಇತರ ಆದಾಯದ ಲೇಔಟ್‌ಗಳು ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ, ಬಹುತೇಕ ಹಳ್ಳಿಯಂತಹ ಪ್ರದೇಶಗಳು ಉತ್ತಮ ಮೂಲಸೌಕರ್ಯಗಳ ಕೊರತೆಯೊಂದಿಗೆ ಶ್ರೀಮಂತ ಪ್ರದೇಶಗಳ ಅಸಮ ಮಿಶ್ರಣವನ್ನು ನೀವು ಕಾಣುತ್ತೀರಿ . ಉತ್ತಮವಾಗಿ ಅಭಿವೃದ್ಧಿ ಹೊಂದಿದ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳ ವಿರುದ್ಧ ಸಮತೋಲಿತವಾಗಿವೆ. ವೊಕ್ಕಲಿಗರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಮತದಾರರನ್ನು ರೂಪಿಸುತ್ತಾರೆ. ಈ ಕ್ಷೇತ್ರವು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಏರೋಸ್ಪೇಸ್ ಪಾರ್ಕ್‌ಗೆ ಹೋಗುವ ಹೆದ್ದಾರಿಯಿಂದ ಸುತ್ತುವರಿದಿದೆ.

ಈ ಪ್ರದೇಶವು ಸಾಮಾನ್ಯ ಸಮಸ್ಯೆಗಳಾದ ಹದಗೆಟ್ಟ ರಸ್ತೆಗಳು, ಸರಿಯಾದ ಚರಂಡಿ ಕೊರತೆ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದೆ. ಈ ಹಲವು ಕಂದಾಯ ಕ್ಷೇತ್ರಗಳಲ್ಲಿ ಈ ಸಮಸ್ಯೆಗಳು ಗರಿಗೆದರಿವೆ. ಭದ್ರಪ್ಪ ಲೇಔಟ್‌ನಂತಹ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಎಲ್ಲಾ ಪಕ್ಷಗಳು “ಸಮಗ್ರ ಅಭಿವೃದ್ಧಿ” ಎಂದು ಭರವಸೆ ನೀಡಿದ್ದರೂ ಸಹ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿವೆ, ರೈತರ ಜೀವನೋಪಾಯವನ್ನು ತಿನ್ನುತ್ತಿವೆ ಎಂದು ಆರೋಪಿಸಲಾಗಿದೆ .

ಕರ್ನಾಟಕದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಅಧಿಕಾರ ವಿಚಾರದಲ್ಲಿ ಕಾಂಗ್ರೆಸ್ ಇಲ್ಲಿ ಹ್ಯಾಟ್ರಿಕ್ ಭಾರಿಸಿದೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2001 ರ ಭಾರತೀಯ ಜನಗಣತಿ ಪ್ರಕಾರ ಸುಮಾರು ಎರಡು ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಪುರಷರು ಶೇಕಡಾ 52ರಷ್ಟಿದ್ದಾರೆ. ಮಹಿಳೆಯರು ಶೇಕಾಡ 48ರಷ್ಟಿದ್ದಾರೆ. ಈ ಕ್ಷೇತ್ರ ಸರಾಸರಿ ಶೇಕಡಾ 73ರಷ್ಟು ಸಾಕ್ಷರತೆ ಹೊಂದಿದೆ. ಇಲ್ಲಿ ಸಾಕ್ಷರತೆ ಪ್ರಮಾಣ ತುಸು ಹೆಚ್ಚು ಎನ್ನಬಹುದು.

ಪ್ರತಿ ವಿಧಾನಸಭಾ ಚುಣಾವಣೆ ಬಂದಾಗಲೂ ಸಹ ಕರ್ನಾಟಕದ ಯಾವುದೇ ಕ್ಷೇತ್ರದಲ್ಲೂ ಮತದಾರರ ಒಲವು, ಪಕ್ಷಗಳ ಗೆಲವನ್ನು ಮುಖ್ಯವಾಗಿ ರಾಜಕೀಯ ಬೆಳವಣಿಗೆಗಳನ್ನು ಊಹಿಸಲು ಸಾಧ್ಯವಿಲ್ಲ. ಸದ್ಯ ಬ್ಯಾಟರಾಯಪುರದಲ್ಲೂ ಅಷ್ಟೇ, ಇಲ್ಲಿ 2008ರಿಂದಲೂ ಕಾಂಗ್ರೆಸ್‌ ಬಹುಮತ ಗಳಿಸುವ ಮೂಲಕ ಅಧಿಕಾರ ಗದ್ದುಗೆ ಏರಿದೆ. 2023ರ ಚುನಾವಣೆಯಲ್ಲಿ ಅದನ್ನು ಹಾಗೇಯೆ ಕಾಪಾಡಿಕೊಳ್ಳುವ ಸವಾಲು ಕಾಂಗ್ರೆಸ್‌ ನಾಯಕರ ಮೇಲಿದೆ.

ಬ್ಯಾಟರಾಯನಪುರ ಕ್ಷೇತ್ರದ ರಾಜಕೀಯ ಹಿನ್ನೆಲೆ
ಸತತ ಮೂರು ಬಾರಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹ್ಯಾಟ್ರಿಕ್ ಭಾರಿಸಿದೆ. ಕೈ ನಾಯಕ ಕೃಷ್ಣ ಬೈರೇಗೌಡ ಅವರು 2008ರಿಂದಲೂ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ರವಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಬೀಗಿದ್ದರು. ಆದರೆ ಬಿಜೆಪಿ (5671) ಕಡಿಮೆ ಅಂತದಿಂದ ಸೋತಿದೆ. ನಿರಂತರವಾಗಿ ಮೂರು ಸಲ ಕೃಷ್ಣಬೈರೇಗೌಡಚುನಾಯಿತರಾಗಿದ್ದಾರೆ.

ಕಾಂಗ್ರೆಸ್‌ ಪ್ರಬಲ ಪೈಪೋಟಿ ಒಡ್ಡಲು ಬಿಜೆಪಿ ಸಿದ್ಧತೆ
ಕಾಂಗ್ರೆಸ್ ಭದ್ರಕೋಟೆಯಾಗಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ವರ್ಷಗಳಿಂದಲೂ ಅಧಿಕಾರ ಹಿಡಿಯಲು ಹವಣಿಸುತ್ತಿದೆ. 2018ರಲ್ಲಿ ಇನ್ನೇನು ಕ್ಷೇತ್ರ ಬಿಜೆಪಿ ಪಾಲಾಯಿತು ಎನ್ನುವಷ್ಟರಲ್ಲಿ ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿದೆ. ಮರಳಿ ಯತ್ನವ ಮಾಡು ಎಂಬಂತೆ ಈ ಭಾರಿ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕೇ ತೀರಲು ಬಿಜೆಪಿ ನಾಯಕರು ಚಿತ್ತ ನೆಟ್ಟಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ನಾಯಕರು, ಕಾರ್ಯಕರ್ತರ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಈ ಸಲ ಅತ್ಯಧಿಕ ಸ್ಥಾನ ಗೆಲ್ಲುವ ಉತ್ಸಾಹ ತೋರುತ್ತಿರುವ ಜೆಡಿಎಸ್ ಸಹ ಸಿದ್ಧತೆ ಆರಂಭಿಸಿರುವುದು ಗೊತ್ತಾಗಿದೆ.

ಬ್ಯಾಟರಾಯನಪುರ: ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ
ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಗೂ ಮುಸ್ಲಿಂ ಸಮುದಾಯದದ ಮತಗಳು ಹೆಚ್ಚಿವೆ. ಅವರೇ ಇಲ್ಲಿ ನೀರ್ಣಾಯಕರು ಎನ್ನಬಹುದು. ಮೂಲ ನಿವಾಸಿಗಳ ಸಂಖ್ಯೆಯಷ್ಟೇ ಇಲ್ಲಿ ವಲಸಿಗರು ಇದ್ದಾರೆ. ಮುಖ್ಯವಾಗಿ ಇಲ್ಲಿ ಎಲ್ಲ ಜಾತಿ ಜನಾಂಗದವರು ಇದ್ದಾರೆ. ಅಲ್ಲದೇ ಹಿಂದಿ, ತೆಲುಗು, ತಮಿಳು, ಅಲ್ಪಸಂಖ್ಯಾತರು ಇದ್ದಾರೆ. ಕಾಂಗ್ರೆಸ್‌ ಮುಸ್ಲಿಂ ಓಲೈಕೆ ಹೆಚ್ಚು ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು
ಕಾಂಗ್ರೆಸ್ ಹಾಲಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಆರೋಪಗಳು ಇವೆ. ಈ ಸಲ ಕೃಷ್ಣ ಬೈರೇಗೌಡರೇ ಕೈ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದಿದ್ದಾರೆ . ಬಿಜೆಪಿಯಿಂದ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಎ. ರವಿ ಯವರನ್ನು ಬಿಜೆಪಿ ಕೈ ಬಿಟ್ಟಿದೆ ಯಡಿಯೂರಪ್ಪ ನವರ ಆತ್ಮೀಯ ಎಂದು ಹೇಳಲಾಗುತ್ತಿರುವ ತಮ್ಮೇಶ್ ಗೌಡ ಇವರಿಗೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಕಟಿಸಿದೆ. ಒಕ್ಕಲಿಗರ ಮತ ಸೆಳೆಯಲು ಮುಂದಾಗಿರುವ ಜೆಡಿಎಸ್ ನಿಂದ ಸ್ಥಳಿಯ ನಾಯಕ ವೇಣುಗೋಪಾಲ್ ಅವರನ್ನು ಕಣಕ್ಕಿಳಿಸಿದೆ. ಆಮ್ ಆದ್ಮಿ ಪಕ್ಷ (AAP) ದಿಂದ ಉಮೇಶ್ ಬಾಬು ಸ್ಪರ್ದಿಸುತ್ತಿದ್ದಾರೆ ಇನ್ನು ಮಾಯಾವತಿಯವರ ಬಹುಜನ ಸಮಾಜ ಪಕ್ಷದಿಂದ ಸಂಪೂರ್ಣ ಗೌಡ ಸ್ಪರ್ದಿಸುತ್ತಿದ್ದಾರೆ

2008 ರಲ್ಲಿ ಒಟ್ಟು ಮತದಾರರ ಸಂಖ್ಯೆ: 1,41,793.
2013 ರಲ್ಲಿ ಒಟ್ಟು ಮತದಾರರ ಸಂಖ್ಯೆ: 2,08,380 ನಲ್ಲಿ
ಪ್ರಸ್ತುತ ನೋಂದಾಯಿತ ಮತದಾರರ ಒಟ್ಟು ಸಂಖ್ಯೆ: 4,19,694.

ಪ್ರಜಾ ಟೈಮ್ಸ್

www.prajatimes.com

LEAVE A REPLY

Please enter your comment!
Please enter your name here