2023 ಚುನಾವಣೆ ಬ್ಯಾಟರಾಯಣಪುರ ಶಾಸಕ ಸ್ಥಾನ ಯಾರಿಗೆ…. ?

0
129

ಕ್ಷೇತ್ರ ಹಿನ್ನೆಲೆ:

ಬೆಂಗಳೂರಿನ  28 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ  ಬ್ಯಾಟರಾಯನಪುರ ಬರುವುದು. ಇಲ್ಲಿ ಕಾಂಗ್ರೆಸ್ ಸತತವಾಗಿ ಮೂರು ಚುನಾವಣೆಯನ್ನು ಗೆದ್ದಿದೆ. ಬ್ಯಾಟರಾಯನಪುರ ಕ್ಷೇತ್ರ ಹೊಸದಾಗಿ ಹುಟ್ಟಿಕೊಂಡಿದ್ದು. 2008 ರಲ್ಲಿ ಕ್ಷೇತ್ರ ಮರುವಿಂಗಡಣೆಯಾದಾಗ ಪ್ರಾರಂಭಯಾಯಿತು. ಕೃಷ್ಣ ಭೈರೇಗೌಡರು ಸತತ ಮೂರು ಬಾರಿ ಗೆದ್ದಿದ್ದಾರೆ. ಮೂಲತ ಕೋಲಾರ ಜೆಲ್ಲೆಯ ವೇಮಗಲ್ ಕ್ಷೇತ್ರದ ಕೃಷ್ಣ ಭೈರೇಗೌಡ ಅವರ ತಂದೆ ಸಿ ಭೈರೇಗೌಡ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಸಿ ಭರೇಗೌಡ ಅವರ ಅಕಾಲಿಕ ನಿಧನದಿಂದ ಅಮೇರಿಕಾದಲ್ಲಿದ್ದ ಮಗ ಕೃಷ್ಣ ಭೈರೇಗೌಡ ವಾಪಾಸ್ ಬಂದು ಬೈಲೆಕ್ಷನ್ ಗೆ ಸ್ಪರ್ದಿಸಿ ಸತತವಾಗಿ ಗೆಲ್ಲುತ್ತಿದ್ದಾರೆ.  ಕೃಷ್ಣ ಭೈರೇಗೌಡರು ಸತತ ಮೂರು ಸಾರಿ ಗೆದ್ದಿದ್ದಾರೆ.

ಎ ರವಿ ಹಿನ್ನೆಲೆ

ಇವರ ಪ್ರತಿಸ್ಪರ್ಧಿ ಎ ರವಿ ಬಾಜಪ ಅಭ್ಯರ್ಥಿ, ಇವರು ಬಾಜಪ ಸರ್ಕಾರದ ಕಂದಾಯ ಸಚಿವರಾದ ಶ್ರೀ ಆರ್ ಅಶೋಕ್ ಅವರ ಸೋದರ ಸಂಬಂಧಿ. ಸತತ ಮೂರು ಬಾರಿ ಸೋತಿದ್ದಾರೆ. ಈ ಬಾರಿಯೂ ಬಾಜಪ ಟಿಕೆಟಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಕರೋನ ಪೀಡಿತ ಸಮಯದಲ್ಲಿ ಕ್ಷೇತ್ರದಲ್ಲಿ ಶಾಸಕರಾಗಿಲ್ಲದಿದ್ದರೂ ಜನರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿ ಎಲ್ಲರಿಗೂ ಬೇಕಾದವರಾಗಿದ್ದಾರೆ. ಎ ರವಿ ಕ್ಷೇತ್ರದಲ್ಲಿ ಎಲ್ಲರಿಗೂ ಗೊತ್ತಿರೋ ವ್ಯಕ್ತಿ.

ಕೃಷ್ಣ ಬೈರೇಗೌಡರ ಆಗಮನ

1999ರಲ್ಲಿ ಸಿ ಬೈರೇಗೌಡರ ಅಕಾಲಿಕ ನಿಧನದಿಂದಾಗಿ  ಅವರ ಮಗ ಕೃಷ್ಣ ಬೈರೇಗೌಡ ಅಮೇರಿಕಾದಿಂದ ಬಂದು ಬೈ ಎಲೆಕ್ಷನ್ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ಕೃಷ್ಣ ಭೈರೇಗೌಡರು ಉತ್ತಮ ಭಾಷಣಕಾರರು.  ಅವರೂ ಕೂಡ ನಾನೇನು ಕಡಿಮೆ ಎಂದು ಕ್ಷೇತ್ರದಲ್ಲಿ ಕರೋನ ಸಮಯದಲ್ಲಿ ಓಡಾಡಿ ಕೆಲಸ ಮಾಡಿದ್ದಾರೆ. ಸತತ ಮೂರು ಚುನಾವಣೆಯಲ್ಲಿ ಒಂದೇ ಬಿಜೆಪಿ  ಅಭ್ಯರ್ಥಿ ಅದು ಏ  ರವಿ  ವಿರುದ್ಧವಾಗಿ 2008ರಲ್ಲಿ, 2013ರಲ್ಲಿ 2018 ರಲ್ಲಿ ಸ್ಪರ್ದಿಸಿ ಸತತ ಮೂರು ಬಾರಿ ಗೆದ್ದಿದ್ದಾರೆ . 2023 ರ ಚುನಾವಣೆಯಲ್ಲಿ ಕೂಡ ಇವರು ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದಾರೆ

ಈಗಿನ  2023 ರ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡರಿಗೂ ಕೂಡ ನೀರು ಕುಡಿದ ಹಾಗೆ ಚುನಾವಣೆಯಲ್ಲಿ ಗೆಲ್ತಿನಿ ಅನ್ನೋ  ಯಾವ ಲಕ್ಷಣಗಳು ಕಾಣ್ತಾ ಇಲ್ಲ. ಯಾಕಂದರೆ ಕಳೆದ ಚುನಾವಣೆಯಲ್ಲಿ ಎಣಿಕೆ ಪ್ರಾರಂಭವಾಗುತ್ತಿದ್ದ ಹಾಗೆ ಏದುಸಿರು ಬಿಡೊ  ಹಾಗೆ ಆಗಿತ್ತು. ಕಡೆ ಹಂತದವರೆಗೂ ಹಾವು ಎನಿಯಾಟ ಆಟದಂತೆ ಆಗಿತ್ತು. ಕಡೆಗೆ ಕೇವಲ ಸುಮಾರು ಐದು ಸಾವಿರ ಅಂತರದಲ್ಲಿ ಗೆದ್ದಿದ್ದಾರೆ. ಇವರ ಪ್ರತಿಸ್ಪರ್ದಿ ಬಿಜೆಪಿ ಅಭ್ಯರ್ಥಿ ಏ ರವಿ ಭಾರಿ ಹೋರಾಟ ಮಾಡಿ ಕಡೆಗೆ ಮೂರನೇ ಬಾರಿ ಸೋತರು.

ತಮ್ಮೇಶ್ ಗೌಡರ ಹಿನ್ನೆಲೆ

RSS ಮತ್ತು ABVP ಹಿನ್ನಲೆ ಯಿಂದ ಬಂದಂತಹ ತಮ್ಮೇಶ್ ಗೌಡರ ಹೆಸರು ಕ್ಷೇತ್ರದಲ್ಲಿ ತುಂಬಾ ಸದ್ದು ಯೆಡಿಯೂರಪ್ಪ ಮತ್ತು ವಿಜಯೇಂದ್ರಗೆ ತುಂಬ ಆಪ್ತ ಎಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲೂ ಕೂಡ ಯಂಗ್ ಲೀಡರ್ ಅನಿಸಿಕೊಂಡ ತಮ್ಮೇಶ್ ಗೌಡ ಕೂಡ ಕ್ಷೇತ್ರದಲ್ಲಿ ಟಾವೆಲ್ ಹಾಕೊಂಡು ಓಡಾಡ್ತಾ ಇದ್ದಾರೆ. ಬ್ಯಾಟರಾಯಣಪುರದಲ್ಲಿ ತಮ್ಮೇಶ್ ಗೌಡ ಮಾಡಿದ ವೆಂಕಟೇಶ್ವರ ಕಲ್ಯಾಣೋತ್ಸವ ಭಾರಿ ಪ್ರಚಾರ ಪೆಡೆದುಕೊಂಡಿತು. ಏರ್ಪೋರ್ಟ್ ರಸ್ತೆಯಲ್ಲಿ ಒಂದೂ ಕಂಬವನ್ನು ಬಿಡದೆ ತಮ್ಮ ಬ್ಯಾನರ್ ಗಳನ್ನು ಹಾಕ್ಕೊಂಡು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಜನರ ಬಾಯಲ್ಲಿ ಮಾತು ಕೂಡ ಕೇಳಿ ಬರುತ್ತಿದೆ

ಕೃಷ್ಣ ಬೈರೇಗೌಡರು ಕೂಡ ತಮ್ಮ ಹಿಂದಿನ ವೇಗದಲ್ಲಿಯೇ ಓಡಾಡಿಕೊಂಡಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಓಡಾಡಿ ಜನರ ಕಣ್ಣಿಗೆ ಕಾಣಲು ಮತ್ತು ಚುನಾವಣೆ ವೇಳೆಯಲ್ಲಿ ಜನರು ನೆನಪಿಡಲು ಬ್ಯಾಟರಾಯನಪುರ ಕ್ಷೇತ್ರದಲ್ಲಿ ರಸ್ತೆಗಳ ಕಾಮಗಾರಿಗೆ ಓಡಾಡಿದ್ದೆ ಓಡಾಡಿದ್ದು. ಯಾವುದೇ ಕಂಬಗಳನ್ನು ಬಿಡದೆ ಬ್ಯಾನರಗಳನ್ನು ಹಾಕಿದ್ದೆ ಹಾಕಿದ್ದು.

ಜೆಡಿಎಸ್ ಗೆ ಗಣನೀಯ ಮತಗಳು 

ಮತ್ತೊಂದು ವಿಚಾರವೆಂದರೆ ಇಲ್ಲಿ ಜೆಡಿಎಸ್ ಮೂರು ಚುನಾವಣೆಗೆ  ಮೂರು ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಒಳ್ಳೆ ವೋಟುಗಳನ್ನು ಪಡೆದಿದೆ.  2008 ರಲ್ಲಿ 21,000, 2013ರಲ್ಲಿ 41,000 ಮತ್ತು 2018 ರಲ್ಲಿ 22,000, ಆದರೆ ಜೆಡಿಎಸ್ ನಾಯಕರ ನಿರಾಸಕ್ತಿಯಿಂದ ಜೆಡಿಎಸ್ ಇಲ್ಲಿ ಬೆಳೆಯಲಿಲ್ಲ.  ಕೇವಲ ಮಂಡ್ಯ, ಮೈಸೂರು ಮತ್ತು  ಹಾಸನ ಕ್ಷೇತ್ರದಲ್ಲಿ ರಾಜಕೀಯ ಮಾಡಿ ನಾವು ಮುಖ್ಯಮಂತ್ರಿ ಆಗುತ್ತೇವೆ  23 ಅಥವಾ 25 ಸೀಟು ಬಂದ್ರೆ ಸಾಕು ಅನ್ನುತ್ತಾರೆ.  ಎಷ್ಟೋ ಕಡೆ ಪಕ್ಷ ಪ್ರಬಲವಾಗಿದ್ದರು ಕಾರ್ಯಕರ್ತರು ತುಂಬಾ ಆಸಕ್ತಿ ತೋರಸಿದ್ದರೂ  ಕೂಡ ಜೆಡಿಎಸ್ ನಾಯಕರು ಕೆಲವು ಕ್ಷೇತ್ರಗಳನ್ನು ಸರಿಯಾಗಿ  ಬಳಸಿಕೊಳ್ಳುತ್ತಿಲ್ಲ ಅದರಲ್ಲಿ ಬ್ಯಾಟರಾಯನಪುರ ಕ್ಷೇತ್ರವು ಒಂದು.

2023 ಚುನಾವಣೆಗೆ ಅಭ್ಯರ್ಥಿಗಳ ಪೈಪೋಟಿ

2023 ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಕೃಷ್ಣ ಪೈರೇಗೌಡರು ಕಾಂಗ್ರೆಸ್ ಅಭ್ಯರ್ಥಿ ಆಗೋದು ಖಚಿತ, ಯಾವುದೇ ಸಂದೇಹವಿಲ್ಲ. ಆಗಲೇ ಅಧಿಕೃತವಾಗಿ ಘೋಷಿಸಲಾಗಿದೆ.  ಇನ್ನು ಬಿಜೆಪಿ ಪಕ್ಷವನ್ನು ನೋಡಿದರೆ ಅದರ ಟಿಕೆಟ್ ಕೊಡೋದು ಯಾರ್ ಗೆಲ್ತಾರೆ ಅವರಿಗೆ.  ಬಿಜೆಪಿಯಲ್ಲಿ ಒಂದು ಚರ್ಚೆ ಇದೆ. ಫಲಿತಾಂಶ ಬಂದ ಮೇಲೆ ಬಹುಮತಕ್ಕೆ ಕಡಿಮೆಯಾದಾಗ  ನಾಯಿನೂ ನರಿನೂ ಕರ್ಕೊಂಡ್ ಬಂದು ಆಪರೇಷನ್ ಕಮಲ ಮಾಡೂ ಬದಲಾಗಿ ತಾಕತ್ತಿರುವವರಿಗೆ ಟಿಕೆಟ್ ಕೊಡಬೇಕು, ಗೆಲ್ಲೋರಿಗೆ ಟಿಕೆಟ್ ಕೊಡಬೇಕು ಅಂತ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ಬಿಜೆಪಿ ಹೇಳುತ್ತೆ.  ಈಗ ಎಲ್ಲಾ ಬದಲಾಗಿದೆ, ಗೆಲುವು ಮಾನದಂಡ. ಹಿಂದೆ ವಾಜಪೇಯಿ ಕಾಲದ ಬಿಜೆಪಿ ಬೇರೆ ಇತ್ತು ನಿಷ್ಠಾವಂತ ಕಾರ್ಯಕರ್ತನಿಗೆ ಕೈಯಲ್ಲಿ ಒಂದು ಕಾಸು ದುಡ್ಡು ಇಲ್ದೆ ಇದ್ರೂ ಕೂಡ ಅವನಿಗೆ ಟಿಕೆಟ್ ಕೊಡ್ತಾ ಇದ್ರು. ಟಿಕೆಟ್ ಕೊಟ್ಟ ಮೇಲೆ ಅಭ್ಯರ್ಥಿಯನ್ನು ಚೆನ್ನಾಗಿ ತೊಳೆದು ತಮ್ಮ ದಾರಿಗೆ ತೆಗೆದು ಕೊಳ್ಳುತ್ತಿದ್ದರು. ಆದರೆ ಈಗಿನ ಪರಿಸ್ಥಿತಿಯೇ ಬೇರೆ.

ಈಗ ತಮೇಶ್ ಗೌಡ ಫುಲ್ ರೇಸ್ನಲ್ಲಿದ್ದಾರೆ ಬಿಜೆಪಿ ಟಿಕೆಟ್ ಬಹುತೇಕ ಕನ್ಫರ್ಮ್ ಅಂತ ಹೇಳಲಾಗುತ್ತಿದೆ. ಮತ್ತೊಂದು ಕಡೆ  ಏ ರವಿ ಅವರು ಮೂರು ಸಾರಿ ಸೋತರೂ ಕೂಡ ನನಗೆ ಮತ್ತೊಂದು ಸಾರಿ ಟಿಕೆಟ್ ಕೊಡಿ ಎಂದು ಕೋರಿಕೆ ಇಟ್ಟಿದ್ದಾರೆ. ಇವರ ಸಹೋದರ ಆರ್ ಅಶೋಕ್ ಎಷ್ಟರಮಟ್ಟಿಗೆ ಸಹಾಯ ಮಾಡುತ್ತಾರೋ ಕಾಯ್ದು ನೋಡಬೇಕು.  ಆರ್ ಅಶೋಕ್ 4ನೇ ಬಾರಿ ತನ್ನ ಸಹೋದರನಿಗೆ ಟಿಕೆಟ್ ಕೇಳುತ್ತಿದ್ದಾರೆ.

ಮಾಜಿ ಕಾರ್ಪೊರೇಟರ್ ಮುನಿಂದ್ರ ಕುಮಾರ್ ಕೂಡ ನನಗೂ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಗ್ರೌಂಡಲ್ಲಿ ಕಾಣ್ತಾ ಇರೋದು ತಮ್ಮೆಶ್ ಗೌಡ ಮಾತ್ರ. ಕೃಷ್ಣ ಬೈರೇಗೌಡರು ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದಿದ್ದರು ಆದರೆ ಈ ಬಾರಿ ಆ ಥರ ಆಗಬಾರದು ಅಂತ ಅವರು ತುಂಬಾ ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ವಾರ್ಡಗಳು

ಇಲ್ಲಿ ಜಕ್ಕೂರ್, ತನಿಸಂದ್ರ, ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ ಮತ್ತು ಕುವೆಂಪು ನಗರ ಬರುತ್ತವೆ ಇವು ಮುಂಚಿತವಾಗಿ ಇದ್ದ ಬಿಬಿಎಂಪಿ ವಾರ್ಡಗಳು. ಪುನರ್ ವಿಂಗಡನೆ ಆದಮೇಲೆ ಮತ್ತೆ ಬೇರೆ ಬೇರೆ ವಾರ್ಡಗಳು ಹುಟ್ಟಿಕೊಂಡಿವೆ. ಕಳೆದ ಚುನಾವಣೆಯಲ್ಲಿ ಮೂರು ಬಿಜೆಪಿ ಕಾರ್ಪೊರೇಟರಗಳು ಮತ್ತು ನಾಲ್ಕು ಕಾಂಗ್ರೆಸ್ ಕಾರ್ಪೊರೇಟರ್ ಗಳು ಇದ್ದರು.

ಹಿಂದಿನ ಚುನಾವಣೆಯಲ್ಲಿ ಪಡೆದ ಮತಗಳು

2008ರಲ್ಲಿ ಕೃಷ್ಣಬೈರೇಗೌಡರು ಇಲ್ಲಿ ಬಂದಾಗ ಮೊದಲ ಚುನಾವಣೆಯಲ್ಲಿ ಅವರು 60,979 ಮತಗಳನ್ನು ಕಳಿಸಿದ್ದರು. ಬಿಜೆಪಿ ಅಭ್ಯರ್ಥಿ ಎ ರವಿ 51627 ಮತಗಳನ್ನು ಗಳಿಸಿದರು ಹಾಗೆ ಜೆಡಿಎಸ್ ಅಭ್ಯರ್ಥಿ ಸಿ ನಾರಾಯಣಸ್ವಾಮಿ 21,598 ಮತಗಳನ್ನು ಗಳಿಸಿದ್ದರು. ಬಿ  ಎಸ್ ಪಿ ಅಭ್ಯರ್ಥಿ ಪಿ ಅಪ್ಪಯ್ಯ 3728 ಮತಗಳನ್ನು ಪಡೆದಿದ್ದರು. 2013ನೇ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡರು 96,125 ಮತಗಳನ್ನು ಗಳಿಸಿ ಜಯಭೇರಿ ಸಾಧಿಸಿದರು. ಬಿಜೆಪಿ ಅಭ್ಯರ್ಥಿ  ಎ ರವಿ 63,725 ಮತಗಳನ್ನು ಗಳಿಸಿದರು. ಜೆಡಿಎಸ್ ಅಭ್ಯರ್ಥಿ ಹನುಮಂತೇಗೌಡ  41,360 ಮತಗಳನ್ನು ಗಳಿಸಿದರು. 2018ರಲ್ಲಿ ಮೂರನೆ ಬಾರಿ ಕೃಷ್ಣ ಭೈರೇಗೌಡರು ಗೌಡರು ಹ್ಯಾಟ್ರಿಕ್ ಜಯಭೇರಿಯನ್ನು ಗಳಿಸಿದರು ಅವರು  114,964 ಮತಗಳನ್ನು ಗಳಿಸಿದರು  ಬಿಜೆಪಿ ಅಭ್ಯರ್ಥಿ ಎ ರವಿ  109,293 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ, ಚಂದ್ರ ಟಿಜಿ  22,490 ಮತಗಳನ್ನು ಪಡೆದಿದ್ದರು ಕೃಷ್ಣ ಬೈರೇಗೌಡರು ರಾಜಕೀಯಕ್ಕೆ ಬಂದಾಗಿನಿಂದ ಒಟ್ಟು ಐದು ಬಾರಿ ಶಾಸಕರಾಗಿದ್ದಾರೆ. ಎರಡು ಬಾರಿ ವೇಮಗಲ್ ಕ್ಷೇತ್ರದಿಂದ ಮತ್ತು ಮೂರು ಬಾರಿ ಬ್ಯಾಟರಾಯನಪುರ ಕ್ಷೇತ್ರದಿಂದ.   ಈಗ 6ನೇ ಬಾರಿ ಗೆಲುವನ್ನು ಸಾಧಿಸಬೇಕೆಂದು ಓಡಾಡುತ್ತಿದ್ದಾರೆ. ಜನರ ಮಂಡೇಟ್ ಹೇಗಿದೆ ಅಂತ ಗೊತ್ತಾಗೋದಿಲ್ಲ ಇಲ್ಲಿ ಪಕ್ಷ ನೋಡಿ ಮತ ಹಾಕುವ ಜನ ಹೆಚ್ಚಿದ್ದಾರೆ. ವ್ಯಕ್ತಿಯನ್ನು ನೋಡಿ ಮತ ಇಲ್ಲಿ ಯಾರೂ ಮತ ಕೊಡೋದಿಲ್ಲ.

ಲೋಕಸಭಾ ಚುನಾವಣೆ ಬಿಜೆಪಿಗೆ ಗೆಲುವು  

ಇನ್ನು ಲೋಕಸಭಾ ವಿಚಾರಕ್ಕೆ ಬಂದ್ರೆ ಇದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. 2009ರಲ್ಲಿ ಡಿ ಬಿ ಚಂದ್ರೇಗೌಡರು ಮಲೆನಾಡನ್ನು ಬಿಟ್ಟು ಬೆಂಗಳೂರು  ಉತ್ತರ ಕ್ಷೇತ್ರಕ್ಕೆ ಬಂದು ಚುನಾವಣೆ ಕಣದಲ್ಲಿ ಇಳಿದು ಗೆದ್ದು ಬಂದರು.  ಅವಾಗ ಡಿ ಬಿ ಚಂದ್ರೇಗೌಡರು 63,913 ಮತಗಳನ್ನು ಪಡೆದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಸಿ ಕೆ ಜಾಫರ್ ಷರೀಫ್ ಅವರು 59281 ಮತಗಳನ್ನು ಪಡೆದರು. ಜೆಡಿಎಸ್ ನ ಸುರೇಂದ್ರಬಾಬು (ಹೆಂಡತಿ  ವಿಚಾರದಲ್ಲಿ ಜೈಲಿಗೆ ಹೋಗಿ ಬಂದಂತಹ ವ್ಯಕ್ತಿ) 17,017 ಮತಗಳನ್ನು ಪಡೆದಿದ್ದರು . 2014ರಲ್ಲಿ ಮೋದಿ ಅಲೆಯು  ಪ್ರಾರಂಭ ಆಗ್ಬಿಟ್ಟಿತ್ತು, ಚಂದ್ರೇಗೌಡರಿಗೆ ಟಿಕೆಟ್ ಕೊಡಲಿಲ್ಲ ಅವಾಗ ಬಿಜೆಪಿಯಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಡಿ ವಿ ಸದಾನಂದ ಗೌಡರು ಅಭ್ಯರ್ಥಿಯಾದರು. ಡಿ ವಿ ಸದಾನಂದ ಗೌಡರು 1,17,795 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಸಿ ನಾರಾಯಣಸ್ವಾಮಿ 81,818 ಮತಗಳನ್ನು ಪಡೆಯುತ್ತಾರೆ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಜೀಮ್ 8661 ಮತಗಳನ್ನು ಪಡೆದಿದ್ದರು. ಆಪ್ ಅಭ್ಯರ್ಥಿ ಬಾಬು ಮ್ಯೂತೋ  4741 ಮತಗಳನ್ನು ಪಡೆದಿದ್ದರು.

2019 ಲೋಕಸಭಾ ಚುನಾವಣೆಯಲ್ಲಿ ಕೃಷ್ಣಭೈರೇಗೌಡ ಅವರು ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿದ್ದರು  ಡಿವಿ ಸದಾನಂದ ಗೌಡ ವಿರುದ್ಧವಾಗಿ, ಕೃಷ್ಣ ಬೈರೇಗೌಡ ಅವರು ಸೋತರು.  ಡಿವಿ ಸದಾನಂದ ಗೌಡರು 1,33,239 ಮತಗಳನ್ನು ಪಡೆದರೆ ಕೃಷ್ಣ ಬೈರೇಗೌಡರು 1,15,5592 ಮತಗಳನ್ನು ಪಡೆದರು. ಕೃಷ್ಣ ಬೈರೇಗೌಡರು ಬ್ಯಾಟರಾಯನಪುರ ಶಾಸಕರಿದ್ರು ಕೂಡ ಅವರು ಲೋಕಸಭಾ ಚುನಾವಣೆಯಲ್ಲಿ ಸೋತುಹೋದರು.

AAP ನ ಆತಂಕ

AAP (ಆಮ್ ಆದ್ಮಿ ಪಾರ್ಟಿ) 2013-14ರಲ್ಲಿ ದೇಶದ ತುಂಬಾ ಮೊದಲ ಬಾರಿ ಕಾಂಟೆಸ್ಟ್ ಮಾಡಿ ಆಪ್ ಅಭ್ಯರ್ಥಿ ಬ್ಯಾಟರಾಯಣಪುರದಲ್ಲಿ 4741 ಮತ ಪಡೆದುಕೊಂಡಿತ್ತು. ಮೊದಲ ಬಾರಿಗೆ ಇದೇನು ಕಡಿಮೆ ಸಂಖ್ಯೆಯಲ್ಲ. ನಿಮಗೆ ಒಂದು ನೆನಪಿರಲಿ ಬಿಜೆಪಿಗೆ ಪ್ರಬಲ ಎದುರಾಳಿ ಕಾಂಗ್ರೆಸ್ ಅಲ್ಲ, ಅದು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ದೆಹಲಿ ಮತ್ತು ಪಂಜಾಬನಲ್ಲಿ  ಅಧಿಕಾರದಲ್ಲಿದ್ದಾರೆ ಕರ್ನಾಟಕಕ್ಕೂ ಕಾಲಿಡುತ್ತಿದ್ದಾರೆ. ಹಾಗೆ ನೋಡಿದರೆ ನರೇಂದ್ರ ಮೋದಿಗೆ ಪ್ರಬಲವಾಗಿ ಎದುರೇಟು ಕೊಡುವ ಅಭ್ಯರ್ಥಿ ಅಂತ ಅಂದ್ರೆ ಅದು ಅರವಿಂದ ಕೇಜ್ರಿವಾಲ್ ಮಾತ್ರ. ಬರುವ ಚುನಾವಣೆಯಲ್ಲಿ ಆಪ್ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿ ಇರುವ ಸಂಭವ ಇದೆ. ಒಂದಿಷ್ಟು ಕ್ಷೇತ್ರಗಳನ್ನು AAP  ಹಾಳು ಮಾಡಬಹುದು ಖಚಿತ. ಆಮ್ ಆದ್ಮಿ ಪಕ್ಷ ಮೊದಲು ಬಂದಾಗ ಎಲ್ರು ಅಂದಿದ್ರು ಇದು ಬಿಜೆಪಿ ವೋಟುಗಳನ್ನು ಕಿತ್ತುಕೊಳ್ಳುತ್ತದೆ ಕಾಂಗ್ರೆಸ್ಗೆ ಲಾಭ ಆಗುತ್ತೆ ಅಂತ ಆದರೆ ಪರಿಸ್ಥಿತಿ ಹಾಗಲ್ಲ ಇದು ಕಾಂಗ್ರೆಸ್ ವೋಟುಗಳನ್ನು ಕಿತ್ತುಕೊಳ್ಳುತ್ತದೆ. ಕಾಂಗ್ರೆಸ್ಸನ್ನು ಸಾಯಿಸುತ್ತೆ, ಬಿಜೆಪಿನ ಸೋಲಿಸುತ್ತೆ. ಹೆಂಗೆ ಅಂದ್ರೆ ನಿಮಗೆ ಗೊತ್ತಿರಲಿ ದೆಹಲಿ ಚುನಾವಣೆಯಲ್ಲಿ 70 ಸೀಟ್ಗಳಲ್ಲಿ 67 ಸೀಟ್ ಪಡೆದುಕೊಂಡು ಫುಲ್ ಮೆಜಾರಿಟಿಯಲ್ಲಿ ಬಂದಾಗ, 67 ಸೀಟ್ ಗಳು AAP, 3 ಸೀಟಗಳು ಬಿಜೆಪಿಗೆ ಮತ್ತು ಕಾಂಗ್ರೆಸ್ಗೆ ಸೊನ್ನೆ. ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 62 ಆಪ್ 8 ಬಿಜೆಪಿ ಕಾಂಗ್ರೆಸ್ ಸೊನ್ನೆ , ಕಾಂಗ್ರೆಸ್ನ ಸಾಯಿಸುತ್ತೆ ಮತ್ತು ಬಿಜೆಪಿನ ಸೋಲಿಸುತ್ತೆ .  ಇನ್ನುಆಮ್ ಆದ್ಮಿ ಪಾರ್ಟಿ 2023 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ್ನು ಕೆಳಗೆ ಇಳಿಸಿ ಮೂರನೇ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ.

ಕ್ಷೇತ್ರ ಅಭಿವೃದ್ಧಿ

ಇನ್ನು ಕ್ಷೇತ್ರ ಅಭಿವೃದ್ಧಿ ವಿಚಾರಕ್ಕೆ ಬಂದರೆ ಕೃಷ್ಣ ಬೈರೇಗೌಡ ಮುಂಚೂಣಿಯಲ್ಲಿದ್ದಾರೆ. ಚುನಾವಣೆ ಹತ್ತಿರಕ್ಕೆ ಬಂದಾಗ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರು. ಕಳಪೆ ಕಾಮಗಾರಿ ಮಾಡಿಸಿ ಟೀಕೆಗೆ ಒಳಗಾದರು. ಎಲ್ಲೆಲ್ಲಿ ರಸ್ತೆ ಕಾಮಗಾರಿ ನಡೆಯುತ್ತದೆಯೋ ಅಲ್ಲಲ್ಲಿ ತಮ್ಮ ಭಾವಚಿತ್ರದ ಬ್ಯಾನರ್ ಹಾಕುವುದನ್ನು ಮರೆಯಲಿಲ್ಲ. ರಸ್ತೆ ಕಾಮಗಾರಿಗೆ ಮಾಡಿದ ಅರ್ಧದಷ್ಟು ಖರ್ಚನ್ನು ಬ್ಯಾನರ್ ಗಳಿಗೆ ಮಾಡಿದರೆಂದು ಕ್ಷೇತ್ರದ ಜನ ಮಾತಾಡುವಂತಾಯಿತು.ಕರೋನ ಸಮಯದಲ್ಲಿ ಮಾಡಿದ ಕೆಲಸವನ್ನು ಕ್ಷೇತ್ರದ ಜನ ಮೆಚ್ಚಿದ್ದಾರೆ
ಎ ರವಿಯವರು ಕೂಡ ಕರೋನ ಸಮಯದಲ್ಲಿ ಜನಪರ ಕೆಲಸ ಮಾಡಿದ್ದಾರೆ ಅದನ್ನು ಜನ ಕೂಡ ಮೆಚ್ಚಿದ್ದಾರೆ. ಇತ್ತೀಚಿಗೆ ನೆನಪಿಡುವ ಕಾರ್ಯಕ್ರಮವೆಂದರೆ ಗಂಗಾಜಲ ವಿತರಣೆ ಮಾಡಿದ್ದು. ಇದು ಚುನಾವಣೆಗೆ ಎಷ್ಟು ಸಹಾಯವಾಗುತ್ತೆ ಅಂತಾ ಅಂದಾಜಿಲ್ಲಾ. ತಮ್ಮೇಶ್ ಗೌಡ ಕ್ಷೇತ್ರದ ಜನರಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಮಾಡಿರುವ ಕಲ್ಯಾಣೋತ್ಸವ ಬ್ಯಾಟರಾಯಣಪುರದ ಸುತ್ತ ಮುತ್ತ ಭಾರಿ ಸುದ್ದಿ ಮಾಡಿತ್ತು. ಜನ ನೆನಪಿಟ್ಟುಕೊಂಡಿದ್ದಾರೆ. ಕೃಷ್ಣ ಬೈರೇಗೌಡ ಕ್ಷೇತ್ರದಲ್ಲಿ ಅಭಿವೃದ್ಧಿ ಜೊತೆಗೆ ಸೌ೦ಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರೊಡನೆ ಉತ್ತಮ ಸಂಪರ್ಕ ಹೊಂದಿದ್ದಾರೆ.  ಸಧ್ಯಕ್ಕೆ ಗೆಲುವು ಕೃಷ್ಣ ಬೈರೇಗೌಡರ ಸುತ್ತ ಮುತ್ತ ಓಡಾಡುತ್ತಿದೆ. ಅವರು ಅದನ್ನು ಹಿಡಿದು ಜೇಬಿಗೆ ಹಾಕೊಳ್ಬೇಕು ಅಷ್ಟೇ. ಬಿಜೆಪಿಗೆ ಪ್ಲಸ್ ಪಾಯಿಂಟ್ ಅಂದರೆ ಇಲ್ಲಿನ ಮತದಾರ ವ್ಯಕ್ತಿಯನ್ನು ನೋಡುವದಿಲ್ಲ ಪಕ್ಷವನ್ನು ಮಾತ್ರ ನೋಡುತ್ತಾರೆ ಆ ನಿಟ್ಟಿನಲ್ಲಿ ನೋಡಿದರೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ತುಂಬಾ ಹತ್ತಿರ. ಬಿಜೆಪಿಗೆ ಈ ಕ್ಷೇತ್ರದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಬೇಕಾಗಿರುವುದು ಭಾರಿ ಚಾಣಾಕ್ಷ ಅಭ್ಯರ್ಥಿ ಅಥವಾ ಟಿಕೆಟ್ ಸಿಕ್ಕಿರುವ ಅಭ್ಯರ್ಥಿಯ ಚಾಣಾಕ್ಷತನ. ಒಂದು ಚಿಕ್ಕ ಎಡವಟ್ಟು ಮಾಡಿದರೂ ಕೂಡಾ ಬಿಜೆಪಿ ಮತ್ತೆ ತನ್ನ ಸ್ಥಾನವನ್ನು ಕಳೆದುಕೊಳ್ಳುವದು ಖಚಿತ.
ಕಾದು ನೋಡಬೇಕು.

ಕ್ಷೇತ್ರದ ಅಭ್ಯರ್ಥಿಗಳು

ಬಿಜೆಪಿಯಿಂದ ತಮ್ಮೇಶಗೌಡ ಈ ಬಾರಿ ಟಿಕೆಟ್ ನನಗೆ ಎಂದು ಹೇಳಿಕೊಂಡು ಓಡಾಡ್ತಾ ಇದ್ದಾರೆ . ಏ  ರವಿ ಮೂರು ಸಾರಿ ಸೋತು ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.  ಬಿಜೆಪಿ ಅಧಿಕೃತವಾಗಿ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಈ ಕಡೆಗೆ ಕಾಂಗ್ರೆಸ್ಗೆ ಕೃಷ್ಣ ಭೈರೇಗೌಡರಿಗೆ ಟಿಕೆಟ್ ಫಿಕ್ಸ್  ಆಗಿದೆ. ತಮ್ಮೆಶ್ ಗೌಡರಿಗೆ ಹಿನ್ನೆಲೆ ಆರ್ RSS ಮತ್ತು ABVP  ಜೊತೆಗೆ  ವಿಜಯೇಂದ್ರ ಮತ್ತು ಯಡಿಯೂರಪ್ಪ ಜೊತೆಗೆ ಗೆಳೆತನ ಇವೆಲ್ಲ ಪ್ಲಸ್ ಪಾಯಿಂಟ್ ಆಗಬಹುದು. ಈ ಹಿನ್ನೆಲೆಯಲ್ಲಿ ತಮ್ಮೆಶ್ ಗೌಡರು ತುಂಬಾ ಖುಷಿಖುಷಿಯಾಗಿ ಕ್ಷೇತ್ರದಲ್ಲಿ ಓಡಾಡ್ಕೊಂಡಿದ್ದಾರೆ. ಬಿಜೆಪಿ ಯಿಂದ ಮುನೀಂದ್ರ ಕುಮಾರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮುನೀಂದ್ರ ಕುಮಾರ  ಜಕ್ಕೂರ ಕಾರ್ಪೊರೇಟರ್ ಆಗಿದ್ದರು.  ಅವರು ಕೂಡ ಟಿಕೆಟ್ ಕೇಳ್ತಿದ್ದಾರೆ ಆದರೆ ಪಾರ್ಟಿ ಗ್ರೌಂಡ್ ರಿಪೋರ್ಟ್ ಮೇಲೆ ಟಿಕೆಟ್ ಕೊಡುತ್ತೆ. ಕಾಂಗ್ರೆಸ್ ನಿಂದ ಕೃಷ್ಣ ಬೈರೇಗೌಡರ ಹೆಸರು ಅಧಿಕೃತವಾಗಿ ಪ್ರಕಟವಾಗಿದೆ. ಇನ್ನು AAP ಪಕ್ಷದಿಂದ ಲಾಯರ್ ಜಗದೀಶ್ ಅವರು ಕಾಂಟೆಕ್ಟ್ ಮಾಡ್ತಾರಂತ ಸುದ್ದಿ ಇತ್ತು ಅವರ ಹಾಗೆ ಪಕ್ಷ ಸೇರ್ಕೊಂಡ್ರು ಆಮೇಲೆ ಸುದ್ದಿನೇ ಇಲ್ಲ. ಇಲ್ಲಿ ಆಮ್ ಆದ್ಮಿ ಪಕ್ಷದಿಂದ ಉಮೇಶ್ ಬಾಬು ಹೆಸರು ಪ್ರಕಟವಾಗಿದೆ. BSP ಯಿಂದ ಸಂಪೂರ್ಣ ಗೌಡ ಸ್ಪರ್ದಿಸುತ್ತಿದ್ದಾರೆ. JDS ಕೂಡಾ ತನ್ನ ಅಭ್ಯರ್ಥಿಯನ್ನು ಘೋಷಿಸಬೇಕು.

ಕೃಷ್ಣ ಬೈರೇಗೌಡ ವರ್ಸಸ್ ಬಿಜೆಪಿ ತೊಗೊಂಡ್ರೆ  ಈ ವಾತಾವರಣ ತುಂಬಾ ಟಫ್ ಫೈಟ್ ಇದೆ.

ಜೆಡಿಎಸ್ ಆಮ್ ಆದ್ಮಿ ಪಕ್ಷ ಮತ್ತು ಬಿ ಎಸ್ ಪಿ ತೆಗೆದುಕೊಳ್ಳುವ ಮತಗಳಿಂದಲೇ ಗೆಲುವು ನಿರ್ಧಾರ

ಕೊನೆ ಮಾತು :

ಇಲ್ಲಿ ಆಮ್ ಆದ್ಮಿ ಪಕ್ಷ, ಜೆಡಿಎಸ್ ಮತ್ತು ಬಿ ಎಸ್ ಪಿ ಪಕ್ಷಗಳು ಪಡೆಯುವ ಅಥವಾ ಕಿತ್ತುಕೊಳ್ಳುವ ಮತಗಳ ಮೇಲೆ ಬ್ಯಾಟರಾಯನಪುರ ಕ್ಷೇತ್ರ ಯಾರಿಗೆ ಒಲಿಯುತ್ತೆ ಎನ್ನುವುದು ನಿರ್ಧಾರವಾಗುತ್ತೆ. ಇದೆ ವಿಷಯದಲ್ಲಿ ಬಿಜೆಪಿ ಅಭ್ಯರ್ಥಿ ತುಂಬಾ ಚಾಣಾಕ್ಷನಾಗಿರಬೇಕು.

ಪ್ರಜಾ ಟೈಮ್ಸ್

ವೆಬ್ ಸೈಟ್ : www.prajatimes.com


LEAVE A REPLY

Please enter your comment!
Please enter your name here