Home Blog

ಬ್ಯಾಟರಾಯನಪುರ ಈ ಸಲ ಕಾಂಗ್ರೆಸ್ ನ ಕೃಷ್ಣ ಬೈರೇಗೌಡರರಿಗೆ ಬಿಜೆಪಿ ಪ್ರತಿಸ್ಪರ್ಧಿ ತಮ್ಮೇಶ್ ಗೌಡ.

ನಗರದಲ್ಲಿ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಬ್ಯಾಟರಾಯನಪುರವು ಉತ್ತರ ಬೆಂಗಳೂರಿನಲ್ಲಿ ತುಲನಾತ್ಮಕವಾಗಿ ಹೊಸ ಕ್ಷೇತ್ರವಾಗಿದೆ. ಇದು ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೋಡಿಗಹಳ್ಳಿ, ವಿದ್ಯಾರಣ್ಯಪುರ, ದೊಡ್ಡ ಬೊಮ್ಮಸಂದ್ರ ಮತ್ತು ಕುವೆಂಪು ನಗರ ವಾರ್ಡ್‌ಗಳನ್ನು ಒಳಗೊಂಡಿದೆ.

ಗಾಲಿ ಆಂಜನೇಯ ದೇವಸ್ಥಾನಕ್ಕೆ ಹೆಸರುವಾಸಿಯಾದ ಈ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳೊಂದಿಗೆ ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶಗಳ ಮಿಶ್ರಣವಾಗಿದೆ. ಮಾಲ್‌ಗಳು, ಹೊಸ ಕಾಲೇಜುಗಳು ಮತ್ತು ವಸತಿ ಪ್ರದೇಶಗಳ ಜೊತೆಗೆ ಇತರ ಆದಾಯದ ಲೇಔಟ್‌ಗಳು ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ, ಬಹುತೇಕ ಹಳ್ಳಿಯಂತಹ ಪ್ರದೇಶಗಳು ಉತ್ತಮ ಮೂಲಸೌಕರ್ಯಗಳ ಕೊರತೆಯೊಂದಿಗೆ ಶ್ರೀಮಂತ ಪ್ರದೇಶಗಳ ಅಸಮ ಮಿಶ್ರಣವನ್ನು ನೀವು ಕಾಣುತ್ತೀರಿ . ಉತ್ತಮವಾಗಿ ಅಭಿವೃದ್ಧಿ ಹೊಂದಿದ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳ ವಿರುದ್ಧ ಸಮತೋಲಿತವಾಗಿವೆ. ವೊಕ್ಕಲಿಗರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಮತದಾರರನ್ನು ರೂಪಿಸುತ್ತಾರೆ. ಈ ಕ್ಷೇತ್ರವು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಏರೋಸ್ಪೇಸ್ ಪಾರ್ಕ್‌ಗೆ ಹೋಗುವ ಹೆದ್ದಾರಿಯಿಂದ ಸುತ್ತುವರಿದಿದೆ.

ಈ ಪ್ರದೇಶವು ಸಾಮಾನ್ಯ ಸಮಸ್ಯೆಗಳಾದ ಹದಗೆಟ್ಟ ರಸ್ತೆಗಳು, ಸರಿಯಾದ ಚರಂಡಿ ಕೊರತೆ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದೆ. ಈ ಹಲವು ಕಂದಾಯ ಕ್ಷೇತ್ರಗಳಲ್ಲಿ ಈ ಸಮಸ್ಯೆಗಳು ಗರಿಗೆದರಿವೆ. ಭದ್ರಪ್ಪ ಲೇಔಟ್‌ನಂತಹ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಎಲ್ಲಾ ಪಕ್ಷಗಳು “ಸಮಗ್ರ ಅಭಿವೃದ್ಧಿ” ಎಂದು ಭರವಸೆ ನೀಡಿದ್ದರೂ ಸಹ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿವೆ, ರೈತರ ಜೀವನೋಪಾಯವನ್ನು ತಿನ್ನುತ್ತಿವೆ ಎಂದು ಆರೋಪಿಸಲಾಗಿದೆ .

ಕರ್ನಾಟಕದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಅಧಿಕಾರ ವಿಚಾರದಲ್ಲಿ ಕಾಂಗ್ರೆಸ್ ಇಲ್ಲಿ ಹ್ಯಾಟ್ರಿಕ್ ಭಾರಿಸಿದೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2001 ರ ಭಾರತೀಯ ಜನಗಣತಿ ಪ್ರಕಾರ ಸುಮಾರು ಎರಡು ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಪುರಷರು ಶೇಕಡಾ 52ರಷ್ಟಿದ್ದಾರೆ. ಮಹಿಳೆಯರು ಶೇಕಾಡ 48ರಷ್ಟಿದ್ದಾರೆ. ಈ ಕ್ಷೇತ್ರ ಸರಾಸರಿ ಶೇಕಡಾ 73ರಷ್ಟು ಸಾಕ್ಷರತೆ ಹೊಂದಿದೆ. ಇಲ್ಲಿ ಸಾಕ್ಷರತೆ ಪ್ರಮಾಣ ತುಸು ಹೆಚ್ಚು ಎನ್ನಬಹುದು.

ಪ್ರತಿ ವಿಧಾನಸಭಾ ಚುಣಾವಣೆ ಬಂದಾಗಲೂ ಸಹ ಕರ್ನಾಟಕದ ಯಾವುದೇ ಕ್ಷೇತ್ರದಲ್ಲೂ ಮತದಾರರ ಒಲವು, ಪಕ್ಷಗಳ ಗೆಲವನ್ನು ಮುಖ್ಯವಾಗಿ ರಾಜಕೀಯ ಬೆಳವಣಿಗೆಗಳನ್ನು ಊಹಿಸಲು ಸಾಧ್ಯವಿಲ್ಲ. ಸದ್ಯ ಬ್ಯಾಟರಾಯಪುರದಲ್ಲೂ ಅಷ್ಟೇ, ಇಲ್ಲಿ 2008ರಿಂದಲೂ ಕಾಂಗ್ರೆಸ್‌ ಬಹುಮತ ಗಳಿಸುವ ಮೂಲಕ ಅಧಿಕಾರ ಗದ್ದುಗೆ ಏರಿದೆ. 2023ರ ಚುನಾವಣೆಯಲ್ಲಿ ಅದನ್ನು ಹಾಗೇಯೆ ಕಾಪಾಡಿಕೊಳ್ಳುವ ಸವಾಲು ಕಾಂಗ್ರೆಸ್‌ ನಾಯಕರ ಮೇಲಿದೆ.

ಬ್ಯಾಟರಾಯನಪುರ ಕ್ಷೇತ್ರದ ರಾಜಕೀಯ ಹಿನ್ನೆಲೆ

ಸತತ ಮೂರು ಬಾರಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹ್ಯಾಟ್ರಿಕ್ ಭಾರಿಸಿದೆ. ಕೈ ನಾಯಕ ಕೃಷ್ಣ ಬೈರೇಗೌಡ ಅವರು 2008ರಿಂದಲೂ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ರವಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಬೀಗಿದ್ದರು. ಆದರೆ ಬಿಜೆಪಿ (5671) ಕಡಿಮೆ ಅಂತದಿಂದ ಸೋತಿದೆ. ನಿರಂತರವಾಗಿ ಮೂರು ಸಲ ಕೃಷ್ಣಬೈರೇಗೌಡಚುನಾಯಿತರಾಗಿದ್ದಾರೆ.

ಕಾಂಗ್ರೆಸ್‌ ಪ್ರಬಲ ಪೈಪೋಟಿ ಒಡ್ಡಲು ಬಿಜೆಪಿ ಸಿದ್ಧತೆ

ಕಾಂಗ್ರೆಸ್ ಭದ್ರಕೋಟೆಯಾಗಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ವರ್ಷಗಳಿಂದಲೂ ಅಧಿಕಾರ ಹಿಡಿಯಲು ಹವಣಿಸುತ್ತಿದೆ. 2018ರಲ್ಲಿ ಇನ್ನೇನು ಕ್ಷೇತ್ರ ಬಿಜೆಪಿ ಪಾಲಾಯಿತು ಎನ್ನುವಷ್ಟರಲ್ಲಿ ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿದೆ. ಮರಳಿ ಯತ್ನವ ಮಾಡು ಎಂಬಂತೆ ಈ ಭಾರಿ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕೇ ತೀರಲು ಬಿಜೆಪಿ ನಾಯಕರು ಚಿತ್ತ ನೆಟ್ಟಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ನಾಯಕರು, ಕಾರ್ಯಕರ್ತರ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಈ ಸಲ ಅತ್ಯಧಿಕ ಸ್ಥಾನ ಗೆಲ್ಲುವ ಉತ್ಸಾಹ ತೋರುತ್ತಿರುವ ಜೆಡಿಎಸ್ ಸಹ ಸಿದ್ಧತೆ ಆರಂಭಿಸಿರುವುದು ಗೊತ್ತಾಗಿದೆ.

ಬ್ಯಾಟರಾಯನಪುರ: ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ

ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಗೂ ಮುಸ್ಲಿಂ ಸಮುದಾಯದದ ಮತಗಳು ಹೆಚ್ಚಿವೆ. ಅವರೇ ಇಲ್ಲಿ ನೀರ್ಣಾಯಕರು ಎನ್ನಬಹುದು. ಮೂಲ ನಿವಾಸಿಗಳ ಸಂಖ್ಯೆಯಷ್ಟೇ ಇಲ್ಲಿ ವಲಸಿಗರು ಇದ್ದಾರೆ. ಮುಖ್ಯವಾಗಿ ಇಲ್ಲಿ ಎಲ್ಲ ಜಾತಿ ಜನಾಂಗದವರು ಇದ್ದಾರೆ. ಅಲ್ಲದೇ ಹಿಂದಿ, ತೆಲುಗು, ತಮಿಳು, ಅಲ್ಪಸಂಖ್ಯಾತರು ಇದ್ದಾರೆ. ಕಾಂಗ್ರೆಸ್‌ ಮುಸ್ಲಿಂ ಓಲೈಕೆ ಹೆಚ್ಚು ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು
ಕಾಂಗ್ರೆಸ್ ಹಾಲಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಆರೋಪಗಳು ಇವೆ. ಈ ಸಲ ಕೃಷ್ಣ ಬೈರೇಗೌಡರೇ ಕೈ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದಿದ್ದಾರೆ . ಬಿಜೆಪಿಯಿಂದ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಎ. ರವಿ ಯವರನ್ನು ಬಿಜೆಪಿ ಕೈ ಬಿಟ್ಟಿದೆ ಯಡಿಯೂರಪ್ಪ ನವರ ಆತ್ಮೀಯ ಎಂದು ಹೇಳಲಾಗುತ್ತಿರುವ ತಮ್ಮೇಶ್ ಗೌಡ ಇವರಿಗೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಕಟಿಸಿದೆ. ಒಕ್ಕಲಿಗರ ಮತ ಸೆಳೆಯಲು ಮುಂದಾಗಿರುವ ಜೆಡಿಎಸ್ ನಿಂದ ಸ್ಥಳಿಯ ನಾಯಕ ವೇಣುಗೋಪಾಲ್ ಅವರನ್ನು ಕಣಕ್ಕಿಳಿಸಿದೆ. ಆಮ್ ಆದ್ಮಿ ಪಕ್ಷ (AAP) ದಿಂದ ಉಮೇಶ್ ಬಾಬು ಸ್ಪರ್ದಿಸುತ್ತಿದ್ದಾರೆ ಇನ್ನು ಮಾಯಾವತಿಯವರ ಬಹುಜನ ಸಮಾಜ ಪಕ್ಷದಿಂದ ಸಂಪೂರ್ಣ ಗೌಡ ಸ್ಪರ್ದಿಸುತ್ತಿದ್ದಾರೆ

2008 ರಲ್ಲಿ ಒಟ್ಟು ಮತದಾರರ ಸಂಖ್ಯೆ: 1,41,793.
2013 ರಲ್ಲಿ ಒಟ್ಟು ಮತದಾರರ ಸಂಖ್ಯೆ: 2,08,380 ನಲ್ಲಿ
ಪ್ರಸ್ತುತ ನೋಂದಾಯಿತ ಮತದಾರರ ಒಟ್ಟು ಸಂಖ್ಯೆ: 4,19,694.

ಪ್ರಜಾ ಟೈಮ್ಸ್

www.prajatimes.com

ನರೇಂದ್ರ ಮೋದಿ ರೋಡ್ ಶೋ ಮಾಡಿದ ಮೋಡಿ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ: ಸಮೀಕ್ಷೆ

ಬೆಂಗಳೂರು, ಮೇ 08: ಪ್ರಜಾ ಟೈಮ್ಸ್ ಪ್ರತ್ತೇಕವಾಗಿ ನಡೆಸಿದ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರೋಡ್ ಶೋ ಮಾಡಿದ ಮೋಡಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ ಎಂದು ಕರ್ನಾಟಕದ ಬಹುತೇಕ ಜನರು ಹೇಳಿದ್ದಾರೆ.

ಕರ್ನಾಟಕ ಚುನಾವಣೆ ಸಂಬಂಧ ಬಿಜೆಪಿ ಪಕ್ಷ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ರೋಡ್ ಶೋಗೆ ಬೆಂಗಳೂರು ನಗರ ಸಾಕ್ಷಿಯಾಗಿದೆ. ರೋಡ್ ಶೋ ನಿಂದ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಹೊಸ ಉತ್ಸಾಹ ಬಂದಿದೆ. ನಗರದ ತುಂಬಾ ಬಿಜೆಪಿ ಮತ್ತು ಬಜರಂಗ್ ದಳದ ಧ್ವಜಗಳು ರಾರಾಜಿಸಿದವು. ಮಹಿಳೆಯರು ಮಕ್ಕಳು ಅತೀ ಉತ್ಸಾಹದಿಂದ ನರೆಂದ್ರ ಮೋದಿಯವರನ್ನು ನೋಡಲು ಬಂದಿದ್ದರು. ಎಲ್ಲೆಲ್ಲೂ ಮೋದಿ ಮೋದಿ ಮೋದಿ ಎಂಬ ಕೂಗು ಬೆಂಗಳೂರಿನಾದ್ಯಂತ ಮೊಳಗಿತು.  ಜೆ ಪಿ ನಗರದ ಸೋಮೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂ ನಲ್ಲಿ ಮುಕ್ತಾಯಗೊಂಡಿತು. 

ನರೇಂದ್ರ ಮೋದಿಯವರನ್ನು ನೋಡಲು ಕಿಕ್ಕಿರಿದ ಜನಸಂದಣಿ ಬೆಂಗಳೂರಿನ ಜಯನಗರದಲ್ಲಿ ಕಂಡು ಬಂದ ದೃಶ್ಯ

ಮುಂಚಿತವಾಗಿ 7ನೇ ಮೇ ರವಿವಾರದಂದು ಆಯೋಜಿಸಲಾದ ರೋಡ್ ಶೋ ದ್ವಿತೀಯ PU ವಿದ್ಯಾರ್ಥಿಗಳು NEET ಪರೀಕ್ಷೆಯನ್ನು ಬರೆಯುತ್ತಿರುವ ಕಾರಣ  ಶನಿವಾರ ದಿನ ಅಂದರೆ ಒಂದು ದಿನ  ಹಿಂದಕ್ಕೆ ಹಾಕಿದರು. ಯಾವ ಒಬ್ಬ ವಿದ್ಯಾರ್ಥಿಗೂ ಕೂಡ ಪರೀಕ್ಷೆಗೆ ತೊಂದರೆಯಾಗಬಾರದೆಂದೋ ಪ್ರಧಾನಿ ಮೋದಿ ಹೇಳಿಕೆ ಕೊಟ್ಟಿದ್ದರು.  ಹೆಲಿಕ್ಯಾಪ್ಟರ ನಿಂದ ಲೊಯೆಲ್ಲಾ ವಿದ್ಯಾ ಸಂಸ್ಥೆ ಗೆ ಬಂದಿಳಿದ ಪ್ರಧಾನಿಯನ್ನು ಸಂಸದ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ  ಶಾಸಕ ಸತೀಶ್ ರೆಡ್ಡಿ ಮತ್ತು ಇನ್ನಿತರ ಗಣ್ಯರು ಸ್ವಾಗತ ಮಾಡಿಕೊಂಡರು.ಬೆಂಗಳೂರು ದಕ್ಷಿಣ ಭಾಗದ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ಜೊತೆಗೆ ತೆರೆದ ವಾಹನದಲ್ಲಿದ್ದರು. ಸುಮಾರು 10.30 ನಿಮಿಷಕ್ಕೆ ರೋಡ್ ಶೋ ಪ್ರಾರಂಭವಾಯಿತು.ರಸ್ತೆ ಯುದ್ದಕ್ಕೂ ಭಾರಿ  ನೂಕು ನುಗ್ಗಲು ಇದ್ದರೂ ಕೂಡ ಮಕ್ಕಳು , ಮಹಿಳೆಯರನ್ನೊಳಗೂಡಿ ಎಲ್ಲರೂ ಹರ್ಷೋದ್ಗಾರವನ್ನು ವ್ಯಕ್ತ ಪಡಿಸಿದರು.

 ಜೆಪಿ ನಗರದ ಬ್ರಿಗೇಡ್‌ ಮಿಲೇನಿಯಂನ ಸೋಮೇಶ್ವರ ಭವನದಿಂದ ಆರಂಭವಾದ ವರ್ಣರಂಜಿತ ರೋಡ್‌ ಶೋ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ಅಂತ್ಯವಾಯಿತು. ಮೋದಿ ರೋಡ್‌ ಶೋ ಸಾಗಿದ ದಾರಿಯುದ್ದಕ್ಕೂ ಜನ ಅದ್ಧೂರಿ ಸ್ವಾಗತವನ್ನು ಕೋರಿದರು. ರೋಡ್‌ ಶೋದುದ್ದಕ್ಕೂ ಮೋದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್‌ ಸಾಥ್‌ ನೀಡಿದರು.ಈ ಸಂದರ್ಭದಲ್ಲಿ ಆರ್ ಅಶೋಕ್ ಮಾತನಾಡಿ ಮೋದಿಯವರ ರೋಡ್ ಶೋ ದಿಂದಾಗಿ ಬಿಜೆಪಿ ಬೆಂಗಳೂರು ನಗರದಲ್ಲಿ ಇನ್ನೂ 7 ರಿಂದ 8 ಹೆಚ್ಚು ಶಾಸಕ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ್ ವ್ಯಕ್ತ ಪಡಿಸಿದರು.

ಪೋಷಕರು ನರೇಂದ್ರ ಮೋದಿ ಅವರನ್ನು ನೋಡಲು ಮಗುವನ್ನು ಮೇಲಕ್ಕೆ ಎತ್ತಿರುವುದು

ಶ್ರೀ ಸೋಮೇಶ್ವರ ಸಭಾ ಭವನದಿಂದ ರೋಡ್‌ ಶೋ ಪ್ರಾರಂಭವಾಗಿದ್ದು, ಜೆಪಿ ನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಮೈಸೂರು ರೋಡ್‌ ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರ ಮಠ ಚೌಕ, ನವರಂಗ್‌ ಸರ್ಕಲ್‌, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ವೃತ್ತ, 18ನೇ ಅಡ್ಡ ರಸ್ತೆ ಜಂಕ್ಷನ್, ಸಂಪಿಗೆ ರಸ್ತೆ ಮೂಲಕ ಸಾಗಿ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ರೋಡ್‌ ಶೋ ಅಂತ್ಯವಾಯಿತು. ರಸ್ತೆಯ ಇಕ್ಕೇಲಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಡಲು ಜನಸಾಗರವೇ ನಿಂತಿದ್ದು ಕಂಡು ಬಂತು.

ಪೊಲೀಸ್​ ಕಂಡಿಷನ್ಸ್​:

ಮೋದಿ ರೋಡ್​ ಶೋ ಮಾರ್ಗದಲ್ಲಿರುವ ಮನೆ, ಅಪಾರ್ಟ್‌ಮೆಂಟ್, ಮಳಿಗೆಗಳಿಗೆ ಪೂರ್ವ ವಿಭಾಗ ಡಿಸಿಪಿಯವರಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಮನೆ, ಮಳಿಗೆಗಳ ಮೇಲೆ ಅಪರಿಚಿತರನ್ನು ಸೇರಿಸುವಂತಿಲ್ಲ. ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ಮಾಹಿತಿ ಕೊಡಬೇಕು ಎಂದು ಹೇಳಲಾಗಿತ್ತು.

ಮಹಿಳೆಯೊಬ್ಬಳು ಅತೀ ಉತ್ಸಾಹದಿಂದ ಮೂಕವಿಸ್ಮಿತಳಾದ ಚಿತ್ರ

ಕಂಪನಿ, ಕಚೇರಿ, ಮಳಿಗೆಗಳಲ್ಲಿ ಸಿಬ್ಬಂದಿ ವಿಳಾಸ, ಪೋನ್ ನಂಬರ್ ಸಂಗ್ರಹಿಸಬೇಕು. ಅಪರಿಚಿತ ವ್ಯಕ್ತಿಗಳು ಬಂದರೆ ಕೂಡಲೇ ಮಾಹಿತಿ ನೀಡಬೇಕು. ಗಣ್ಯ ವ್ಯಕ್ತಿಗಳ ಮೇಲೆ ಹೂ ಸೇರಿ ಯಾವುದೇ ವಸ್ತು ಎಸೆಯುವುದು ನಿಷೇಧ ಎಂದು ನೋಟಿಸ್ ಮೂಲಕ ಸೂಚನೆ ನೀಡಲಾಗಿದೆ.

ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ಅಪಾರ್ಟ್ಮೆಂಟ್ ನ ಕಾರಿಡಾರ್ ನಲ್ಲಿ ನಿಂತು ಉತ್ಸಾಹದಿಂದ ವೀಕ್ಷಿಸುತ್ತಿರುವ ಚಿತ್ರ

ಬೆಂಗಳೂರಿನ ಜನತೆ ಅತೀ ಉತ್ಸಾಹದಲ್ಲಿ ಮೋದಿಯವರನ್ನು ಸ್ವಾಗತಿಸಿ ಖುಷಿ ಪಟ್ಟರೆ ವಿರೋಧ ಪಕ್ಷಗಳು ಮೋದಿ ಬಂದು ಸಾರ್ವಜನಿಕರಿಗೆ ತೊಂದರೆ ಮಾಡಿದರೆಂದು ಬೊಗಳೆ ಬಿಡುತ್ತಿದ್ದರು. ಎರಡು ದಿನ ನಡೆದ ರೋಡ್ ಶೋನಲ್ಲಿ ಸುಮಾರು ೨೦ ಲಕ್ಷ ಜನರು ಪಾಲ್ಗೊಂಡಿದ್ದರೆಂದು ವರದಿಯಾಗಿದೆ.

ಬಿಜೆಪಿಯ ನ್ಯಾಷನಲ್ ಜನರಲ್ ಸೆಕ್ರೆಟರಿ B L ಸಂತೋಷ್ ಅವರು ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ ಎಂದು ಹೇಳಿದ್ದಾರೆ

ಬ್ಯಾಟರಾಯನಪುರ ಕ್ಷೇತ್ರ : ಗೆಲುವಿಗೆ ಹತ್ತಿರ ಬಂದಿರುವ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ.

ಪ್ರತಿ ವಿಧಾನಸಭಾ ಚುಣಾವಣೆ ಬಂದಾಗಲೂ ಸಹ ಕರ್ನಾಟಕದ ಯಾವುದೇ ಕ್ಷೇತ್ರದಲ್ಲೂ ಮತದಾರರ ಒಲವು, ಪಕ್ಷಗಳ ಗೆಲವನ್ನು ಮುಖ್ಯವಾಗಿ ರಾಜಕೀಯ ಬೆಳವಣಿಗೆಗಳನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಚಿತ್ರಣವೇ ಬೇರೆಯಾಗಿದೆ.

ಮೊದಮೊದಲು ಇದು ಕಾಂಗ್ರೆಸ್ ನ ಭಧ್ರಕೋಟೆ ಭಧ್ರಕೋಟೆ ಎಂದು ಕೊಗುತ್ತಿರುವವರು ಈಗ ತೆಪ್ಪಗೆ ಕುಳಿತಿದ್ದಾರೆ. ಕಾಂಗ್ರೆಸ್ ನ ಭದ್ರಕೋಟೆ ಈ ಬಾರಿ ಛಿದ್ರ ಛಿದ್ರವಾಗಿ ಹೋಗುವಂತೆ ಕಾಣುತ್ತಿದೆ.

ಮ್ಮೇಶ್ ಗೌಡ ಜೊತೆಗೆ ಪ್ರಚಾರದಲ್ಲಿ ಭಾಗಿಯಾದ ಏ ರವಿ ಮತ್ತು ಮುನೀಂದ್ರ

ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರು ಬರುತ್ತಿರುವ ಭರಾಟೆ ಮತ್ತು ವೇಗ ಕಂಡು ಕಾಂಗ್ರೆಸ್ ನ ಕಾರ್ಯಕರ್ತರಲ್ಲಿ ಭಾರಿ ಕಸಿವಿಸಿ ಉಂಟುಮಾಡಿದೆ. ಮೊದಮೊದಲು ಏ ರವಿ ಹಾಗು ಮುನೀಂದ್ರ  ಅವರೂ ಕೂಡ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿರುವುದರಿಂದ ಅವರಿಗೆ ಅಸಮಾಧಾನವಿದೆ ಇಬ್ಬರೂ ತಮ್ಮೇಶ್ ಗೌಡರಿಗೆ ಬೆಂಬಲ ಕೊಡುವುದಿಲ್ಲ ತಮ್ಮೇಶ್ ಗೌಡರಿಗೆ ಪಕ್ಷದದಲ್ಲಿಯೇ ಬೆಂಬಲದ ಕೊರತೆಯಾಗುತ್ತದೆ ಎಂದು ಎಲ್ಲರೂ ಮಾತಾಡಿಕೊಂಡಿದ್ದರು. ಏ ರವಿ ಹಾಗು ಮುನೀಂದ್ರ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಾರೆ ಎಂದು ಬಹುತೇಕ ಜನರು ಮತ್ತು ಕಾರ್ಯಕರ್ತರು ಮಾತಾಡಿಕೊಂಡಿದ್ದರು.

ಮುನೀಂದ್ರ ಅವರ ಬೆಂಬಲಿಗರಂತೂ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಲು ಸೋಶಿಯಲ್ ಮೀಡಿಯಾಗಳ ಮೂಲಕ ಒತ್ತಾಯ ಮಾಡಿದ್ದರು ಅದರಂತೆ  ಏ ರವಿಯವರ ಬೆಂಬಲಿರೂ ಕೂಡ ರವಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಬಯಸಿದ್ದರು.

ಯೂನಿಯನ್ ಫೈನಾನ್ಸ್ ಮಿನಿಸ್ಟರ್ ಶ್ರೀಮತಿ ನಿರ್ಮಲಾ ಸೀತಾರಾಮನ ಅವರು ಬ್ಯಾಟರಾಯನಪುರ ಮತಕ್ಷೇತ್ರದ ಶೋಭಾ ಸಿಟಿ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆ ಮಾತನಾಡಿ ತಮ್ಮೇಶ್ ಗೌಡ ಪರವಾಗಿ ಮತ ಯಾಚಿಸಿದರು

ಆದರೆ ಕೆಲವೇ ದಿನಗಳಲ್ಲಿ ಬ್ಯಾಟರಾಯಣಪುರದ ಚಿತ್ರಣವೇ ಬದಲಾಗಿ ಹೋಗಿದೆ. ಏ ರವಿ ಹಾಗು ಮುನೀಂದ್ರ ತಮ್ಮ ವ್ಯಯಕ್ತಿಕ ವಿಚಾರಗಳನ್ನು ಬಿಟ್ಟು ತಮ್ಮೇಶ್ ಗೌಡರ ಬೆಂಬಲಕ್ಕೆ ನಿಂತಿದ್ದಾರೆ. ಪಕ್ಷವನ್ನು ಬೆಳೆಸಲು ಮುಂದಾಗಿದ್ದಾರೆ. ಇದರಿಂದ ತಮ್ಮೇಶ್ ಗೌಡರಿಗೆ ಆನೆ ಬಾಲವೇ ಬಂದಂತಾಗಿದೆ. ಮೊದಲೇ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಮತ್ತಷ್ಟು ಹುಮಸ್ಸು ಬಂದಿದೆ.  ಈ ಭಾರಿ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಬಿದ್ದೆ ಬೀಳುತ್ತೆ ಅನ್ನೋದು ಬಿಜೆಪಿ ಕಾರ್ಯಕರ್ತ ಹಾಗು ಇಲ್ಲಿಯ ಮತದಾರನ ಮಾತು. 

ತಮ್ಮೇಶ್ ಗೌಡರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿರುವ ಚಿತ್ರಗಳು

ತಮ್ಮೇಶ್ ಗೌಡರು ಕ್ಷೇತ್ರದಲ್ಲಿ ರಾತ್ರಿ ಹಗಲೆನ್ನದೆ ಪ್ರಚಾರದಲ್ಲಿ ತೊಡಗಿದ್ದಾರೆ. ಅದೇ ರೀತಿ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರೂ ಕೂಡ ಬಹು ಉತ್ಸಾಹದಿಂದ ಭಾರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೆ ರೇಂಜ್ ಲ್ಲಿ ಇನ್ನು ಕೆಲವೇ ದಿವಸ ಪ್ರಚಾರ ಕೈಗೊಂಡರೆ ಗೆಲುವು ಖಚಿತ.

ತಮ್ಮೇಶ್ ಗೌಡರ ಇನ್ನೊಂದು ಪ್ಲಸ್ ಪಾಯಿಂಟ್ ಅಂದರೆ ಕೇಸರಿ ಫೌಂಡೇಶನ್ ಮೂಲಕ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಮಾಜಿಕ ಕೆಲಸ. ಸಾಮಾಜಿಕ ಕಾರ್ಯಕರ್ತರಾಗಿ ಕ್ಷೇತ್ರದಲ್ಲಿ ಶಾಸಕರಾಗುವ ಮುಂಚೆಯೇ ಮನೆ ಮನೆಗೂ ಪರಿಚಿತರಾಗಿದ್ದಾರೆ.

ಕರೋನ ಸಮಯದಲ್ಲಿ ಕ್ಷೇತ್ರದಲ್ಲಿ ಅವರು ಜನರಿಗೆ ಮಾಡಿದ ಸಹಾಯ ಬಹುತೇಕ ಕ್ಷೇತ್ರದಲ್ಲಿ ಯಾರೂ ಮರೆಯಲಾರರು. ಮೊದಲಿನಿಂದಲೂ ABVP ಯಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಿರುವ ಇವರಿಗೆ ಅಭಿವೃದ್ಧಿಯ ಮೆಟ್ಟಿಲು ಗಳನ್ನು ಹೇಗೆ ಹತ್ತಬೇಕೆಂಬುದು ಚೆನ್ನಾಗಿ ತಿಳಿದುಕೊಂಡಿದ್ದಾರೆ. 2018ರಲ್ಲಿ ಇನ್ನೇನು ಕ್ಷೇತ್ರ ಬಿಜೆಪಿ ಪಾಲಾಯಿತು ಎನ್ನುವಷ್ಟರಲ್ಲಿ ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿತ್ತು. ಆದರೆ ಈ ಸಲ ಬಿಜೆಪಿ ಭಾರಿ ಅಂತರದಿಂದ ಗೆಲುವು ಸಾಧಿಸಲು ಉತ್ಸುಕತೆಯಿಂದ ಕಾದು ಕುಳಿತಿದೆ.

ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿರುವುದು

ನರೇಂದ್ರ ಮೋದಿ ಯಾವತ್ತೂ ಹೇಳುವ ಮಾತೆಂದರೆ “ಕಾರ್ಯಕರ್ತರೇ ನಮ್ಮ ಪಕ್ಷದ ಬೆನ್ನೆಲುಬು” ಎಂದು. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸ್ವಲ್ಪ ಸುತ್ತಾಡಿ ಬಂದರೆ ಅದು ನಿಜವೆನಿಸುತ್ತದೆ. ಇಲ್ಲಿಯ ಬಿಜೆಪಿ ಕಾರ್ಯಕರ್ತರು  ಉತ್ಸಾಹದಿಂದ  ಮಾಡುವ ಕೆಲಸ ನೋಡಿದರೆ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರು ಗೆಲುವಿಗೆ ತುಂಬಾ ಹತ್ತರವಿದ್ದಾರೆ.

ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿರುವುದು

ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ ಕೊಡ ಕ್ಷೇತ್ರಕ್ಕೆ ತುಂಬಾ ಕೆಲಸ ಮಾಡಿದ್ದಾರೆ  ಮತ್ತು ಅವರ ದ್ರಷ್ಟಿಕೋನ.  ಅದರಲ್ಲಿ ಕೆಲವು ಯೋಜನೆಗಳು ಈ ರೀತಿ ಇದೆ.

೧) ಉತ್ತಮ ಶೈಕ್ಷಣಿಕ ಕೇಂದ್ರಗಳನ್ನುಸ್ಥಾಪಿಸುವುದು.

೨) ಉತ್ತಮ ಮಲ್ಟಿ ಸ್ಪೆಸಿಯಾಲಿಟಿ ಆಸ್ಪತ್ರೆ ಕಟ್ಟುವುದು.

೩) ಎಲ್ಲರಿಗೂ ಆರೋಗ್ಯ ವಿಮೆ ಒದಗಿಸುವುದು .

೪) ಗರ್ಭಿಣಿಯರಿಗೆ ಮುಂದುವರಿದ (ಅಡ್ವಾನ್ಸಡ್ )ಸ್ಕ್ಯಾನಿಂಗ್ ಸೆಂಟರ್ ಗಳನ್ನು ಸ್ಥಾಪಿಸುವುದು.

೫) ಕ್ಷೇತ್ರದಲ್ಲಿ ಮುಂದುವರೆದ (ಅಡ್ವಾನ್ಸಡ್ ) ರೋಗನಿರ್ಣಯ (ಡೈಗನೋಸ್ಟಿಕ್) ಸೆಂಟರ್ ಗಳನ್ನು ಸ್ಥಾಪಿಸಿವುದು.

೬) ಕ್ಷೇತ್ರದಲ್ಲಿ ನಿಯಮಿತ ಅರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುವುದು.

೭) ಸ್ವಯಂ ಸೇವಕ ವೈದ್ಯರ ಕೋಶ (ಸೆಲ್) ಪ್ರಾರಂಭಿಸಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಿಯಮಿತವಾಗಿ ಕಣ್ಣು, ದಂತ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಮಾಡುವದು.

೭) ಕ್ಷೇತ್ರದಲ್ಲಿ ಹೊಸ ಸ್ವಚ್ಛವಾದ ಟಾಯ್ಲೆಟ್ ಗಳನ್ನು ಕಟ್ಟುವುದು.

೮) ಪರಿಸರ ವ್ಯವಸ್ಥೆಗೆ ಅನುಗುಣವಾಗಿ ಕಸವನ್ನು ವಿಲೇವಾರಿ (ಡಿಸ್ಪೋಸ್) ಮಾಡುವುದು.

೯) ಹದಿನೈದು ವರ್ಷಗಳಿಂದ ಯಾರು ಕ್ಷೇತ್ರದಲ್ಲಿ ನೆಲಸಿರುತ್ತಾರೆ ಅವರಿಗೆ ಸರಕಾರದಿಂದ ಮನೆ ಮಾಡಿ ಕೊಡುವುದು.

Byatarayanapura MLA

ಇವೆಲ್ಲ ಅವರು ಮಾಡಬೇಕೆಂದಿರುವ ಎಲ್ಲರಿಗೂ ಮೆಚ್ಚುಗೆಯಾದ ಯೋಜನೆಗಳು. 

ಸದ್ಯಕ್ಕೆ ಕ್ಷೇತ್ರದಲ್ಲಿ ಬಹುತೇಕ ಎಲ್ಲ ವರ್ಗದ ಮತ್ತು ಎಲ್ಲ ಧರ್ಮದ ಮತದಾರರು ಬಿಜೆಪಿ ವಿಜಯೋತ್ಸವವನ್ನು ಸಂಭ್ರಮಿಸಲು ಕಾದು ಕುಳಿತಂತೆ ಕಾಣುತ್ತದೆ.

ವರದಿ : ವಿಕ್ರಮ

ಪ್ರಜಾ ಟೈಮ್ಸ್

www.prajatimes.com

ಕೊನೆ ಕ್ಷಣದ ಕೋಲಾಹಲ ಕನಕಪುರದಿಂದ D K ಸುರೇಶ ನಾಮಪತ್ರ,ಬಿಜೆಪಿ ಮತ್ತು ಕಾಂಗ್ರೆಸ್ ಕ್ಷೇತ್ರದ ​ಅಭ್ಯರ್ಥಿಗಳ ಬದಲಾವಣೆ.

ಕನಕಪುರ :ಇದೀಗ ಬಂದ ವರದಿಯ ಪ್ರಕಾರ ಬೆಂಗಳೂರು ಗ್ರಾಮೀಣ ಸಂಸದ D K ಶಿವಕುಮಾರ ಅವರ ಸಹೋದರ D K ಸುರೇಶ ಕಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಆಕಸ್ಮಿಕ D K ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತ ಗೊಂಡರೆ. D K ಸುರೇಶ ಅಭ್ಯರ್ಥಿಯಾಗಿ ಮುಂದುವರಿಯಲಿದ್ದಾರೆ. ಬಿಜೆಪಿಯ ಕೆಲವು ನಾಯಕರು ತಮ್ಮ ಸಹೋದರ D K ಶಿವಕುಮಾರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ ಇರುವಾಗಲೇ ಕೊನೆ ಕ್ಷಣದಲ್ಲಿ ಕಾಂಗ್ರೆಸ್, ​ ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ.

ಕೋಲಾರ: ಕರ್ನಾಟಕ ವಿಧಾನಸಭೆ ಚುನಾವಣೆಗೆ Karnataka Assembly Elections 2023) ನಾಮಪತ್ರ ಸಲ್ಲಿಸಲು ಇಂದು(ಏಪ್ರಿಲ್​ 20) ಕೊನೆ ದಿನವಾಗಿದ್ದು, ಈ ಕೊನೆ ಕ್ಷಣದಲ್ಲಿ ಕಾಂಗ್ರೆಸ್(Congress)​​ ಕೋಲಾರ ಜಿಲ್ಲೆಯ ಮುಳಬಾಗಿಲ ಅಭ್ಯರ್ಥಿಯನ್ನು ಬದಲಿಸಿದೆ. ಡಾ.ಬಿಸಿ ಮುದ್ದು ಗಂಗಾಧರ್ ಬದಲಿಗೆ ಆದಿನಾರಾಯಣ ಎನ್ನುವರಿಗೆ ಟಿಕೆಟ್​ ನೀಡಿದೆ. ತೀವ್ರ ಕಗ್ಗಂಟಾಗಿ ಉಳಿದಿದ್ದ ಮುಳಬಾಗಿಲು ಕ್ಷೇತ್ರಕ್ಕೆ ಅಳೆದು ತೂಗಿ ನಿನ್ನೆ ರಾತ್ರಿ ಅಷ್ಟೇ 5ನೇ ಪಟ್ಟಿಯಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಈ ಪಟ್ಟಿಯಲ್ಲಿ ಮುಳಬಾಗಿಲು ವಿಧಾನಸಭೆ ಕ್ಷೇತ್ರಕ್ಕೆ ಡಾ.ಬಿ.ಸಿ.ಮುದ್ದು ಗಂಗಾಧರ್ ಅವರನ್ನು ಫೈನಲ್​ ಮಾಡಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಆದ್ರೆ, ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್​ ಮುಳಬಾಗಿಲು ಅಭ್ಯರ್ಥಿಯನ್ನು ಬದಲಿಸಿದ್ದು, ಮುದ್ದು ಗಂಗಾಧರ್ ಬದಲಿಗೆ ಆದಿನಾರಾಯಣ ಎನ್ನುವರಿಗೆ ಮಣೆ ಹಾಕಿದೆ.

ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್​ ಅವರು ಮುಳಬಾಗಿಲು ಕ್ಷೇತ್ರಕ್ಕೆ ತಮ್ಮ ಬೆಂಬಲಿಗರಿಗೆ ಟಿಕೆಟ್​ ನೀಡುವಂತೆ ಮನವಿ ಮಾಡಿದ್ದರು. ಆದಿನಾರಾಯಣ ಅವರಿಗೆ ಟಿಕೆಟ್​ ನೀಡುವಂತೆ ಮನವಿ ಮಾಡಿದ್ದರು. ಆದ್ರೆ, ಹೈಕಮಾಂಡ್​ ಡಾ.ಬಿ.ಸಿ.ಮುದ್ದು ಗಂಗಾಧರ್ ಅವರಿಗೆ ಮಣೆ ಹಾಕಿತ್ತು. ಇದರಿಂದ ಕೊತ್ತನೂರು ಮಂಜುನಾಥ್ ಸೇರಿದಂತೆ ಸ್ಥಳೀಯ ನಾಯಕರು ತೀವ್ರ ಅಸಮಾಧಾನಗೊಂಡಿದ್ದರು. ಇದರಿಂದ ಎಚ್ಚೆತ್ತ ಕಾಂಗ್ರೆಸ್​ ಕೊನ್ ಕ್ಷಣದಲ್ಲಿ ಮುದ್ದು ಗಂಗಾಧರ್ ಅವರನ್ನು ಬದಲಿಸಿ ಆದಿನಾರಾಯಣ ಅವರನ್ನು ಅಂತಿಮ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

ನಿನ್ನೆ ಅಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧೆ ಮಾಡುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಬದಲಾವಣೆ ಮಾಡಿತ್ತು. ಈ ಹಿಂದೆ ಅಲ್ಲಿ ಮೊಹಮ್ಮದ್​ ಯೂಸುಫ್ ಸವಣೂರು ಅವರಿಗೆ ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಘೋಷಿಸಿತ್ತು. ಆದ್ರೆ, ನಿನ್ನೆ ಯಾಸೀರ್ ಅಹ್ಮದ್ ​ಖಾನ್​ ಪಠಾಣ್​ಗೆ ಟಿಕೆಟ್ ಘೋಷಣೆ ಮಾಡಿದೆ. ಇದೀಗ ಕೋಲಾರ ಜಿಲ್ಲೆಯ ಮುಳಬಾಗಿಲ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿದೆ.

ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಮತ್ತೊಂದು ರಣತಂತ್ರ: ಹೊಳೆನರಸೀಪುರದಲ್ಲಿ ರೇವಣ್ಣ ವಿರುದ್ಧ ಪ್ರೀತಂಗೌಡ ಸ್ಪರ್ಧೆ?

ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನವಾಗಿ. ಈ ಕೊನೆ ಕ್ಷಣದಲ್ಲಿ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಬಿಜೆಪಿ ಮತ್ತೊಂದು ರಣತಂತ್ರ ರೂಪಿಸಿದೆ. ಹೆಚ್​ಡಿ ರೇವಣ್ಣ ಠಕ್ಕರ್​ ನೀಡಲು ಬಿಜೆಪಿ ಮೆಗಾ ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.

ಹಾಸನ: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೆಲ ಅಚ್ಚರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹಾಗೇ ಅಚ್ಚರಕರ ಪ್ರಯೋಗಳನ್ನು ಮಾಡುತ್ತಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಹಾಗೂ ಕನಕಪುರದಲ್ಲಿ ಡಿಕೆ ಶಿವಕುಮಾರ್​ ವಿರುದ್ಧ ಆರ್.ಅಶೋಕ್​ ಅವರನ್ನು ಕಣಕ್ಕಿಸಿದೆ. ಇದೀಗ ಕೊನೆ ಕ್ಷಣದಲ್ಲಿ ಬಿಜೆಪಿ ಮತ್ತೊಂದು ರಣತಂತ್ರ ಹೆಣೆದಿದೆ. ಅದೇನೆಂದರೆ ಹಾಸನದ ಹೊಳೆನರಸೀಪುರ ಕ್ಷೇತ್ರದಲ್ಲಿ ಹೆಚ್​ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಂಗೌಡ ಅವರನ್ನು ಸ್ಪರ್ಧೆಗಿಳಿಸಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈಗಾಗಲೇ ಪ್ರೀತಂಗೌಡ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿನ್ನೆ (ಏಪ್ರಿಲ್ 19) ನಾಮಪತ್ರ ಸಲ್ಲಿಸಿದ್ದಾರೆ. ಇಂದು ಹೊಳೆನರಸೀಪುರ ಕ್ಷೇತ್ರಕ್ಕೂ ಸಹ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವೆಂಬಂತೆ ಚುನಾವಣಾ ಪ್ರಚಾರವನ್ನು ಬೇಗ ಮುಗಿಸಿ ಹೊಳೆನರಸೀಪುರದಲ್ಲಿ ನಾಮಿನೇಷನ್ ಮಾಡಬೇಕು ಎನ್ನುವ ಮಾತುಗಳನ್ನಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು….ಹಾಸನದ ಗುಡ್ಡೇನಹಳ್ಳಿ ಬಡಾವಣೆಯಲ್ಲಿ ಇಂದು(ಏಪ್ರಿಲ್ 20) ಬೆಳಗ್ಗೆ ಪ್ರಚಾರದ ವೇಳೆ ಕಾರ್ಯಕರ್ತ ರ ಜೊತೆ ಮಾತನಾಡಿದ ಪ್ರೀತಂಗೌಡ, ಹೊಳೆನರಸೀಪುರದಲ್ಲಿ ನಾಮಿನೇಷನ್ ಮಾಡಬೇಕು ಹಾಗಾಗಿ ಬೇಗ ಮುಗಿಸಿ ಎನ್ನುವ ಮಾತುಗಳನ್ನಾಡಿದ್ದಾರೆ. ಅಲ್ಲದೇ ಪ್ರಚಾರ ಕಾರ್ಯಕ್ರಮದಿಂದ ತರಾತುರಿಯಲ್ಲಿ ನಿರ್ಗಮಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೀತಂಗೌಡ, ನಮ್ಮ ಪಕ್ಷದ ವರಿಷ್ಠರು ರಣತಂತ್ರ ಮಾಡಿದಾರೆ. ಆ ತಂತ್ರ ಏನೆಂದು 10.30ಕ್ಕೆ(ಇಂದು ಬೆಳಗ್ಗೆ) ಹೇಳುತ್ತೇನೆ. ನಾಮಪತ್ರ ಸಲ್ಲಿಸುವುದು ಖಚಿತ. ಕಾದು ನೋಡಿ ಎಂದು ಹೇಳುವ ಮೂಲಕ ವಿಷಯವನ್ನು ನಿಗೂಢವಾಗಿ ಕಾಪಾಡಿಕೊಳ್ಳುತ್ತಲೇ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ ದೇವರಾಜೇಗೌಡ ಅವರ ಹೆಸರನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ಪ್ರಕಟಿಸಿತ್ತು. ಆದ್ರೆ, ಅದೇನಾಯ್ತೋ ಏನೋ ಹಾಸನ ಜಿಲ್ಲಾ ರಾಜಕೀಯದಲ್ಲಿ ದಿಢೀರ್ ಮಹತ್ವ ರಾಜಕೀಯ ಬೆಳವಣಿಗೆ ನಡೆದಿದ್ದು, ಅಂತಿಮವಾಗಿ ರೇವಣ್ಣ ವಿರುದ್ಧ ಪ್ರತೀಂಗೌಡ ಅವರನ್ನು ಕಣಕ್ಕಿಳಿಸುವ ತಂತ್ರಗಳು ನಡೆದಿವೆ

ಲೇಖನ : ವಿಕ್ರಮ ಎಚ್

ಪ್ರಜಾ ಟೈಮ್ಸ್

www.prajatimes.com

ಬ್ಯಾಟರಾಯನಪುರ ತಮ್ಮೆಶ್ ಗೌಡ ನಾಮಪತ್ರ ಸಲ್ಲಿಕೆಗೆ ಹರಿದುಬಂದ ಜನಸಾಗರ.

ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಮ್ಮೆಶ್ ಗೌಡ ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಅವರ ಜೊತೆಗೆ ಮಾಜಿ ಮುಖ್ಯಮಂತ್ರಿ ಟಿವಿ ಸದಾನಂದ ಗೌಡರು, ಚೆಲುವಾದಿ ನಾರಾಯಣಸ್ವಾಮಿ ಮತ್ತು ಚಿತ್ರನಟಿ ತಾರಾ ಜೊತೆಗಿದ್ದರು. ಸ್ಥಳೀಯ ಪ್ರಮುಖ ಮುಖಂಡರಾದ ಮುನೇದ್ರ ಕುಮಾರ್ ಮತ್ತು ಇನ್ನಿತರ ಪ್ರಮುಖ ಮುಖಂಡರು ಅವರ ಜೊತೆಗಿದ್ದರು.

ಸಾವಿರಾರು ಕಾರ್ಯಕರ್ತರು ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದರು. ಮಾಧ್ಯಮಗಳ ಜೊತೆಗೆ ಮಾತಾಡಿದ ತಮ್ಮೇಶ್ ಗೌಡರು ಬ್ಯಾಟರಾಯನಪುರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಹೇಳಿದರು.

ಕೃಷ್ಣ ಬೈರೇಗೌಡರು ಮೂರು ಸಾರಿ ಇಲ್ಲಿ ಶಾಸಕರಾಗಿದ್ದರೂ ಕೂಡ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಕ್ಷೇತ್ರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಖಂಡಿತವಾಗಿಯೂ ನಾನು ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ತಮ್ಮ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

ಬಿಜೆಪಿ ನನ್ನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಲ್ಲಿ ರಾಜ್ಯಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ನಾನು ಮಾಡಿರುವ ಕೆಲಸವನ್ನು ಕಂಡು ನನಗೆ ಈ ಬಾರಿ ಪಕ್ಷ ಟಿಕೆಟ್ ನೀಡಿದೆ ಎಂದು ಹೇಳಿದರು.

ಇಂದು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಕೂಡಿಬಂದ ಜನಸಾಗರವನ್ನು ಕಂಡರೆ ಬಹುತೇಕ ತಮ್ಮೇಶ್ ಗೌಡರು ಗೆಲ್ಲುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

ಕೈತಪ್ಪಿದ ಟಿಕೆಟ್, ಕೃಷ್ಣರಾಜ ಕ್ಷೇತ್ರ ಶಾಸಕ ರಾಮದಾಸ್ ಅಸಮಾಧಾನ.

ಮೈಸೂರು : ಬಿಜೆಪಿ ಟಕೆಟ್ ಕೈತಪ್ಪಿರುವ ಹಿನ್ನೆಲೆ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ 30 ವರ್ಷದಿಂದ ಇದ್ದ ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಸೋಮವಾರ ಸಂಜೆ ತನ್ನ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಬಾರಿ ಕೃಷ್ಣರಾಜ ಕ್ಷೇತ್ರದಿಂದ ಎಸ್.ಎ ರಾಮದಾಸ್ಗೆ ಬದಲಿಗೆ ಶ್ರೀವತ್ಸ ಎಂಬುವವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ರಾಮದಾಸ್ ಸಾಕಷ್ಟು ಬೇಸರಗೊಂಡಿದ್ದಾರೆ. 30 ವರ್ಷದಿಂದ ಇದ್ದ ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ. ಮುಂದೆ ನಾನು ಆ ಮನೆಯಲ್ಲಿಯೇ ಇರಬೇಕಾ ಅಥವಾ ನನ್ನ ದಾರಿ ನಾನು ನೋಡಿಕೊಳ್ಳಬೇಕಾ ಎಂಬುದುನ್ನು ಮಂಗಳವಾರ (ಏಪ್ರಿಲ್ 18) ತಿಳಿಸುತ್ತೇನೆ.

ಬಿಜೆಪಿ ಹಾಲಿ ಶಾಸಕ ಎಸ್ಎ ರಾಮದಾಸ್ ಅವರು ಈ ಬಾರಿ ಚುನಾವಣೆಯ ಟಿಕೆಟ್ ಸಿಗದ ಕಾರಣ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಮುಂದಿನ ನಡೆಯನ್ನು ಶೀಘ್ರದಲ್ಲಿಯೇ ತಿಳಿಸುವುದಾಗಿ ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಭೇಟಿಗೂ ನಿರಾಕರಣೆ:
ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಕೆಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಶಾಸಕ ರಾಮದಾಸ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ರಾಮದಾಸ್ ತಾವು ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಹೇಳಿ ಅವರ ಜತೆ ಮಾತನಾಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಶ್ರೀವತ್ಸ ಹಾಗೂ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡದೇ ಮನೆಯಿಂದ ಹೊರನಡೆದಿದ್ದಾರೆ.

ಬೇಸರ ಆಗುವುದು ಸಹಜ ಎಂದ ಪ್ರತಾಪ್ ಸಿಂಹ:
ರಾಮದಾಸ್ ಭೇಟಿ ನಿರಾಸರಿಸಿದ ನಂತರ ಮಾಧ್ಯಮಗಳಿಗೆ ಮಾತನಾಡಿದ ಸಂಸ ಪ್ರತಾಪ್ ಸಿಂಹ, ಟಿಕೆಟ್ ಘೋಷಣೆ ಬಳಿಕ ಶಾಸಕ ರಾಮದಾಸ್ ಅವರ ಆಶೀರ್ವಾದ ಪಡೆಯಲು ಅವರ ಮನೆಗೆ ಬಂದಿದ್ದೇವೆ. ಟಿಕೆಟ್ ತಪ್ಪಿರುವ ಕಾರಣ ಅವರಿಗೆ ಸಹಜವಾಗಿ ನೋವಾಗಿದೆ. 30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದೆ. ಇಂತಹ ಸಂದರ್ಭದಲ್ಲಿ ನೋವು ಆಗುವುದು ಸಹಜ ಎಂದರು.

ರಾಮದಾಸ್ ತಾಯಿಯನ್ನು ಬಿಟ್ಟು ಕೊಡುವುದಿಲ್ಲ:
ಸದ್ಯ ಬೇಸರದಲ್ಲಿದ್ದೇನೆ. ಮಂಗಳವಾರ (ಏ.18ಕ್ಕೆ) ನಿಮ್ಮನ್ನು ಭೇಟಿ ಮಾಡುತ್ತೇನೆ, ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಪಕ್ಷವನ್ನು ತಾಯಿ ಎಂದು ಭಾವಿಸಿರುವ ಅವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನನ್ನ ಬೆಂಬಲಿಸುವ ಭರವಸೆ ಇದೆ ಎಂದ ಶ್ರೀವತ್ಸ:
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀವತ್ಸ ಅವರು ಮಾತನಾಡಿ, ” 30 ವರ್ಷದಿಂದ ನಾವು ರಾಮದಾಸ್ ಅವರ ಜೊತೆಗೆ ಇದ್ದೇವೆ. ಅವರು ನನ್ನ ವಿರುದ್ಧ ಕೆಲಸ ಮಾಡಲ್ಲ, ನನ್ನನ್ನು ಬೆಂಲಿಸುತ್ತಾರೆ ಎಂಬ ಭರವಸೆ ನನಗೆ ಇದೆ ಎಂದರು.

ಲಿಂಬಾವಳಿ, ರಾಮದಾಸ್ಗೆ ಟಿಕೆಟ್ ಇಲ್ಲ:
ಸೋಮವಾರ ಸಂಜೆ ಬಿಜೆಪಿ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪೈಕಿ ಹಾಲಿ ಶಾಸಕರುಗಳಾದ ರಾಮದಾಸ್ ಹಾಗೂ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಿಲ್ಲ.

ಕನಸಿನಾ ದೇವಿಯಾಗಿ ಚಿತ್ರಗೀತೆ ವಿಕ್ರಮ ಅವರ ಧ್ವನಿಯಲ್ಲಿ

ಬಿಜೆಪಿ ವರಿಷ್ಠ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಸೇರ್ಪೆಡೆ

ಜಗದೀಶ್ ಶೆಟ್ಟರ್, ಲಕ್ಶ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗೆ ಆಗುವ ಲಾಭ ಮತ್ತು ನಷ್ಟದ ಲೆಕ್ಕಾಚಾರ.

ಶೆಟ್ಟರ್ ಹೇಳಿಕೆಗೆ ಸಿಎಂ ತಿರುಗೇಟು
ಯಾರಾದ್ರು ಪಕ್ಷ ಬಿಟ್ಟು ಹೋದಾಗ ಏನಾದರೂ ಒಂದು ಕಾರಣ ಕೊಡಬೇಕು ಅಲ್ವಾ? ಕಳೆದ 25 ವರ್ಷದ ಅವರ ರಾಜಕೀಯ ಜೀವನದಲ್ಲಿ ಬಿಜೆಪಿ ಶೆಟ್ಟರ್‌ಗೆ ಎಲ್ಲವನ್ನೂ ಕೊಟ್ಟಿದೆ. ಅವರನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹೋಗಿದ್ದಾರೆ ಅದಕ್ಕೊಂದು ನೆಪ ಎಂದು ಶೆಟ್ಟರ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದಾರೆ. ಟಿಕೆಟ್ ಸಿಗದ ಕಾರಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಗೆಲುವು ದಾಖಲಿಸಿದ ಹೆಗ್ಗಳಿಕೆ ಜಗದೀಶ್ ಶೆಟ್ಟರ್ ಅವರಿಗೆ ಇದೆ. ಬಿಜೆಪಿಯಲ್ಲಿ ಸಚಿವರಾಗಿ, ಒಮ್ಮೆ ಸಿಎಂ ಕೂಡಾ ಆಗಿದ್ದ ಜಗದೀಶ್ ಶೆಟ್ಟರ್‌ಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ, ಸಿಡಿದೆದ್ದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ತಮ್ಮದೇ ಲಿಂಗಾಯತ ಸಮುದಾಯದ ಬಲ ಇದೆ. ಯಾಕಂದ್ರೆ ಈ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಒಟ್ಟು ಎರಡೂವರೆ ಲಕ್ಷ ಮತದಾರರ ಪೈಕಿ ಲಿಂಗಾಯತರೇ ಸುಮಾರು 75 ಸಾವಿರದಷ್ಟು ಇದ್ದಾರೆ. ಹೀಗಾಗಿ, ಈ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳೂ ಲಿಂಗಾಯತರಿಗೇ ಟಿಕೆಟ್ ನೀಡುತ್ತವೆ. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲಿರುವ ಶೆಟ್ಟರ್ ಅವರಿಗೆ ಬಿಜೆಪಿಯ ಎದುರಾಳಿ ಯಾರು ಅನ್ನೋದು ಇನ್ನೂ ಕನ್ಫರ್ಮ್‌ ಆಗಿಲ್ಲ. ಆದ್ರೆ, ಸತತ ಗೆಲುವಿನ ಸರದಾರ ಎಂದೇ ಹೆಸರಾಗಿರುವ ಜಗದೀಶ್ ಶೆಟ್ಟರ್, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಆದ್ರೆ, ಕಾರ್ಯಕರ್ತರಿಗೆ ಟಿಕೆಟ್ ನೀಡ್ತೇವೆ ಎಂದು ಹೇಳುತ್ತಿರುವ ಬಿಜೆಪಿ ಯಾವ ರೀತಿಯ ತಂತ್ರಗಾರಿಕೆ ನಡೆಸುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.

ಬಿಜೆಪಿಯನ್ನು ಬೈಯಲ್ಲ ಎಂದ ಶೆಟ್ಟರ್
ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ. ರಾಜಕೀಯ ಸನ್ಯಾಸಕ್ಕೂ ಸಿದ್ಧನಿದ್ದೆ. ಆದ್ರೆ ನನಗೆ ಸಕಾರಾತ್ಮ ಜನರ ವಿಶ್ವಾಸ ಇರೋವರೆಗೂ ರಾಜಕೀಯದಲ್ಲಿಇರುತ್ತೇನೆ. ಕಾಂಗ್ರೆಸ್​ಗೆ ಸೇರ್ಪಡೆಯಾದ ಕೂಡಲೇ ಬಿಜೆಪಿಯನ್ನು ಬೈಯಬೇಕೆಂದಿಲ್ಲ. ಬಿಜೆಪಿಯನ್ನು ಬೈಯಲ್ಲ. ಆದ್ರೆ ಕೆಲ ವ್ಯಕ್ತಿಗಳು ಇದಾರಲ್ಲಾ, ಅವರ ಬಗ್ಗೆ ಬೇಸರವಿದೆ ಎಂದು ಶೆಟ್ಟರ್ ಹೇಳಿದರು.

ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಮೊದಲು ಸಿಡಿದೆದ್ದವರು ಲಕ್ಷ್ಮಣ ಸವದಿ. ಮಾಜಿ ಡಿಸಿಎಂ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಲಕ್ಷ್ಮಣ ಸವದಿ, ಬಿಜೆಪಿ ಸದಸ್ಯತ್ವದ ಜೊತೆಯಲ್ಲೇ ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿ ಇದೀಗ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಶಾಸಕರಾಗಿದ್ದರು. ಆಗ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಸೋಲು ಕಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ ಮಹೇಶ್ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಈ ಬಾರಿ ಕೂಡಾ ಲಕ್ಷ್ಮಣ ಸವದಿ ಬದಲಿಗೆ ಮಹೇಶ್ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ಗೆ ಹಾರಿರುವ ಲಕ್ಷ್ಮಣ ಸವದಿ, ಈ ಬಾರಿ ಮಹೇಶ್ ಕುಮಟಳ್ಳಿ ವಿರುದ್ಧ ಗೆಲ್ಲುವ ಸವಾಲಿನ ಜೊತೆಯಲ್ಲೇ ಅಕ್ಕಪಕ್ಕದ ಹಲವು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸವಾಲು ಸ್ವೀಕರಿಸಿದ್ದಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ಅಥಣಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಜಾನನ ಮಂಗಸೂಳಿ ಅವರ ಮನವೊಲಿಕೆಯನ್ನೂ ಮಾಡ್ತಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ನಿಜವಾದ ಸವಾಲು ಇರೋದು ರಮೇಶ್ ಜಾರಕಿಹೊಳಿ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರವಾಗಿ ಅಬ್ಬರದ ಪ್ರಚಾರ ಮಾಡ್ತಿರುವ ರಮೇಶ್ ಜಾರಕಿಹೊಳಿ ಅವರಿಗೆ ಈ ಬಾರಿ ಪಾಠ ಕಲಿಸುತ್ತೇನೆ ಅಂತಾ ಶಪಥ ಮಾಡಿದ್ದಾರೆ ಲಕ್ಷ್ಮಣ ಸವದಿ. ಎಲ್ಲಕ್ಕಿಂತಾ ಹೆಚ್ಚಾಗಿ ಬೆಳಗಾವಿ ಭಾಗದ ಪ್ರಬಲ ಲಿಂಗಾಯತ ನಾಯಕನಾಗಿ ಗುರ್ತಿಸಿಕೊಂಡಿರುವ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರೋದು ಈ ಭಾಗದಲ್ಲಿ ಬಿಜೆಪಿಯ ಲಿಂಗಾಯತ ಮತಬ್ಯಾಂಕ್‌ಗೆ ಹೊಡೆತ ಬೀಳುತ್ತಾ ಅನ್ನೋ ಪ್ರಶ್ನೆಯೂ ಎದುರಾಗಿದೆ.

ಕಳೆದ ಚುನಾವಣೆ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ ಭಾರೀ ಸದ್ದು ಮಾಡಿತ್ತು. ಅಂದಿನ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಜಾತಿ ವಿಷ ಬೀಜ ಬಿತ್ತಿದ ಆರೋಪ ಕೇಳಿ ಬಂದಿತ್ತು. ವೀರಶೈವ – ವೀರಶೈವರ ನಡುವೆ ಒಡಕು ಮೂಡಿಸಿಲು ಯತ್ನ ಮಾಡಲಾಗ್ತಿದೆ ಎಂದು ಬಿಜೆಪಿ ಆಕ್ರೋಶ ಹೊರ ಹಾಕಿತ್ತು. ಚುನಾವಣೆಯಲ್ಲಿ ಈ ವಿಚಾರ ಕಾಂಗ್ರೆಸ್‌ಗೆ ತಿರುಗುಬಾಣವಾಗಿತ್ತು. ಆದ್ರೆ, ಈ ಬಾರಿ ಕೆಲ ಲಿಂಗಾಯತ ನಾಯಕರೇ ಕಾಂಗ್ರೆಸ್ ಸೇರಿದ್ದಾರೆ. ಶೆಟ್ಟರ್ ಹಾಗೂ ಸವದಿ ಕಾಂಗ್ರೆಸ್ ಸೇರ್ಪಡೆ ಬೆಳಗಾವಿ ಹಾಗೂ ಹುಬ್ಬಳ್ಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡುತ್ತೆ ಅನ್ನೋ ಕುತೂಹಲ ಇದೀಗ ಶುರುವಾಗಿದೆ. ಇಬ್ಬರೂ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಸುತ್ತಮುತ್ತಲ ಹಲವು ಕ್ಷೇತ್ರಗಳಲ್ಲಿ ಅದರಲ್ಲೂ ಲಿಂಗಾಯತ ಸಮುದಾಯದ ಮೇಲೆ ಪ್ರಭಾವ ಬೀರೋದ್ರಲ್ಲಿ ಯಶಸ್ವಿ ಆಗ್ತಾರಾ ಅನ್ನೋದು ಸದ್ಯದ ಪ್ರಶ್ನೆ!

75 ವರ್ಷ ಪೂರ್ಣವಾಯ್ತು ಅನ್ನೋ ಕಾರಣಕ್ಕೆ 2021ರಲ್ಲಿ ಯಡಿಯೂರಪ್ಪ ಸಿಎಂ ಪಟ್ಟ ಕಳೆದುಕೊಂಡರು. ಈ ವೇಳೆ ಹಲವು ಲಿಂಗಾಯತ ಮಠಾಧೀಶರು ಯಡಿಯೂರಪ್ಪ ಬೆನ್ನಿಗೆ ನಿಂತಿದ್ದರು. ಈ ಸಮಯದಲ್ಲಿ ಲಿಂಗಾಯತರೇ ಆದ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ನೀಡಿದ್ದರೂ ಕೂಡಾ ಲಿಂಗಾಯತ ಸಮುದಾಯದ ಅಸಮಾಧಾನ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಅನ್ನೋ ಮಾತುಗಳೇ ಕೇಳಿ ಬಂದವು. ಜೊತೆಯಲ್ಲಿ ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ. ಈ ಬಾರಿ ಶಿಕಾರಿಪುರದಿಂದ ಯಡಿಯೂರಪ್ಪ ಬದಲಿಗೆ ವಿಜಯೇಂದ್ರ ಸ್ಪರ್ಧೆ ಮಾಡ್ತಿದ್ದಾರೆ. ಜೊತೆಯಲ್ಲೇ ಮುಸ್ಲಿಮರ ಮೀಸಲಾತಿಯ ಪಾಲು ಕೂಡಾ ಲಿಂಗಾಯತರಿಗೆ ನೀಡುವ ಮೂಲಕ ಸರ್ಕಾರ ಲಿಂಗಾಯತ ಸಮುದಾಯದ ಮನವೊಲಿಕೆಗೆ ಮುಂದಾಗಿದೆ. ಆದ್ರೆ ಈ ವಿಚಾರದಲ್ಲೂ ಬಿಜೆಪಿ ಸಂಪೂರ್ಣ ಯಶಸ್ಸು ಕಂಡಿಲ್ಲ. ಇನ್ನು ಈ ಬಾರಿ ಬಿಜೆಪಿಗೆ ಬಹುಮತ ಸಿಕ್ಕರೆ ಲಿಂಗಾಯತ ಸಮುದಾಯದವರೇ ಸಿಎಂ ಆಗಲಿದ್ದಾರೆ, ಅದರಲ್ಲೂ ಯುವ ನಾಯಕರಿಗೆ ಪಟ್ಟ ಕಟ್ಟಬಹುದು ಅನ್ನೋ ಮಾತುಗಳಿವೆ. ಲಿಂಗಾಯತ ಸಮುದಾಯದ ನಾಯಕ ಅರವಿಂದ್ ಬೆಲ್ಲದ್ ರೇಸ್‌ನಲ್ಲಿ ಇದ್ದಾರೆ ಅನ್ನೋ ವಿಚಾರವೂ ಚಾಲ್ತಿಯಲ್ಲಿದೆ.

ಜಗದೀಶ್ ಶೆಟ್ಟರ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸುತ್ತಿರುವುದು —-Jagadish Shettar Submitting his resignation

ಸಮೀಕ್ಷೆಗಳು ಹೇಳೋದೇನು?

ಕರ್ನಾಟಕ ಎಲೆಕ್ಷನ್ ಸಂಬಂಧ ಈಗಾಗಲೇ ಮೂರು ಸಮೀಕ್ಷೆಗಳು ಹೊರಬಿದ್ದಿವೆ. ಈ ಪೈಕಿ ಸಿ ವೋಟರ್ ಸಂಸ್ಥೆ ಕಾಂಗ್ರೆಸ್‌ಗೆ ಸರಳ ಬಹುಮತ ಬರಲಿದೆ ಅನ್ನೋ ಲೆಕ್ಕಾಚಾರ ಕೊಟ್ಟಿದೆ. ಲೋಕ್‌ಪೋಲ್ ಸಮೀಕ್ಷೆ ಕೂಡಾ ಕಾಂಗ್ರೆಸ್‌ಗೆ ಸರಳ ಬಹುಮತ ಸಿಗಬಹುದು ಎಂದು ಅಂದಾಜಿಸಿದೆ. ಆದ್ರೆ, ಜನ್‌ ಕಿ ಬಾತ್ ಸಮೀಕ್ಷೆ ಮಾತ್ರ ಅತಂತ್ರ ವಿಧಾನಸಭೆ ನಿರ್ಮಾಣ ಆಗಬಹುದು ಎಂದು ಭವಿಷ್ಯ ನುಡಿದಿದೆ. ಆದರೂ ಬಿಜೆಪಿ 100 ಸ್ಥಾನಗಳನ್ನಾದ್ರೂ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಅಂದಾಜಿಸಿದೆ.

ಹಾಗೆ ನೋಡಿದ್ರೆ ಇವೆಲ್ಲವೂ ಚುನಾವಣಾ ಪೂರ್ವ ಸಮೀಕ್ಷೆಗಳು. ರಾಜ್ಯದಲ್ಲಿ ಮತದಾನಕ್ಕೆ 1 ತಿಂಗಳು ಬಾಕಿ ಇರುವಾಗ ಹೊರಬಿದ್ದ ಸಮೀಕ್ಷೆಗಳು. ಇದೀಗ ಪ್ರಮುಖ ಪಕ್ಷಗಳ ಟಿಕೆಟ್ ಹಂಚಿಕೆ ನಂತರ ಹಲವೆಡೆ ರಾಜಕೀಯ ಸಮೀಕರಣಗಳೇ ಬದಲಾಗಿವೆ. ಹಲವು ನಾಯಕರ ಪಕ್ಷಾಂತರವೂ ಆಗಿದೆ. ಈ ಹಂತದಲ್ಲಿ ರಾಜಕೀಯ ಲೆಕ್ಕಾಚಾರ ಏನಾಗಬಹುದು ಅನ್ನೋದನ್ನ ತಿಳಿಯೋದಕ್ಕೆ ಮತದಾನದ ಬಳಿಕ ಪ್ರಕಟವಾಗುವ ಎಕ್ಸಿಟ್ ಪೋಲ್‌ ಸಮೀಕ್ಷೆವರೆಗೂ ಕಾಯಬೇಕಾಗಬಹುದು.

ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ 38 ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಕೊಟ್ಟಿರಲಿಲ್ಲ. ಹೊಸ ಮುಖಗಳಿಗೆ ಟಿಕೆಟ್ ನೀಡಿ ಬಿಜೆಪಿ ದಿಗ್ವಿಜಯ ಸಾಧಿಸಿತ್ತು. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ತವರಿನಲ್ಲಿ ಬಂಡಾಯದ ಬಿಸಿ ಅಷ್ಟಾಗಿ ತಟ್ಟಿರಲಿಲ್ಲ. ಆದ್ರೆ ರಾಜ್ಯದ ಪರಿಸ್ಥಿತಿ ಆ ರೀತಿ ಇಲ್ಲ. ಅದರಲ್ಲೂ ಲಿಂಗಾಯತ ಸಮುದಾಯದ ನಾಯಕರಾದ ಸವದಿ ಹಾಗೂ ಶೆಟ್ಟರ್ ಪಕ್ಷಾಂತರ ಸೇರಿದಂತೆ ಹಲವು ಬಿಜೆಪಿ ನಾಯಕರು ಬಂಡೆದ್ದಿದ್ದಾರೆ. ಈ ಬಂಡಾಯ ಬಿಜೆಪಿಗೆ ಬಿಸಿ ಮುಟ್ಟಿಸುತ್ತಾ? ಅಥವಾ ಹೊಸ ಮುಖಗಳಿಗೆ ಜನ ಮಣೆ ಹಾಕುವ ಮೂಲಕ ಆಡಳಿತ ವಿರೋಧಿ ಅಲೆಗೆ ಬಿಜೆಪಿ ಟಾನಿಕ್ ಕೊಡುತ್ತಾ ಅನ್ನೋದೇ ಸದ್ಯದ ಕುತೂಹಲ! ಕಾದು ನೋಡಬೇಕು

ಬ್ಯಾಟರಾಯನಪುರ ಈ ಸಲ ಕಾಂಗ್ರೆಸ್ ನ ಕೃಷ್ಣ ಬೈರೇಗೌಡರರಿಗೆ ಬಿಜೆಪಿ ಪ್ರತಿಸ್ಪರ್ಧಿ ತಮ್ಮೇಶ್ ಗೌಡ

ನಗರದಲ್ಲಿ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಬ್ಯಾಟರಾಯನಪುರವು ಉತ್ತರ ಬೆಂಗಳೂರಿನಲ್ಲಿ ತುಲನಾತ್ಮಕವಾಗಿ ಹೊಸ ಕ್ಷೇತ್ರವಾಗಿದೆ. ಇದು ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೋಡಿಗಹಳ್ಳಿ, ವಿದ್ಯಾರಣ್ಯಪುರ, ದೊಡ್ಡ ಬೊಮ್ಮಸಂದ್ರ ಮತ್ತು ಕುವೆಂಪು ನಗರ ವಾರ್ಡ್‌ಗಳನ್ನು ಒಳಗೊಂಡಿದೆ.

ಗಾಲಿ ಆಂಜನೇಯ ದೇವಸ್ಥಾನಕ್ಕೆ ಹೆಸರುವಾಸಿಯಾದ ಈ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳೊಂದಿಗೆ ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶಗಳ ಮಿಶ್ರಣವಾಗಿದೆ. ಮಾಲ್‌ಗಳು, ಹೊಸ ಕಾಲೇಜುಗಳು ಮತ್ತು ವಸತಿ ಪ್ರದೇಶಗಳ ಜೊತೆಗೆ ಇತರ ಆದಾಯದ ಲೇಔಟ್‌ಗಳು ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ, ಬಹುತೇಕ ಹಳ್ಳಿಯಂತಹ ಪ್ರದೇಶಗಳು ಉತ್ತಮ ಮೂಲಸೌಕರ್ಯಗಳ ಕೊರತೆಯೊಂದಿಗೆ ಶ್ರೀಮಂತ ಪ್ರದೇಶಗಳ ಅಸಮ ಮಿಶ್ರಣವನ್ನು ನೀವು ಕಾಣುತ್ತೀರಿ . ಉತ್ತಮವಾಗಿ ಅಭಿವೃದ್ಧಿ ಹೊಂದಿದ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳ ವಿರುದ್ಧ ಸಮತೋಲಿತವಾಗಿವೆ. ವೊಕ್ಕಲಿಗರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಮತದಾರರನ್ನು ರೂಪಿಸುತ್ತಾರೆ. ಈ ಕ್ಷೇತ್ರವು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಏರೋಸ್ಪೇಸ್ ಪಾರ್ಕ್‌ಗೆ ಹೋಗುವ ಹೆದ್ದಾರಿಯಿಂದ ಸುತ್ತುವರಿದಿದೆ.

ಈ ಪ್ರದೇಶವು ಸಾಮಾನ್ಯ ಸಮಸ್ಯೆಗಳಾದ ಹದಗೆಟ್ಟ ರಸ್ತೆಗಳು, ಸರಿಯಾದ ಚರಂಡಿ ಕೊರತೆ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದೆ. ಈ ಹಲವು ಕಂದಾಯ ಕ್ಷೇತ್ರಗಳಲ್ಲಿ ಈ ಸಮಸ್ಯೆಗಳು ಗರಿಗೆದರಿವೆ. ಭದ್ರಪ್ಪ ಲೇಔಟ್‌ನಂತಹ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಎಲ್ಲಾ ಪಕ್ಷಗಳು “ಸಮಗ್ರ ಅಭಿವೃದ್ಧಿ” ಎಂದು ಭರವಸೆ ನೀಡಿದ್ದರೂ ಸಹ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿವೆ, ರೈತರ ಜೀವನೋಪಾಯವನ್ನು ತಿನ್ನುತ್ತಿವೆ ಎಂದು ಆರೋಪಿಸಲಾಗಿದೆ .

ಕರ್ನಾಟಕದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಅಧಿಕಾರ ವಿಚಾರದಲ್ಲಿ ಕಾಂಗ್ರೆಸ್ ಇಲ್ಲಿ ಹ್ಯಾಟ್ರಿಕ್ ಭಾರಿಸಿದೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2001 ರ ಭಾರತೀಯ ಜನಗಣತಿ ಪ್ರಕಾರ ಸುಮಾರು ಎರಡು ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಪುರಷರು ಶೇಕಡಾ 52ರಷ್ಟಿದ್ದಾರೆ. ಮಹಿಳೆಯರು ಶೇಕಾಡ 48ರಷ್ಟಿದ್ದಾರೆ. ಈ ಕ್ಷೇತ್ರ ಸರಾಸರಿ ಶೇಕಡಾ 73ರಷ್ಟು ಸಾಕ್ಷರತೆ ಹೊಂದಿದೆ. ಇಲ್ಲಿ ಸಾಕ್ಷರತೆ ಪ್ರಮಾಣ ತುಸು ಹೆಚ್ಚು ಎನ್ನಬಹುದು.

ಪ್ರತಿ ವಿಧಾನಸಭಾ ಚುಣಾವಣೆ ಬಂದಾಗಲೂ ಸಹ ಕರ್ನಾಟಕದ ಯಾವುದೇ ಕ್ಷೇತ್ರದಲ್ಲೂ ಮತದಾರರ ಒಲವು, ಪಕ್ಷಗಳ ಗೆಲವನ್ನು ಮುಖ್ಯವಾಗಿ ರಾಜಕೀಯ ಬೆಳವಣಿಗೆಗಳನ್ನು ಊಹಿಸಲು ಸಾಧ್ಯವಿಲ್ಲ. ಸದ್ಯ ಬ್ಯಾಟರಾಯಪುರದಲ್ಲೂ ಅಷ್ಟೇ, ಇಲ್ಲಿ 2008ರಿಂದಲೂ ಕಾಂಗ್ರೆಸ್‌ ಬಹುಮತ ಗಳಿಸುವ ಮೂಲಕ ಅಧಿಕಾರ ಗದ್ದುಗೆ ಏರಿದೆ. 2023ರ ಚುನಾವಣೆಯಲ್ಲಿ ಅದನ್ನು ಹಾಗೇಯೆ ಕಾಪಾಡಿಕೊಳ್ಳುವ ಸವಾಲು ಕಾಂಗ್ರೆಸ್‌ ನಾಯಕರ ಮೇಲಿದೆ.

ಬ್ಯಾಟರಾಯನಪುರ ಕ್ಷೇತ್ರದ ರಾಜಕೀಯ ಹಿನ್ನೆಲೆ
ಸತತ ಮೂರು ಬಾರಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹ್ಯಾಟ್ರಿಕ್ ಭಾರಿಸಿದೆ. ಕೈ ನಾಯಕ ಕೃಷ್ಣ ಬೈರೇಗೌಡ ಅವರು 2008ರಿಂದಲೂ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ರವಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಬೀಗಿದ್ದರು. ಆದರೆ ಬಿಜೆಪಿ (5671) ಕಡಿಮೆ ಅಂತದಿಂದ ಸೋತಿದೆ. ನಿರಂತರವಾಗಿ ಮೂರು ಸಲ ಕೃಷ್ಣಬೈರೇಗೌಡಚುನಾಯಿತರಾಗಿದ್ದಾರೆ.

ಕಾಂಗ್ರೆಸ್‌ ಪ್ರಬಲ ಪೈಪೋಟಿ ಒಡ್ಡಲು ಬಿಜೆಪಿ ಸಿದ್ಧತೆ
ಕಾಂಗ್ರೆಸ್ ಭದ್ರಕೋಟೆಯಾಗಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ವರ್ಷಗಳಿಂದಲೂ ಅಧಿಕಾರ ಹಿಡಿಯಲು ಹವಣಿಸುತ್ತಿದೆ. 2018ರಲ್ಲಿ ಇನ್ನೇನು ಕ್ಷೇತ್ರ ಬಿಜೆಪಿ ಪಾಲಾಯಿತು ಎನ್ನುವಷ್ಟರಲ್ಲಿ ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿದೆ. ಮರಳಿ ಯತ್ನವ ಮಾಡು ಎಂಬಂತೆ ಈ ಭಾರಿ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕೇ ತೀರಲು ಬಿಜೆಪಿ ನಾಯಕರು ಚಿತ್ತ ನೆಟ್ಟಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ನಾಯಕರು, ಕಾರ್ಯಕರ್ತರ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಈ ಸಲ ಅತ್ಯಧಿಕ ಸ್ಥಾನ ಗೆಲ್ಲುವ ಉತ್ಸಾಹ ತೋರುತ್ತಿರುವ ಜೆಡಿಎಸ್ ಸಹ ಸಿದ್ಧತೆ ಆರಂಭಿಸಿರುವುದು ಗೊತ್ತಾಗಿದೆ.

ಬ್ಯಾಟರಾಯನಪುರ: ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ
ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಗೂ ಮುಸ್ಲಿಂ ಸಮುದಾಯದದ ಮತಗಳು ಹೆಚ್ಚಿವೆ. ಅವರೇ ಇಲ್ಲಿ ನೀರ್ಣಾಯಕರು ಎನ್ನಬಹುದು. ಮೂಲ ನಿವಾಸಿಗಳ ಸಂಖ್ಯೆಯಷ್ಟೇ ಇಲ್ಲಿ ವಲಸಿಗರು ಇದ್ದಾರೆ. ಮುಖ್ಯವಾಗಿ ಇಲ್ಲಿ ಎಲ್ಲ ಜಾತಿ ಜನಾಂಗದವರು ಇದ್ದಾರೆ. ಅಲ್ಲದೇ ಹಿಂದಿ, ತೆಲುಗು, ತಮಿಳು, ಅಲ್ಪಸಂಖ್ಯಾತರು ಇದ್ದಾರೆ. ಕಾಂಗ್ರೆಸ್‌ ಮುಸ್ಲಿಂ ಓಲೈಕೆ ಹೆಚ್ಚು ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು
ಕಾಂಗ್ರೆಸ್ ಹಾಲಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಆರೋಪಗಳು ಇವೆ. ಈ ಸಲ ಕೃಷ್ಣ ಬೈರೇಗೌಡರೇ ಕೈ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದಿದ್ದಾರೆ . ಬಿಜೆಪಿಯಿಂದ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಎ. ರವಿ ಯವರನ್ನು ಬಿಜೆಪಿ ಕೈ ಬಿಟ್ಟಿದೆ ಯಡಿಯೂರಪ್ಪ ನವರ ಆತ್ಮೀಯ ಎಂದು ಹೇಳಲಾಗುತ್ತಿರುವ ತಮ್ಮೇಶ್ ಗೌಡ ಇವರಿಗೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಕಟಿಸಿದೆ. ಒಕ್ಕಲಿಗರ ಮತ ಸೆಳೆಯಲು ಮುಂದಾಗಿರುವ ಜೆಡಿಎಸ್ ನಿಂದ ಸ್ಥಳಿಯ ನಾಯಕ ವೇಣುಗೋಪಾಲ್ ಅವರನ್ನು ಕಣಕ್ಕಿಳಿಸಿದೆ. ಆಮ್ ಆದ್ಮಿ ಪಕ್ಷ (AAP) ದಿಂದ ಉಮೇಶ್ ಬಾಬು ಸ್ಪರ್ದಿಸುತ್ತಿದ್ದಾರೆ ಇನ್ನು ಮಾಯಾವತಿಯವರ ಬಹುಜನ ಸಮಾಜ ಪಕ್ಷದಿಂದ ಸಂಪೂರ್ಣ ಗೌಡ ಸ್ಪರ್ದಿಸುತ್ತಿದ್ದಾರೆ

2008 ರಲ್ಲಿ ಒಟ್ಟು ಮತದಾರರ ಸಂಖ್ಯೆ: 1,41,793.
2013 ರಲ್ಲಿ ಒಟ್ಟು ಮತದಾರರ ಸಂಖ್ಯೆ: 2,08,380 ನಲ್ಲಿ
ಪ್ರಸ್ತುತ ನೋಂದಾಯಿತ ಮತದಾರರ ಒಟ್ಟು ಸಂಖ್ಯೆ: 4,19,694.

ಪ್ರಜಾ ಟೈಮ್ಸ್

www.prajatimes.com

ಬ್ಯಾಟರಾಯನಪುರ ಈ ಸಲ ಕಾಂಗ್ರೆಸ್ ನ ಕೃಷ್ಣ ಬೈರೇಗೌಡರರಿಗೆ ಬಿಜೆಪಿ ಪ್ರತಿಸ್ಪರ್ಧಿ ತಮ್ಮೇಶ್ ಗೌಡ

0

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 52 ಹೊಸ ಮುಖಗಳು.

ನವದೆಹಲಿ: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಅಳೆದು ತೂಗಿ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ರಿಲೀಸ್ ಮಾಡಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವರಾದ ಧರ್ಮೆಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಸೇರಿದಂತೆ ಪ್ರಮುಖರು ಸುದ್ದಿಗೋಷ್ಠಿ ನಡೆಸಿ, ಮೊದಲ ಪಟ್ಟಿ ರಿಲೀಸ್ ಮಾಡಿದ್ರು. ಗುಜರಾತ್ ಮಾದರಿ, ಉತ್ತರ ಪ್ರದೇಶ ಮಾದರಿಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಅದೆಲ್ಲವನ್ನೂ ಮೀರಿಸುವಂತೆ ಕರ್ನಾಟಕಕ್ಕೆ ಬಿಜೆಪಿ ಹೊಸ ಮಾಡೆಲ್ ರೂಪಿಸಿರುವಂತೆ ಇದೀಗ ಪಟ್ಟಿ ಬಿಡುಗಡೆ ಆಗಿದೆ.

ಈ ಕೆಳಗಿನಂತೆ ಹೊಸ ಮೋಡಲ್ ಇದೆ

52 ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿದೆ

32 OBC, 30 SC ಮತ್ತು 16 ST ಅಭ್ಯರ್ಥಿಗಳಿದ್ದರೆ

9 ಡಾಕ್ಟರ್ಸ್ ಗಳಿದ್ದಾರೆ. ರಿಟೈರ್ಡ್ IAS & IPS ಆಫೀಸರ್ ಗಳನ್ನು ಒಳಗೊಂಡಿದೆ.

31 ಸ್ನಾತಕೋತ್ತರ ಪದವಿಧರರು

8 ಮಹಿಳೆಯರು

ಪ್ರಜಾ ಟೈಮ್ಸ್

www.prajatimes.com