ಹುಬ್ಬಳ್ಳಿ : ರಕ್ತದಲ್ಲಿ ಬರೆದು ಕೊಡ್ತಿನಿ ಜಗದೀಶ್ ಶೆಟ್ಟರ್ ಗೆಲ್ಲೋಕೆ ಸಾಧ್ಯವಿಲ್ಲಾ : ಬಿ ಎಸ್ ಯೆಡಿಯೂರಪ್ಪ
ಕ್ಷಮಿಸೋದಕ್ಕೆ ಸಾಧ್ಯವಿಲ್ಲ ಎಲ್ಲಾ ಬಿಟ್ಟು ಕಾಂಗ್ರೆಸ್ ಕೈ ಹಿಡಿದು ಹೊರಟಿದ್ದಾರೆ ಇದನ್ನು ಸಹಿಸೋಕೆ ಅಸಾಧ್ಯ. ಇದನ್ನು ಹೇಳೋಕೆ ನಿಮ್ಮನ್ನು ಇಲ್ಲಿ ಕರೆದಿರೋದು. ಇದನ್ನೊಂದು ಸವಾಲಾಗಿ ಸ್ವೀಕರಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು.
ರಾಜ್ಯ ಬಿಜೆಪಿಯಲ್ಲಿ (Karnatak BJP) ಈಗ ಹೊಸ ಮೇನಿಯಾ ಶುರುವಾಗಿದೆ. ಒಂದು ಕಡೆ ಮೋದಿ, ಇನ್ನೊಂದ್ಕಡೆ ಅಮಿತ್ ಶಾ, ಮಗದೊಂದ್ಕಡೆ ಯೋಗಿ ಆದಿತ್ಯನಾಥ್ (Election Campaign) ಮೂಲಕ ತನ್ನ ಮಿಷನ್ 150 ಸಾಧಿಸಿಕೊಳ್ಳಲು ಮುಂದಾಗಿದೆ. ಇತ್ತ ಕಾಂಗ್ರೆಸ್ನಲ್ಲಿ (Congress) ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಿಯಾಂಕಾ ಗಾಂಧಿ ಸಹ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅನಾರೋಗ್ಯದ ನಡುವೆಯೂ ಹೆಚ್ ಡಿ ಕುಮಾರಸ್ವಾಮಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇವರ ಜೊತೆ ಸ್ಟಾರ್ ಸೆಲೆಬ್ರಿಟಿಗಳೂ ಕೂಡ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಮಂಡ್ಯದಲ್ಲಿ ಕಮಲ ಅರಳಿಸಿ ಶಕ್ತಿ ತುಂಬಿ: ಸಿಎಂ ಯೋಗಿ ಮನವಿ
ಡಬಲ್ ಇಂಜಿನ್ ಸರ್ಕಾರದಿಂದಲೇ ಆಭಿವೃದ್ದಿ ಸಾಧ್ಯ. ದೇಶದ ಉಜ್ವಲ ಭವಿಷ್ಯಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಅವಶ್ಯಕತೆಯಿದೆ. ನಾವು ಟೀಂ ಇಂಡಿಯಾ ತರಹ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ದು ಪೇ ಇಂಜಿನ್ ಸರ್ಕಾರವಾಗಿದೆ. ಮಂಡ್ಯದಲ್ಲಿ ಕಮಲವನ್ನ ಅರಳಿಸಿ ಶಕ್ತಿ ತುಂಬಿ ಎಂದು ಸಿಎಂ ಯೋಗಿ ಆದಿತ್ಯನಾಥ್ ಮನವಿ ಮಾಡಿಕೊಂಡರು.ಮಹೇಶ್ ಕುಮಟಳ್ಳಿ ಗೆಲ್ತಾರೆ
ಸವದಿಯನ್ನ ಸೋಲಿಸುವ ಜವಾಬ್ದಾರಿ ನೀವು ತಗೊಳ್ಳಿ. 25 ರಿಂದ 30 ಸಾವಿರ ಅಂತರದಿಂದ ಮಹೇಶ್ ಕುಮಟಳ್ಳಿ ಗೆಲ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.ಮಂಡ್ಯಕ್ಕೆ ಯೋಗಿ ಎಂಟ್ರಿ
ಮಂಡ್ಯ ನಗರದ ಪಿಇಎಸ್ ಹೆಲಿಪ್ಯಾಡ್ಗೆ ಸಿಎಂ ಯೋಗಿ ಆದಿತ್ಯನಾಥ್ ಬಂದಿಳಿದಿದ್ದಾರೆ. ಹೂಗುಚ್ಚ ನೀಡಿ ಯೋಗಿಯನ್ನ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಕೆಲವೇ ಕ್ಷಣಗಳಲ್ಲಿ ಸಂಜಯ ವೃತ್ತದಿಂದ ರೋಡ್ ಶೋ ಆರಂಭವಾಗಲಿದೆ.ಬಿಜೆಪಿ-ಕಾಂಗ್ರೆಸ್ ನಾಯಕರು ಮುಖಾಮುಖಿ
ಬೆಳಗಾವಿಯಲ್ಲಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ಮುಖಾಮುಖಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕರ ಸಿದ್ದರಾಮಯ್ಯ ಮುಖಾಮುಖಿಯಾಗಿದ್ದು, ಪರಸ್ಪರ ಹಸ್ತಲಾಘವ ಮಾಡಿ ಮಾತುಕತೆ ನಡೆಸಿದ್ದಾರೆ.ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ: ಬಿಎಸ್ವೈ
ನಾನು ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ. ಈ ಬಗ್ಗೆ ರಾಜ್ಯದ ಜನತೆ ಹತ್ತಿರ ಕ್ಷಮೆ ಸಹ ಕೇಳಿದ್ದೇನೆ. ನಾನು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದೆ. ಆದರೆ ಶೆಟ್ಟರ್ ತರಹ ಕಾಂಗ್ರೆಸ್ ಸೇರಿರಲಿಲ್ಲ. ಜಗದೀಶ್ ಶೆಟ್ಟರ್ ಸೋಲಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ. ವಿಶ್ವಾಸ ದ್ರೋಹ ಮಾಡಿದವರನ್ನು ಯಾವುದೇ ಕಾರಣಕ್ಕೂ ಕ್ಷೆಮಿಸುವುದಿಲ್ಲ. ಜಗದೀಶ್ ಶೆಟ್ಟರ್ ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಶೆಟ್ಟರ್ ವಾಪಸು ಬಿಜೆಪಿಗೆ ಬರುವ ಪ್ರಶ್ನೆಯೆ ಇಲ್ಲಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.ಯಡಿಯೂರಪ್ಪ ಕರೆ
ಲಿಂಗಾಯತ ಮುಖಂಡರ ಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನ ಸೋಲಿಸಲು ಯಡಿಯೂರಪ್ಪ ಕರೆ ಕೊಟ್ಟಿದ್ದಾರೆ. ಜಗದೀಶ್ ಶೆಟ್ಟರ್ ಪಕ್ಷ ದ್ರೋಹ ಕೆಲಸ ಮಾಡಿದ್ದಾರೆ. ಸೋಲರಿಯದ ಸರದಾರನಿಗೆ ಸೋಲಿನ ರುಚಿ ತೋರಿಸಿ. ಇದನ್ನ ಸವಾಲಾಗಿ ಎಲ್ಲರೂ ಸ್ವೀಕರಿಸಬೇಕು ಎಂದು ಯಡಿಯೂರಪ್ಪ ಕರೆ ಕೊಟ್ಟಿದ್ದಾರೆ.ಬಿಜೆಪಿ ವಿರುದ್ದ ಕಾಂಗ್ರೆಸ್ ಕಿಡಿ
ಮೀಸಲಾತಿ ವಿಚಾರವಾಗಿ ಬಿಜೆಪಿ ಮೋಸದಾಟ ಬಯಲಾಗಿದೆ. ಇದು ಡಬಲ್ ಇಂಜಿನ್ ಸರ್ಕಾರದ ದ್ರೋಹವಾಗಿದೆ. ಇದನ್ನು ಕಾಂಗ್ರೆಸ್ ಸದಾ ಹೇಳುತಿತ್ತು. ಒಕ್ಕಲಿಗ ಲಿಂಗಾಯತ ಲಾಲಿಪಾಪ್ ಕೊಟ್ಟಂತೆ ಆಗಿದೆ. ಚುನಾವಣೆವರೆಗೂ ಈ ರೀತಿ ಸುಳ್ಳು ಭರವಸೆ ಕೊಡುವುದಾಗಿತ್ತು ಎಂದು ಕಾಂಗ್ರೆಸ್ ಕಿಡಿಕಾರಿದೆ.ಯೋಗಿ ಆದಿತ್ಯನಾಥ್ ಆಗಮನ-ಎಂಸಿ ರಸ್ತೆ ಸಂಚಾರ ಬಂದ್
ಮಂಡ್ಯ ನಗರದ ಬೆಂಗಳೂರು ಮೈಸೂರಿಗೆ ಸಂಪರ್ಕಿಸುವ ಎಂಸಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಇಂದು ಎಂಸಿ ರಸ್ತೆಯ ಸಂಜಯ ವೃತ್ತದಿಂದ ಸಿಎಂ ಯೋಗಿ ಆದಿತ್ಯನಾಥ್ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆ ಎಂಸಿ ರಸ್ತೆ ಬಂದ್ ಮಾಡಲಾಗಿದೆ. ಎಂಸಿ ರಸ್ತೆ ಬಂದ್ ಆದ ಹಿನ್ನೆಲೆ ನಗರದ ಒಳ ಭಾಗದಿಂದ ವಾಹನಗಳು ತೆರಳಲು ಬದಲಿ ಮಾರ್ಗ ಸೂಚಿಸಲಾಗಿದೆ.
ಪ್ರಚಾರಕ್ಕೆ ಹೊರಟ ಸುದೀಪ್
ಕ್ಯಾಂಪೇನ್ ಮುಗಿಯೋವರೆಗೂ ಸಿಎಂ ಅವರ ಜೊತೆಯಲ್ಲಿ ಇರ್ತೀನಿ. ಮಾತು ಕೊಟ್ಟಿದ್ದೀನಿ. ರೋಡ್ ಶೋ ಅಂತ ಹೋಗಿನೇ ತುಂಬಾ ವರ್ಷ ಆಯ್ತು. ಬಿಸಿಲು ಸಮಯ ಬಿಟ್ಟು ಬೇರೆ ಸಮಯದಲ್ಲಿ ಆದಷ್ಟು ಸಮಯಕ್ಕೆ ಹೋಗುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.ಹಾಸನ ಗೆಲ್ಲಲು ರೇವಣ್ಣ ರಣತಂತ್ರ
ನೀರುಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ನರವೇರಿಸಿ ಹೆಚ್ ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಹಾಸನದಲ್ಲಿ ಪ್ರಚಾರ ಆರಂಭಿಸಲಿದ್ದಾರೆ. ಕಳೆದ ಬಾರಿ ಕಳೆದುಕೊಂಡಿದ್ದ ಹಾಸನ ಕ್ಷೇತ್ರವನ್ನ ಗೆದ್ದುಕೊಳ್ಳಲು ರೇವಣ್ಣ ರಣತಂತ್ರ ರಚನೆ ಮಾಡಿದ್ದಾರೆ. ರೇವಣ್ಣ ದಂಪತಿ ಆಗಮನದಿಂದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಅವರಿಗೆ ಆನೆಬಲ ಸಿಗಲಿದೆ.