ನವದೆಹಲಿ: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಅಳೆದು ತೂಗಿ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ರಿಲೀಸ್ ಮಾಡಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವರಾದ ಧರ್ಮೆಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಸೇರಿದಂತೆ ಪ್ರಮುಖರು ಸುದ್ದಿಗೋಷ್ಠಿ ನಡೆಸಿ, ಮೊದಲ ಪಟ್ಟಿ ರಿಲೀಸ್ ಮಾಡಿದ್ರು. ಗುಜರಾತ್ ಮಾದರಿ, ಉತ್ತರ ಪ್ರದೇಶ ಮಾದರಿಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಅದೆಲ್ಲವನ್ನೂ ಮೀರಿಸುವಂತೆ ಕರ್ನಾಟಕಕ್ಕೆ ಬಿಜೆಪಿ ಹೊಸ ಮಾಡೆಲ್ ರೂಪಿಸಿರುವಂತೆ ಇದೀಗ ಪಟ್ಟಿ ಬಿಡುಗಡೆ ಆಗಿದೆ.
ಈ ಕೆಳಗಿನಂತೆ ಹೊಸ ಮೋಡಲ್ ಇದೆ
52 ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿದೆ
32 OBC, 30 SC ಮತ್ತು 16 ST ಅಭ್ಯರ್ಥಿಗಳಿದ್ದರೆ
9 ಡಾಕ್ಟರ್ಸ್ ಗಳಿದ್ದಾರೆ. ರಿಟೈರ್ಡ್ IAS & IPS ಆಫೀಸರ್ ಗಳನ್ನು ಒಳಗೊಂಡಿದೆ.
31 ಸ್ನಾತಕೋತ್ತರ ಪದವಿಧರರು
8 ಮಹಿಳೆಯರು
ಪ್ರಜಾ ಟೈಮ್ಸ್
www.prajatimes.com