ನರೇಂದ್ರ ಮೋದಿ ರೋಡ್ ಶೋ ಮಾಡಿದ ಮೋಡಿ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ: ಸಮೀಕ್ಷೆ

0
188

ಬೆಂಗಳೂರು, ಮೇ 08: ಪ್ರಜಾ ಟೈಮ್ಸ್ ಪ್ರತ್ತೇಕವಾಗಿ ನಡೆಸಿದ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರೋಡ್ ಶೋ ಮಾಡಿದ ಮೋಡಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ ಎಂದು ಕರ್ನಾಟಕದ ಬಹುತೇಕ ಜನರು ಹೇಳಿದ್ದಾರೆ.

ಕರ್ನಾಟಕ ಚುನಾವಣೆ ಸಂಬಂಧ ಬಿಜೆಪಿ ಪಕ್ಷ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ರೋಡ್ ಶೋಗೆ ಬೆಂಗಳೂರು ನಗರ ಸಾಕ್ಷಿಯಾಗಿದೆ. ರೋಡ್ ಶೋ ನಿಂದ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಹೊಸ ಉತ್ಸಾಹ ಬಂದಿದೆ. ನಗರದ ತುಂಬಾ ಬಿಜೆಪಿ ಮತ್ತು ಬಜರಂಗ್ ದಳದ ಧ್ವಜಗಳು ರಾರಾಜಿಸಿದವು. ಮಹಿಳೆಯರು ಮಕ್ಕಳು ಅತೀ ಉತ್ಸಾಹದಿಂದ ನರೆಂದ್ರ ಮೋದಿಯವರನ್ನು ನೋಡಲು ಬಂದಿದ್ದರು. ಎಲ್ಲೆಲ್ಲೂ ಮೋದಿ ಮೋದಿ ಮೋದಿ ಎಂಬ ಕೂಗು ಬೆಂಗಳೂರಿನಾದ್ಯಂತ ಮೊಳಗಿತು.  ಜೆ ಪಿ ನಗರದ ಸೋಮೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂ ನಲ್ಲಿ ಮುಕ್ತಾಯಗೊಂಡಿತು. 

ನರೇಂದ್ರ ಮೋದಿಯವರನ್ನು ನೋಡಲು ಕಿಕ್ಕಿರಿದ ಜನಸಂದಣಿ ಬೆಂಗಳೂರಿನ ಜಯನಗರದಲ್ಲಿ ಕಂಡು ಬಂದ ದೃಶ್ಯ

ಮುಂಚಿತವಾಗಿ 7ನೇ ಮೇ ರವಿವಾರದಂದು ಆಯೋಜಿಸಲಾದ ರೋಡ್ ಶೋ ದ್ವಿತೀಯ PU ವಿದ್ಯಾರ್ಥಿಗಳು NEET ಪರೀಕ್ಷೆಯನ್ನು ಬರೆಯುತ್ತಿರುವ ಕಾರಣ  ಶನಿವಾರ ದಿನ ಅಂದರೆ ಒಂದು ದಿನ  ಹಿಂದಕ್ಕೆ ಹಾಕಿದರು. ಯಾವ ಒಬ್ಬ ವಿದ್ಯಾರ್ಥಿಗೂ ಕೂಡ ಪರೀಕ್ಷೆಗೆ ತೊಂದರೆಯಾಗಬಾರದೆಂದೋ ಪ್ರಧಾನಿ ಮೋದಿ ಹೇಳಿಕೆ ಕೊಟ್ಟಿದ್ದರು.  ಹೆಲಿಕ್ಯಾಪ್ಟರ ನಿಂದ ಲೊಯೆಲ್ಲಾ ವಿದ್ಯಾ ಸಂಸ್ಥೆ ಗೆ ಬಂದಿಳಿದ ಪ್ರಧಾನಿಯನ್ನು ಸಂಸದ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ  ಶಾಸಕ ಸತೀಶ್ ರೆಡ್ಡಿ ಮತ್ತು ಇನ್ನಿತರ ಗಣ್ಯರು ಸ್ವಾಗತ ಮಾಡಿಕೊಂಡರು.ಬೆಂಗಳೂರು ದಕ್ಷಿಣ ಭಾಗದ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ಜೊತೆಗೆ ತೆರೆದ ವಾಹನದಲ್ಲಿದ್ದರು. ಸುಮಾರು 10.30 ನಿಮಿಷಕ್ಕೆ ರೋಡ್ ಶೋ ಪ್ರಾರಂಭವಾಯಿತು.ರಸ್ತೆ ಯುದ್ದಕ್ಕೂ ಭಾರಿ  ನೂಕು ನುಗ್ಗಲು ಇದ್ದರೂ ಕೂಡ ಮಕ್ಕಳು , ಮಹಿಳೆಯರನ್ನೊಳಗೂಡಿ ಎಲ್ಲರೂ ಹರ್ಷೋದ್ಗಾರವನ್ನು ವ್ಯಕ್ತ ಪಡಿಸಿದರು.

 ಜೆಪಿ ನಗರದ ಬ್ರಿಗೇಡ್‌ ಮಿಲೇನಿಯಂನ ಸೋಮೇಶ್ವರ ಭವನದಿಂದ ಆರಂಭವಾದ ವರ್ಣರಂಜಿತ ರೋಡ್‌ ಶೋ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ಅಂತ್ಯವಾಯಿತು. ಮೋದಿ ರೋಡ್‌ ಶೋ ಸಾಗಿದ ದಾರಿಯುದ್ದಕ್ಕೂ ಜನ ಅದ್ಧೂರಿ ಸ್ವಾಗತವನ್ನು ಕೋರಿದರು. ರೋಡ್‌ ಶೋದುದ್ದಕ್ಕೂ ಮೋದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್‌ ಸಾಥ್‌ ನೀಡಿದರು.ಈ ಸಂದರ್ಭದಲ್ಲಿ ಆರ್ ಅಶೋಕ್ ಮಾತನಾಡಿ ಮೋದಿಯವರ ರೋಡ್ ಶೋ ದಿಂದಾಗಿ ಬಿಜೆಪಿ ಬೆಂಗಳೂರು ನಗರದಲ್ಲಿ ಇನ್ನೂ 7 ರಿಂದ 8 ಹೆಚ್ಚು ಶಾಸಕ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ್ ವ್ಯಕ್ತ ಪಡಿಸಿದರು.

ಪೋಷಕರು ನರೇಂದ್ರ ಮೋದಿ ಅವರನ್ನು ನೋಡಲು ಮಗುವನ್ನು ಮೇಲಕ್ಕೆ ಎತ್ತಿರುವುದು

ಶ್ರೀ ಸೋಮೇಶ್ವರ ಸಭಾ ಭವನದಿಂದ ರೋಡ್‌ ಶೋ ಪ್ರಾರಂಭವಾಗಿದ್ದು, ಜೆಪಿ ನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಮೈಸೂರು ರೋಡ್‌ ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರ ಮಠ ಚೌಕ, ನವರಂಗ್‌ ಸರ್ಕಲ್‌, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ವೃತ್ತ, 18ನೇ ಅಡ್ಡ ರಸ್ತೆ ಜಂಕ್ಷನ್, ಸಂಪಿಗೆ ರಸ್ತೆ ಮೂಲಕ ಸಾಗಿ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ರೋಡ್‌ ಶೋ ಅಂತ್ಯವಾಯಿತು. ರಸ್ತೆಯ ಇಕ್ಕೇಲಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಡಲು ಜನಸಾಗರವೇ ನಿಂತಿದ್ದು ಕಂಡು ಬಂತು.

ಪೊಲೀಸ್​ ಕಂಡಿಷನ್ಸ್​:

ಮೋದಿ ರೋಡ್​ ಶೋ ಮಾರ್ಗದಲ್ಲಿರುವ ಮನೆ, ಅಪಾರ್ಟ್‌ಮೆಂಟ್, ಮಳಿಗೆಗಳಿಗೆ ಪೂರ್ವ ವಿಭಾಗ ಡಿಸಿಪಿಯವರಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಮನೆ, ಮಳಿಗೆಗಳ ಮೇಲೆ ಅಪರಿಚಿತರನ್ನು ಸೇರಿಸುವಂತಿಲ್ಲ. ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ಮಾಹಿತಿ ಕೊಡಬೇಕು ಎಂದು ಹೇಳಲಾಗಿತ್ತು.

ಮಹಿಳೆಯೊಬ್ಬಳು ಅತೀ ಉತ್ಸಾಹದಿಂದ ಮೂಕವಿಸ್ಮಿತಳಾದ ಚಿತ್ರ

ಕಂಪನಿ, ಕಚೇರಿ, ಮಳಿಗೆಗಳಲ್ಲಿ ಸಿಬ್ಬಂದಿ ವಿಳಾಸ, ಪೋನ್ ನಂಬರ್ ಸಂಗ್ರಹಿಸಬೇಕು. ಅಪರಿಚಿತ ವ್ಯಕ್ತಿಗಳು ಬಂದರೆ ಕೂಡಲೇ ಮಾಹಿತಿ ನೀಡಬೇಕು. ಗಣ್ಯ ವ್ಯಕ್ತಿಗಳ ಮೇಲೆ ಹೂ ಸೇರಿ ಯಾವುದೇ ವಸ್ತು ಎಸೆಯುವುದು ನಿಷೇಧ ಎಂದು ನೋಟಿಸ್ ಮೂಲಕ ಸೂಚನೆ ನೀಡಲಾಗಿದೆ.

ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ಅಪಾರ್ಟ್ಮೆಂಟ್ ನ ಕಾರಿಡಾರ್ ನಲ್ಲಿ ನಿಂತು ಉತ್ಸಾಹದಿಂದ ವೀಕ್ಷಿಸುತ್ತಿರುವ ಚಿತ್ರ

ಬೆಂಗಳೂರಿನ ಜನತೆ ಅತೀ ಉತ್ಸಾಹದಲ್ಲಿ ಮೋದಿಯವರನ್ನು ಸ್ವಾಗತಿಸಿ ಖುಷಿ ಪಟ್ಟರೆ ವಿರೋಧ ಪಕ್ಷಗಳು ಮೋದಿ ಬಂದು ಸಾರ್ವಜನಿಕರಿಗೆ ತೊಂದರೆ ಮಾಡಿದರೆಂದು ಬೊಗಳೆ ಬಿಡುತ್ತಿದ್ದರು. ಎರಡು ದಿನ ನಡೆದ ರೋಡ್ ಶೋನಲ್ಲಿ ಸುಮಾರು ೨೦ ಲಕ್ಷ ಜನರು ಪಾಲ್ಗೊಂಡಿದ್ದರೆಂದು ವರದಿಯಾಗಿದೆ.

ಬಿಜೆಪಿಯ ನ್ಯಾಷನಲ್ ಜನರಲ್ ಸೆಕ್ರೆಟರಿ B L ಸಂತೋಷ್ ಅವರು ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ ಎಂದು ಹೇಳಿದ್ದಾರೆ

LEAVE A REPLY

Please enter your comment!
Please enter your name here