HomeNewsMarketing2023 ಚುನಾವಣೆ ಬ್ಯಾಟರಾಯಣಪುರ ಶಾಸಕ ಸ್ಥಾನ ಯಾರಿಗೆ.... ?

2023 ಚುನಾವಣೆ ಬ್ಯಾಟರಾಯಣಪುರ ಶಾಸಕ ಸ್ಥಾನ ಯಾರಿಗೆ…. ?

Date:

Related stories

ನರೇಂದ್ರ ಮೋದಿ ರೋಡ್ ಶೋ ಮಾಡಿದ ಮೋಡಿ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ: ಸಮೀಕ್ಷೆ

ಬೆಂಗಳೂರು, ಮೇ 08: ಪ್ರಜಾ ಟೈಮ್ಸ್ ಪ್ರತ್ತೇಕವಾಗಿ ನಡೆಸಿದ ಸಮೀಕ್ಷೆಯ ಪ್ರಕಾರ...

ಬ್ಯಾಟರಾಯನಪುರ ಕ್ಷೇತ್ರ : ಗೆಲುವಿಗೆ ಹತ್ತಿರ ಬಂದಿರುವ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ.

ಪ್ರತಿ ವಿಧಾನಸಭಾ ಚುಣಾವಣೆ ಬಂದಾಗಲೂ ಸಹ ಕರ್ನಾಟಕದ ಯಾವುದೇ ಕ್ಷೇತ್ರದಲ್ಲೂ ಮತದಾರರ...

ಬ್ಯಾಟರಾಯನಪುರ ತಮ್ಮೆಶ್ ಗೌಡ ನಾಮಪತ್ರ ಸಲ್ಲಿಕೆಗೆ ಹರಿದುಬಂದ ಜನಸಾಗರ.

ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಮ್ಮೆಶ್ ಗೌಡ ಇಂದು ತಮ್ಮ ನಾಮಪತ್ರವನ್ನು...

ಕೈತಪ್ಪಿದ ಟಿಕೆಟ್, ಕೃಷ್ಣರಾಜ ಕ್ಷೇತ್ರ ಶಾಸಕ ರಾಮದಾಸ್ ಅಸಮಾಧಾನ.

ಮೈಸೂರು : ಬಿಜೆಪಿ ಟಕೆಟ್ ಕೈತಪ್ಪಿರುವ ಹಿನ್ನೆಲೆ ಕೃಷ್ಣರಾಜ ಕ್ಷೇತ್ರದ ಶಾಸಕ...
spot_imgspot_img

ಕ್ಷೇತ್ರ ಹಿನ್ನೆಲೆ

ಬೆಂಗಳೂರಿನ  28 ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ  ಬ್ಯಾಟರಾಯನಪುರ ಬರುವುದು. ಇಲ್ಲಿ ಕಾಂಗ್ರೆಸ್ ಸತತವಾಗಿ ಮೂರು ಚುನಾವಣೆಯನ್ನು ಗೆದ್ದಿದೆ. ಬ್ಯಾಟರಾಯನಪುರ ಕ್ಷೇತ್ರ ಹೊಸದಾಗಿ ಹುಟ್ಟಿಕೊಂಡಿದ್ದು. 2008 ರಲ್ಲಿ ಕ್ಷೇತ್ರ ಮರುವಿಂಗಡಣೆಯಾದಾಗ ಪ್ರಾರಂಭಯಾಯಿತು .  ಕೃಷ್ಣ ಭೈರೇಗೌಡ ಸತತ ಮೂರು ಬಾರಿ ಗೆದ್ದಿದ್ದಾರೆ. ಮೂಲತ ಕೋಲಾರ ಜೆಲ್ಲೆಯ ವೇಮಗಲ್ ಕ್ಷೇತ್ರದ ಕೃಷ್ಣ ಭೈರೇಗೌಡ ಅವರ ತಂದೆ ಸಿ ಭೈರೇಗೌಡ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಸಿ ಭರೇಗೌಡ ಅವರ ಅಕಾಲಿಕ ನಿಧನದಿಂದ ಅಮೇರಿಕಾದಲ್ಲಿದ್ದ ಅವರ ಮಗ ಕೃಷ್ಣ ಭೈರೇಗೌಡ ಇಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ ಮತ್ತು ಸತತವಾಗಿ ಗೆಲ್ಲುತ್ತಿದ್ದಾರೆ

ಏ ರವಿ ಹಿನ್ನೆಲೆ

ಇವರ ಪ್ರತಿಸ್ಪರ್ಧಿ ಏ ರವಿ ಬಾಜಪ ಅಭ್ಯರ್ಥಿ, ಇವರು  ಬಾಜಪ ಸರ್ಕಾರದ ಕಂದಾಯ ಸಚಿವರಾದ ಶ್ರೀ ಆರ್ ಅಶೋಕ್ ಅವರ ಸೋದರ  ಸಂಬಂದಿ.  ಸತತ ಮೂರು ಬಾರಿ ಸೋತಿದ್ದಾರೆ. ಈ ಬಾರಿಯೂ ಬಾಜಪ ಟಿಕೆಟಿಗಾಗಿ ಭಾರಿ ಪ್ರಯತ್ನ ಮಾಡುತ್ತಿದ್ದಾರೆ.

ಕೃಷ್ಣ ಬೈರೇಗೌಡರ ಆಗಮನ

1999ರಲ್ಲಿ ಸಿ ಬೈರೇಗೌಡರ ಅಕಾಲಿಕ ನಿಧನದಿಂದಾಗಿ  ಅವರ ಮಗ ಕೃಷ್ಣ ಬೈರೇಗೌಡ ಅಮೇರಿಕಾದಿಂದ ಬಂದು ಬೈ ಎಲೆಕ್ಷನ್ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ಕೃಷ್ಣ ಭೈರೇಗೌಡರು ಉತ್ತಮ ಭಾಷಣಕಾರರು. ಇವರ ವಿರುದ್ಧವಾಗಿ ಸತತ ಮೂರು ಚುನಾವಣೆಯಲ್ಲಿ ಇದ್ದಿದ್ದು ಒಂದೇ ಅಭ್ಯರ್ಥಿ ಅದು ಏ  ರವಿ, ಆರ್ ಅಶೋಕ್ ಅವರ ಸಹೋದರ.  2008ರಲ್ಲಿ, 2013ರಲ್ಲಿ 2018 ರಲ್ಲಿ ಸತಾತ ಮೂರು ಬಾರಿ ಸೋತಿದ್ದಾರೆ . ಈ ಸಾರಿ ಕೂಡ ಬಿಜೆಪಿ ಇವರಿಗೆ ಟಿಕೆಟ್ ಕೊಟ್ಟರೂ ಕೂಡ ಗೆಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

ಈಗಿನ  2023 ರ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡರಿಗೂ ಕೂಡ ನೀರು ಕುಡಿದ ಹಾಗೆ ಚುನಾವಣೆಯಲ್ಲಿ ಗೆಲ್ತಿನಿ ಅನ್ನೋ  ಯಾವ ಲಕ್ಷಣಗಳು ಕಾಣ್ತಾ ಇಲ್ಲ. ಯಾಕಂದರೆ ಕಳೆದ ಚುನಾವಣೆಯಲ್ಲಿ ಎಣಿಕೆ ಪ್ರಾರಂಭವಾಗುತ್ತಿದ್ದ ಹಾಗೆ ಏದುಸಿರು ಬಿಡೊ  ಹಾಗೆ ಆಗಿತ್ತು. ಕಡೆ ಹಂತದವರೆಗೂ ಹಾವು ಎನಿಯಾಟ ಆಟದಂತೆ ಆಗಿತ್ತು. ಕಡೆಗೆ ಕೇವಲ ಸುಮಾರು ಐದು ಸಾವಿರ ಅಂತರದಲ್ಲಿ ಗೆದ್ದಿದ್ದಾರೆ. ಏ ರವಿ ಭಾರಿ ಹೋರಾಟ ಮಾಡಿ ಕಡೆಗೆ ಮೂರನೇ ಬಾರಿ ಸೋತರು


ತಮ್ಮೇಶ್ ಗೌಡರ ಹಿನ್ನೆಲೆ

ಈ ಚುನಾವಣೆಯಲ್ಲಿ ಇದೀಗ ಮೂಲ ಆರ್ ಎಸ್ ಎಸ್ ಹಾಗೂ ಎಬಿವಿಪಿ ಮತ್ತು ವಿಜಯೇಂದ್ರರವರ ಆಪ್ತ, ಯಡಿಯೂರಪ್ಪನವರ ನೆಚ್ಚಿನ ಹುಡುಗ, ಬಿಜೆಪಿಯಲ್ಲೂ ಕೂಡ ಯಂಗ್ ಲೀಡರ್ ಅನಿಸಿಕೊಂಡ  ತಮ್ಮೇಶ್  ಗೌಡ ಕೂಡ ಕ್ಷೇತ್ರದಲ್ಲಿ ಟಾವೆಲ್ ಹಾಕೊಂಡು ಓಡಾಡ್ತಾ ಇದ್ದಾರೆ. ಬ್ಯಾಟರಾಯಣಪುರದಲ್ಲಿ ತಮ್ಮೇಶ್ ಗೌಡ ಮಾಡಿದ ವೆಂಕಟೇಶ್ವರ ಕಲ್ಯಾಣೋತ್ಸವ ಭಾರಿ ಪ್ರಚಾರ ಪೆಡೆದುಕೊಂಡಿತು. ಏರ್ಪೋರ್ಟ್ ರಸ್ತೆಯಲ್ಲಿ ಒಂದೂ ಕಂಬವನ್ನು ಬಿಡದೆ ತಮ್ಮ ಬ್ಯಾನರ್ ಗಳನ್ನು ಹಾಕ್ಕೊಂಡು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಒಂದು ಮೂಲಗಳ ಪ್ರಕಾರ ತಮ್ಮೇಶ್ ಗೌಡ ಅವರಿಗೆ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ.

ಕೃಷ್ಣ ಬೈರೇಗೌಡರು ಕೂಡ ತಮ್ಮ ಹಿಂದಿನ ವೇಗದಲ್ಲಿಯೇ ಓಡಾಡಿಕೊಂಡಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಓಡಾಡಿ ಜನರ ಕಣ್ಣಿಗೆ ಕಾಣಲು ಮತ್ತು ಚುನಾವಣೆ ವೇಳೆಯಲ್ಲಿ ಜನರು ನೆನಪಿಡಲು ಬ್ಯಾಟರಾಯನಪುರ ಕ್ಷೇತ್ರದಲ್ಲಿ ರಸ್ತೆಗಳ ಕಾಮಗಾರಿಗೆ ಓಡಾಡಿದ್ದೆ ಓಡಾಡಿದ್ದು. ಯಾವುದೇ ಕಂಬಗಳನ್ನು ಬಿಡದೆ ಬ್ಯಾನರಗಳನ್ನು ಹಾಕಿದ್ದೆ ಹಾಕಿದ್ದು.

ಕ್ಷೇತ್ರದಲ್ಲಿ ಹಿಂದಿನ ಚುನಾವಣೆಗಳು

ಮತ್ತೊಂದು ವಿಚಾರವೆಂದರೆ ಇಲ್ಲಿ ಜೆಡಿಎಸ್ ಮೂರು ಚುನಾವಣೆಗೆ  ಮೂರು ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಒಳ್ಳೆ ವೋಟುಗಳನ್ನು ಪಡೆದಿದೆ.  2008 ರಲ್ಲಿ 21,000, 2013ರಲ್ಲಿ 41,000 ಮತ್ತು 2018 ರಲ್ಲಿ 22,000, ಆದರೆ ಜೆಡಿಎಸ್ ನಾಯಕರ ನಿರಾಸಕ್ತಿಯಿಂದ ಜೆಡಿಎಸ್ ಬೆಳೆಯಲಿಲ್ಲ .  ಕೇವಲ ಮಂಡ್ಯ, ಮೈಸೂರು ಮತ್ತು  ಹಾಸನ ಕ್ಷೇತ್ರದಲ್ಲಿ ರಾಜಕೀಯ ಮಾಡಿ ನಾವು ಮುಖ್ಯಮಂತ್ರಿ ಆಗುತ್ತೇವೆ  23 ಅಥವಾ 25 ಸೀಟು ಬಂದ್ರೆ ಸಾಕು ಅನ್ನುತ್ತಾರೆ.  ಎಷ್ಟೋ ಕಡೆ ಪಕ್ಷ ಪ್ರಬಲವಾಗಿದ್ದರು ಕಾರ್ಯಕರ್ತರು ತುಂಬಾ ಆಸಕ್ತಿ ತೋರಸಿದ್ದರೂ  ಕೂಡ ಜೆಡಿಎಸ್ ನಾಯಕರು ಕೆಲವು ಕ್ಷೇತ್ರಗಳನ್ನು ಸರಿಯಾಗಿ  ಬಳಸಿಕೊಳ್ಳುತ್ತಿಲ್ಲ ಅದರಲ್ಲಿ ಬ್ಯಾಟರಾಯನಪುರ ಕ್ಷೇತ್ರವು ಒಂದು.

ಬರುವ ಚುನಾವಣೆಗೆ ಅಭ್ಯರ್ಥಿಗಳ ಪೈಪೋಟಿ

ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಕೃಷ್ಣ ಪೈರೇಗೌಡರು ಕಾಂಗ್ರೆಸ್ ಅಭ್ಯರ್ಥಿ ಆಗೋದು ಖಚಿತ, ಯಾವುದೇ ಸಂದೇಹವಿಲ್ಲ. ಆಗಲೇ ಅಧಿಕೃತವಾಗಿ ಘೋಷಿಸಲಾಗಿದೆ.  ಇನ್ನು ಬಿಜೆಪಿ ಪಕ್ಷವನ್ನು ನೋಡಿದರೆ ಅದರ ಟಿಕೆಟ್ ಕೊಡೋದು ಯಾರ್ ಗೆಲ್ತಾರೆ ಅವರಿಗೆ.  ಬಿಜೆಪಿಯಲ್ಲಿ ಒಂದು ಚರ್ಚೆ ಇದೆ. ಫಲಿತಾಂಶ ಬಂದ ಮೇಲೆ ಬಹುಮತಕ್ಕೆ ಕಡಿಮೆಯಾದಾಗ  ನಾಯಿನೂ ನರಿನೂ   ಕರ್ಕೊಂಡ್ ಬಂದು ಆಪರೇಷನ್ ಕಮಲ ಮಾಡೂ ಬದಲಾಗಿ ತಾಕತ್ತಿರುವವರಿಗೆ ಟಿಕೆಟ್ ಕೊಡಬೇಕು, ಗೆಲ್ಲೋರಿಗೆ ಟಿಕೆಟ್ ಕೊಡಬೇಕು  ಅಂತ ಅಮಿತ್ ಶಾ ಮತ್ತು  ನರೇಂದ್ರ ಮೋದಿ ಅವರ  ಬಿಜೆಪಿ ಹೇಳುತ್ತೆ .  ಈಗ ಎಲ್ಲಾ ಬದಲಾಗಿದೆ,  ಗೆಲುವು ಮಾನದಂಡ.  ಹಿಂದೆ ವಾಜಪೇಯಿ ಕಾಲದ ಬಿಜೆಪಿ ಬೇರೆ ಇತ್ತು ನಿಷ್ಠಾವಂತ ಕಾರ್ಯಕರ್ತನಿಗೆ ಕೈಯಲ್ಲಿ ಒಂದು ಕಾಸು ದುಡ್ಡು ಇಲ್ದೆ ಇದ್ರೂ ಕೂಡ ಅವನಿಗೆ ಟಿಕೆಟ್ ಕೊಡ್ತಾ ಇದ್ರು. ಟಿಕೆಟ್ ಕೊಟ್ಟ ಮೇಲೆ ಅಭ್ಯರ್ಥಿಯನ್ನು ಚೆನ್ನಾಗಿ ತೊಳೆದು ತಮ್ಮ ದಾರಿಗೆ ತೆಗೆದು ಕೊಳ್ಳುತ್ತಿದ್ದರು. ಆದರೆ ಈಗಿನ ಪರಿಸ್ಥಿತಿಯೇ ಬೇರೆ.

ಈಗ ತಮೇಶ್ ಗೌಡ ಫುಲ್ ರೇಸ್ನಲ್ಲಿದ್ದಾರೆ ಬಿಜೆಪಿ ಟಿಕೆಟ್ ಗೆ ಟಿಕೆಟ್ ಬಹುತೇಕ ಕನ್ಫರ್ಮ್ ಅಂತ ಹೇಳಲಾಗುತ್ತಿದೆ.  ಮತ್ತೊಂದು ಕಡೆ  ಏ  ರವಿ ಅವರು ಮೂರು ಸಾರಿ ಸೋತರೂ ಕೂಡ ನನಗೆ ಮತ್ತೊಂದು ಸಾರಿ ಟಿಕೆಟ್ ಕೊಡಿ ಎಂದು ಅವರ ಅಣ್ಣ ಆರ್ ಅಶೋಕ್ ಅವರಿಗೆ ದುಂಬಾಲುಬಿದ್ದಿದ್ದರೆ.  ಆದರೆ ಈಗ ಆರ್ ಅಶೋಕ ಅವರ  ಬುಡವೇ ಅಲ್ಲಾಡ್ತಾ ಇದೆ. ಪದ್ಮನಾಭನಗರ ಬಿಟ್ಟು ದೊಡ್ಡಬಳ್ಳಾಪುರ, ಕನಕಪುರ ಅಥವಾ ರಾಮನಗರಕ್ಕೂ ಹೋಗು ಎಂದು ವರಿಷ್ಠರು ಒತ್ತಾಯಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.  ಯಾಕಂದ್ರೆ ಒಕ್ಕಲಿಗ ಅನ್ನೋ ಪ್ರಶ್ನೆ ಬಂದ್ರೆ ನಾನೇ ದೊಡ್ಡ ವ್ಯಕ್ತಿ ನನಗೆ ದೊಡ್ಡ ಸ್ಥಾನ  ಬೇಕು ನನ್ನನ್ನ  ಡೆಪ್ಯುಟಿ  ಸಿಎಂ ಮಾಡಬೇಕು  ಎಂದು ಹಠ ಹಿಡಿಯುತ್ತಾರೆ.    ಪದ್ಮನಾಭನಗರದಿಂದ ಬೇರೆ ಕಡೆಗೆ ಸ್ಪರ್ಧೆಗೆ ಅವರನ್ನು ಕಳಿಸಲು ಪ್ರಯತ್ನಿಸುತ್ತಿದ್ದಾರೆ.  ಈ ಗೊದಲದಲ್ಲಿ

ಆರ್ ಅಶೋಕ್ ಅವರ ಸಹೋದರ ಏ ರವಿ ಯವರಿಗೆ ಎಷ್ಟರಮಟ್ಟಿಗೆ ಸಹಾಯ ಮಾಡುತ್ತಾರೋ ಕಾಯ್ದು ನೋಡಬೇಕು.  ಆರ್ ಅಶೋಕ್ 4ನೇ ಬಾರಿ ತನ್ನ ಸಹೋದರನಿಗೆ ಟಿಕೆಟ್ ಕೇಳುವ ಪರಿಸ್ಥಿತಿಯಲ್ಲಿಲ್ಲ.

ಮಾಜಿ ಕಾರ್ಪೊರೇಟರ್ ಮುನಿಂದ್ರ ಕುಮಾರ್ ಕೂಡ ನನಗೂ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಗ್ರೌಂಡಲ್ಲಿ ಕಾಣ್ತಾ ಇರೋದು ತಮ್ಮೆಶ್ ಗೌಡ ಮಾತ್ರ. ಕೃಷ್ಣ ಬೈರೇಗೌಡರು ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದಿದ್ದರು ಆದರೆ ಈ ಬಾರಿ ಆ ಥರ  ಆಗಬಾರದು ಅಂತ ಅವರು ತುಂಬಾ ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ವಾರ್ಡಗಳು

ಇಲ್ಲಿ ಜಕ್ಕೂರ್, ತನಿಸಂದ್ರ , ಕೊಡಿಗೆಹಳ್ಳಿ , ವಿದ್ಯಾರಣ್ಯಪುರ ದೊಡ್ಡಬೊಮ್ಮಸಂದ್ರ ಮತ್ತು ಕುವೆಂಪು ನಗರ   ಬರುತ್ತವೆ ಇವು  ಮುಂಚಿತವಾಗಿ ಇದ್ದ ಬಿಬಿಎಂಪಿ ವಾರ್ಡಗಳು. ಪುನರ್ ವಿಂಗಡನೆ ಆದಮೇಲೆ ಮತ್ತೆ ಬೇರೆ ಬೇರೆ ವಾರ್ಡ್ ಗಳನ್ನು ಮಾಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮೂರು ಬಿಜೆಪಿ ಕಾರ್ಪೊರೇಟರಗಳು  ಮತ್ತು ನಾಲ್ಕು ಕಾಂಗ್ರೆಸ್ ಕಾರ್ಪೊರೇಟರ್ ಗಳು ಇದ್ದರು.

ಹಿಂದಿನ ಚುನಾವಣೆಯಲ್ಲಿ ಪಡೆದ ಮತಗಳು

2008ರಲ್ಲಿ ಕೃಷ್ಣಬೈರೇಗೌಡರು  ಇಲ್ಲಿ ಬಂದಾಗ ಮೊದಲ ಚುನಾವಣೆಯಲ್ಲಿ ಅವರು 60,979 ಮತಗಳನ್ನು ಕಳಿಸಿದ್ದರು . ಬಿಜೆಪಿ ಅಭ್ಯರ್ಥಿ ಏ  ರವಿ 51627 ಮತಗಳನ್ನು ಗಳಿಸಿದರು ಹಾಗೆ ಜೆಡಿಎಸ್ ಅಭ್ಯರ್ಥಿ ಸಿ ನಾರಾಯಣಸ್ವಾಮಿ 21,598 ಮತಗಳನ್ನು ಗಳಿಸಿದ್ದರು. ಬಿ  ಎಸ್ ಪಿ ಅಭ್ಯರ್ಥಿ ಪಿ ಅಪ್ಪಯ್ಯ 3728 ಮತಗಳನ್ನು ಪಡೆದಿದ್ದರು. 2013ನೇ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡರು 96,125 ಮತಗಳನ್ನು ಗಳಿಸಿ ಜಯಭೇರಿ ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಏ  ರವಿ 63725 ಮತಗಳನ್ನು ಗಳಿಸಿದರು. ಜೆಡಿಎಸ್ ಅಭ್ಯರ್ಥಿ ಹನುಮಂತೇಗೌಡ  41,360 ಮತಗಳನ್ನು ಗಳಿಸಿದರು. 2018ರಲ್ಲಿ ಮೂರನೆ ಬಾರಿ ಕೃಷ್ಣ ಭೈರೇಗೌಡರು ಗೌಡರು ಹ್ಯಾಟ್ರಿಕ್ ಜಯಭೇರಿಯನ್ನು ಗಳಿಸಿದರು ಅವರು  114,964 ಮತಗಳನ್ನು ಗಳಿಸಿದರು  ಬಿಜೆಪಿ ಅಭ್ಯರ್ಥಿ ಏ ರವಿ  109,293 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ, ಚಂದ್ರ ಟಿಜಿ  22490 ಮತಗಳನ್ನು ಪಡೆದಿದ್ದರು ಕೃಷ್ಣ ಬೈರೇಗೌಡರು ರಾಜಕೀಯಕ್ಕೆ ಬಂದಾಗಿನಿಂದ ಒಟ್ಟು ಐದು ಬಾರಿ ಶಾಸಕರಾಗಿದ್ದಾರೆ. ಎರಡು ಬಾರಿ ವೇಮಗಲ್ ಕ್ಷೇತ್ರದಿಂದ ಮತ್ತು ಮೂರು ಬಾರಿ ಬ್ಯಾಟರಾಯನಪುರ ಕ್ಷೇತ್ರದಿಂದ.   ಈಗ 6ನೇ ಬಾರಿ ಗೆಲುವನ್ನು ಸಾಧಿಸಬೇಕೆಂದು ಓಡಾಡುತ್ತಿದ್ದಾರೆ. ಜನರ ಮಂಡೇಟ್ ಹೇಗಿದೆ ಅಂತ ಗೊತ್ತಾಗೋದಿಲ್ಲ ಇಲ್ಲಿ ಪಕ್ಷ ನೋಡಿ ಮತ ಹಾಕುವ ಜನ ಹೆಚ್ಚಿದ್ದಾರೆ. ವ್ಯಕ್ತಿಯನ್ನು ನೋಡಿ ಮತ ಇಲ್ಲಿ ಯಾರೂ ಮತ ಕೊಡೋದಿಲ್ಲ.

ಲೋಕಸಭಾ ಚುನಾವಣೆ ಬಿಜೆಪಿಗೆ ಗೆಲುವು  

ಇನ್ನು ಲೋಕಸಭಾ ವಿಚಾರಕ್ಕೆ ಬಂದ್ರೆ ಇದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. 2009ರಲ್ಲಿ ಡಿ ಬಿ ಚಂದ್ರೇಗೌಡರು ಮಲೆನಾಡನ್ನು ಬಿಟ್ಟು ಬೆಂಗಳೂರು  ಉತ್ತರ ಕ್ಷೇತ್ರಕ್ಕೆ ಬಂದು ಚುನಾವಣೆ ಕಣದಲ್ಲಿ ಇಳಿದು ಗೆದ್ದು ಬಂದರು.  ಅವಾಗ ಡಿ ಬಿ ಚಂದ್ರೇಗೌಡರು 63913 ಮತಗಳನ್ನು ಪಡೆದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಸಿ ಕೆ ಜಾಫರ್ ಷರೀಫ್ ಅವರು 59281 ಮತಗಳನ್ನು ಪಡೆದರು. ಜೆಡಿಎಸ್ ನ ಸುರೇಂದ್ರಬಾಬು (ಹೆಂಡತಿ  ವಿಚಾರದಲ್ಲಿ ಜೈಲಿಗೆ ಹೋಗಿ ಬಂದಂತಹ ವ್ಯಕ್ತಿ) 17017 ಮತಗಳನ್ನು ಪಡೆದಿದ್ದರು . 2014ರಲ್ಲಿ ಮೋದಿ ಅಲೆಯು  ಪ್ರಾರಂಭ ಆಗ್ಬಿಟ್ಟಿತ್ತು, ಚಂದ್ರೇಗೌಡರಿಗೆ ಟಿಕೆಟ್ ಕೊಡಲಿಲ್ಲ ಅವಾಗ ಬಿಜೆಪಿಯಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಡಿವಿ ಸದಾನಂದ ಗೌಡರು ಅಭ್ಯರ್ಥಿಯಾದರು. ಟಿವಿ ಸದಾನಂದ ಗೌಡರು 1,17,795 ಮತಗಳನ್ನು ಪಡೆದರೆ  ಕಾಂಗ್ರೆಸ್ ಅಭ್ಯರ್ಥಿ ಸಿ ನಾರಾಯಣಸ್ವಾಮಿ 81818 ಮತಗಳನ್ನು ಪಡೆಯುತ್ತಾರೆ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಜೀಮ್ 8661 ಮತಗಳನ್ನು ಪಡೆದಿದ್ದರು. ಆಪ್ ಅಭ್ಯರ್ಥಿ ಬಾಬು ಮ್ಯೂತೋ  4741 ಮತಗಳನ್ನು ಪಡೆದಿದ್ದರು. AAP 2013-14ರಲ್ಲಿ ದೇಶದ ತುಂಬಾ ಮೊದಲ ಬಾರಿ ಕಾಂಟೆಸ್ಟ್ ಮಾಡಿ ಆಪ್  ಅಭ್ಯರ್ಥಿ ಬ್ಯಾಟರಾಯಣಪುರದಲ್ಲಿ 4741 ಮತ ಪಡೆದುಕೊಂಡಿತ್ತು. ಮೊದಲ ಬಾರಿಗೆ ಇದೇನು ಕಡಿಮೆ ಸಂಖ್ಯೆಯಲ್ಲ.  ನಿಮಗೆ ಒಂದು ನೆನಪಿರಲಿ  ಬಿಜೆಪಿಗೆ ಪ್ರಬಲ ಎದುರಾಳಿ ಕಾಂಗ್ರೆಸ್ ಅಲ್ಲ ಅದು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ . ದೆಹಲಿ ಮತ್ತು ಪಂಜಾಬನಲ್ಲಿ  ಅಧಿಕಾರದಲ್ಲಿದ್ದಾರೆ ಕರ್ನಾಟಕಕ್ಕೂ ಕಾಲಿಡುತ್ತಿದ್ದಾರೆ. ಹಾಗೆ ನೋಡಿದರೆ ನರೇಂದ್ರ ಮೋದಿಗೆ ಪ್ರಬಲವಾಗಿ ಎದುರೇಟು ಕೊಡುವ ಅಭ್ಯರ್ಥಿ ಅಂತ ಅಂದ್ರೆ ಅದು ಅರವಿಂದ ಕೇಜ್ರಿವಾಲ್  ಮಾತ್ರ.  ಬರುವ ಚುನಾವಣೆಯಲ್ಲಿ ಆಪ್ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿ ಇರುವ ಸಂಭವ ಇದೆ. ಒಂದಿಷ್ಟು ಕ್ಷೇತ್ರಗಳನ್ನು AAP  ಹಾಳು ಮಾಡಬಹುದು ಖಚಿತ.   ಆಮ್ ಆದ್ಮಿ  ಪಕ್ಷ ಮೊದಲು ಬಂದಾಗ ಎಲ್ರು ಅಂದಿದ್ರು ಇದು ಬಿಜೆಪಿ ವೋಟುಗಳನ್ನು ಕಿತ್ತುಕೊಳ್ಳುತ್ತದೆ ಕಾಂಗ್ರೆಸ್ಗೆ ಲಾಭ ಆಗುತ್ತೆ ಅಂತ ಆದರೆ ಪರಿಸ್ಥಿತಿ ಹಾಗಲ್ಲ ಇದು ಕಾಂಗ್ರೆಸ್ ವೋಟುಗಳನ್ನು ಕಿತ್ತುಕೊಳ್ಳುತ್ತದೆ. ಕಾಂಗ್ರೆಸ್ಸನ್ನು ಸಾಯಿಸುತ್ತೆ, ಬಿಜೆಪಿನ ಸೋಲಿಸುತ್ತೆ. ಹೆಂಗೆ ಅಂದ್ರೆ ನಿಮಗೆ ಗೊತ್ತಿರಲಿ ದೆಹಲಿ ಚುನಾವಣೆಯಲ್ಲಿ 70 ಸೀಟ್ಗಳಲ್ಲಿ 67 ಸೀಟ್ ತೆಗೆದು ಪಡೆದುಕೊಂಡು ಫುಲ್ ಮೆಜಾರಿಟಿಯಲ್ಲಿ ಬಂದಾಗ, 67 ಸೀಟ್ ಗಳು AAP, 3 ಸೀಟಗಳು ಬಿಜೆಪಿಗೆ ಮತ್ತು ಕಾಂಗ್ರೆಸ್ಗೆ ಸೊನ್ನೆ. ಮೊನ್ನೆ ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 62 ಆಪ್ 8 ಬಿಜೆಪಿ ಕಾಂಗ್ರೆಸ್ ಸೊನ್ನೆ , ಕಾಂಗ್ರೆಸ್ನ ಸಾಯಿಸುತ್ತೆ ಅಂಡ್ ಬಿಜೆಪಿನ ಸೋಲಿಸುತ್ತೆ .  ಇನ್ನು 2023 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ. ಇನ್ನು

ಇನ್ನು ಕ್ಷೇತ್ರ ಅಭಿವೃದ್ಧಿ ವಿಚಾರಕ್ಕೆ ಬಂದರೆ ಕೃಷ್ಣ ಬೈರೇಗೌಡ ಮುಂಚೂಣಿಯಲ್ಲಿದ್ದಾರೆ. ಏ ರವಿಯವರು ಗಂಗಾಜಲ ವಿತರಣೆ ಮಾಡಿದ್ದು ಚುನಾವಣೆಗೆ ಯಾವ ಲೆಕ್ಕಕ್ಕೂ ಬರಲಿಲ್ಲ. ತಮ್ಮೇಶ್ ಗೌಡ ನೆರವೇರಿಸಿರುವ ಕಲ್ಯಾಣೋತ್ಸವ ಸ್ವಲ್ಪ ಮಟ್ಟಿಗೆ ಜನ ನೆನಪಿಟ್ಟುಕೊಂಡಿದ್ದಾರೆ. ಕೃಷ್ಣ ಬೈರೇಗೌಡ ಕ್ಷೇತ್ರದಲ್ಲಿ ಅಭಿವೃದ್ಧಿ ಜೊತೆಗೆ ಸೌ೦ಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರೊಡನೆ ಉತ್ತಮ ಸಂಪರ್ಕ ಹೊಂದಿದ್ದಾರೆ.  ಸಧ್ಯಕ್ಕೆ ಗೆಲುವು ಕೃಷ್ಣ ಬೈರೇಗೌಡರ ಸುತ್ತ ಮುತ್ತ ಓಡಾಡುತ್ತಿದೆ. ಅವರು ಅದನ್ನು ಹಿಡಿದು ಜೇಬಿಗೆ ಹಾಕೊಳ್ಬೇಕು ಅಷ್ಟೇ. ಬಿಜೆಪಿಗೆ ಪ್ಲಸ್ ಪಾಯಿಂಟ್ ಅಂದರೆ ಇಲ್ಲಿನ ಮತದಾರ ವ್ಯಕ್ತಿಯನ್ನು ನೋಡುವದಿಲ್ಲ ಪಕ್ಷವನ್ನು ಮಾತ್ರ ನೋಡುತ್ತಾರೆ ಆ ನಿಟ್ಟಿನಲ್ಲಿ ನೋಡಿದರೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ತುಂಬಾ ಹತ್ತಿರ. ಕಾದು ನೋಡಬೇಕು.

2019 ಲೋಕಸಭಾ ಚುನಾವಣೆಯಲ್ಲಿ ಕೃಷ್ಣಭೈರೇಗೌಡ ಅವರು ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿದ್ದರು  ಡಿವಿ ಸದಾನಂದ ಗೌಡ ವಿರುದ್ಧವಾಗಿ, ಕೃಷ್ಣ ಬೈರೇಗೌಡ ಅವರು ಸೋತರು.  ಡಿವಿ ಸದಾನಂದ ಗೌಡರು 1,33,239 ಮತಗಳನ್ನು ಪಡೆದರೆ ಕೃಷ್ಣ ಬೈರೇಗೌಡರು 1,15,5592 ಮತಗಳನ್ನು ಪಡೆದರು. ಕೃಷ್ಣ ಬೈರೇಗೌಡರು ಬ್ಯಾಟರಾಯನಪುರ ಶಾಸಕರಿದ್ರು ಕೂಡ ಅವರು ಲೋಕಸಭಾ ಚುನಾವಣೆಯಲ್ಲಿ ಸೋತುಹೋದರು.

ಬಿಜೆಪಿಯಿಂದ ತಮ್ಮೇಶಗೌಡ ಈ ಬಾರಿ ಟಿಕೆಟ್ ನನಗೆ ಎಂದು ಹೇಳಿಕೊಂಡು ಓಡಾಡ್ತಾ ಇದ್ದಾರೆ . ಏ  ರವಿ ಮೂರು ಸಾರಿ ಸೋತು ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಈ ಕಡೆಗೆ ಕಾಂಗ್ರೆಸ್ಗೆ ಕೃಷ್ಣ  ಭೈರೇಗೌಡರಿಗೆ ಟಿಕೆಟ್ ಫಿಕ್ಸ್  ಆಗಿದೆ. ತಮ್ಮೆಶ್ ಗೌಡರಿಗೆ ಹಿನ್ನೆಲೆ ಆರ್ ಎಸ್ ಎಸ್ ಮತ್ತು ABVP  ಜೊತೆಗೆ    ವಿಜಯೇಂದ್ರ ಮತ್ತು ಯಡಿಯೂರಪ್ಪ ಜೊತೆಗೆ ಗೆಳೆತನ ಇವೆಲ್ಲ ಪ್ಲಸ್ ಪಾಯಿಂಟ್ ಆಗಬಹುದು. ಈ ಹಿನ್ನೆಲೆಯಲ್ಲಿ ತಮ್ಮೆಶ್ ಗೌಡರು ತುಂಬಾ ಖುಷಿಖುಷಿಯಾಗಿ ಓಡಾಡ್ತಾ ಇದ್ದಾರೆ.

ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷ ತೆಗೆದುಕೊಳ್ಳುವ ಮತಗಳಿಂದಲೇ ಗೆಲುವು ನಿರ್ಧಾರ

ಮುನೀಂದ್ರ ಕುಮಾರ್ ಜಕ್ಕೂರು ಕಾರ್ಪೊರೇಟರ್ ಆಗಿದ್ದರು.  ಅವರು ಕೂಡ ಟಿಕೆಟ್ ಕೇಳ್ತಿದ್ದಾರೆ ಆದರೆ ಪಾರ್ಟಿ ಗ್ರೌಂಡ್ ರಿಪೋರ್ಟ್ ಮೇಲೆ ಟಿಕೆಟ್ ಕೊಡುತ್ತೆ. ಕೃಷ್ಣ ಬೈರೇಗೌಡ ವರ್ಸಸ್ ಬಿಜೆಪಿ ತೊಗೊಂಡ್ರೆ  ಈ ವಾತಾವರಣ ತುಂಬಾ ಟಫ್ ಫೈಟ್ ಇದೆ. ಜೊತೆಗೆ ಜೆಡಿಎಸ್ ಯಾರು ಕ್ಯಾಂಡಿಡೇಟ್ ಅಂತ ಕೇಳಿದ್ರೆ ಇನ್ನೂ ಕೂಡ ಗೊತ್ತೇ ಇಲ್ಲ ಇನ್ನು AAP ಪಕ್ಷದಿಂದ ಲಾಯರ್ ಜಗದೀಶ್ ಅವರು ಕಾಂಟೆಕ್ಟ್ ಮಾಡ್ತಾರಂತ ಸುದ್ದಿ ಇತ್ತು ಅವರ ಹಾಗೆ ಪಕ್ಷ ಸೇರ್ಕೊಂಡ್ರು ಆಮೇಲೆ ಸುದ್ದಿನೇ ಇಲ್ಲ. ಇಲ್ಲಿ ಆಮ್ ಆದ್ಮಿ ಪಕ್ಷದಿಂದ ಉಮೇಶ್ ಬಾಬು ಹೆಸರು ಪ್ರಕಟವಾಗಿದೆ.

ಕೊನೆ ಮಾತು : ಇಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಜೆಡಿಎಸ್ ಪಡೆಯುವ ಅಥವಾ ಕಿತ್ತುಕೊಳ್ಳುವ ಮತಗಳ ಮೇಲೆ ಬ್ಯಾಟರಾಯನಪುರ ಕ್ಷೇತ್ರ ಯಾರಿಗೆ ಒಲಿಯುತ್ತೆ ಎನ್ನುವುದು ನಿರ್ಧಾರವಾಗುತ್ತೆ

Subscribe

- Never miss a story with notifications

- Gain full access to our premium content

- Browse free from up to 5 devices at once

Latest stories

spot_img

LEAVE A REPLY

Please enter your comment!
Please enter your name here