ಬ್ಯಾಟರಾಯನಪುರ ತಮ್ಮೆಶ್ ಗೌಡ ನಾಮಪತ್ರ ಸಲ್ಲಿಕೆಗೆ ಹರಿದುಬಂದ ಜನಸಾಗರ.

0
638

ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಮ್ಮೆಶ್ ಗೌಡ ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಅವರ ಜೊತೆಗೆ ಮಾಜಿ ಮುಖ್ಯಮಂತ್ರಿ ಟಿವಿ ಸದಾನಂದ ಗೌಡರು, ಚೆಲುವಾದಿ ನಾರಾಯಣಸ್ವಾಮಿ ಮತ್ತು ಚಿತ್ರನಟಿ ತಾರಾ ಜೊತೆಗಿದ್ದರು. ಸ್ಥಳೀಯ ಪ್ರಮುಖ ಮುಖಂಡರಾದ ಮುನೇದ್ರ ಕುಮಾರ್ ಮತ್ತು ಇನ್ನಿತರ ಪ್ರಮುಖ ಮುಖಂಡರು ಅವರ ಜೊತೆಗಿದ್ದರು.

ಸಾವಿರಾರು ಕಾರ್ಯಕರ್ತರು ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದರು. ಮಾಧ್ಯಮಗಳ ಜೊತೆಗೆ ಮಾತಾಡಿದ ತಮ್ಮೇಶ್ ಗೌಡರು ಬ್ಯಾಟರಾಯನಪುರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಹೇಳಿದರು.

ಕೃಷ್ಣ ಬೈರೇಗೌಡರು ಮೂರು ಸಾರಿ ಇಲ್ಲಿ ಶಾಸಕರಾಗಿದ್ದರೂ ಕೂಡ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಕ್ಷೇತ್ರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಖಂಡಿತವಾಗಿಯೂ ನಾನು ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ತಮ್ಮ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

ಬಿಜೆಪಿ ನನ್ನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಲ್ಲಿ ರಾಜ್ಯಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ನಾನು ಮಾಡಿರುವ ಕೆಲಸವನ್ನು ಕಂಡು ನನಗೆ ಈ ಬಾರಿ ಪಕ್ಷ ಟಿಕೆಟ್ ನೀಡಿದೆ ಎಂದು ಹೇಳಿದರು.

ಇಂದು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಕೂಡಿಬಂದ ಜನಸಾಗರವನ್ನು ಕಂಡರೆ ಬಹುತೇಕ ತಮ್ಮೇಶ್ ಗೌಡರು ಗೆಲ್ಲುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.


LEAVE A REPLY

Please enter your comment!
Please enter your name here