ಕೊಡಗಿನ ಬೆಡಗಿಯ ದರ್ಬಾರ್

0
310

ಏಪ್ರಿಲ್ 5 ರಶ್ಮಿಕಾಳ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತ ಈ ಚಿಕ್ಕ ಲೇಖನ

ಹೌದು ಯಾರು ಈ ಬೆಡಗಿ ಎಂದು ಆಶ್ಚರ್ಯ ಪಡಬೇಡಿ. ಪಡ್ಡೆ ಹುಡುಗರ ಕನಸಿನ ರಾಣಿ ಯಾಗಿರುವ. ಚಿತ್ರ ನಿರ್ಮಾಪಕರ ಗೆಲ್ಲುವ ಕುದುರೆಯಾಗಿರುವ. ಹೀರೋಗಳ ಲಕ್ಕನ್ನೇ ಬದಲಾಯಿಸುವ ಸುರಸುಂದರಿ ಭಾರತದ ಒಬ್ಬಳೇ ಒಬ್ಬಳು ಅವಳೇ ನಮ್ಮ ಹೆಮ್ಮೆಯ ರಶ್ಮಿಕ ಮಂದಣ್ಣ.

ಆರಂಭಿಕ:
ವಿಕಿಪೀಡಿಯ ಪ್ರಕಾರ ರಶ್ಮಿಕಾ ಮಂದಣ್ಣ ಹುಟ್ಟಿದ್ದು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಇವಳು ಕೂರ್ಗ್ ಪಬ್ಲಿಕ್ ಸ್ಕೂಲ್ನಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ಪಡೆದಳು ಆಮೇಲೆ ಮೈಸೂರಿಗೆ ಹೋಗಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಳು ಮುಂದೆ ಎಂ,ಎಸ್ ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್ ಫೈನಾನ್ಸ್ ಅಂಡ್ ಕಾಮರ್ಸ್ ನಿಂದ ಸೈಕಾಲಜಿ, ಜರ್ನಲಿಸಂ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರಳು.
ರಶ್ಮಿಕಾ 2014ರಲ್ಲಿ ಬೆಂಗಳೂರು ಟೈಮ್ಸ್ ನ 25 ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿದಳು . 2014ರಲ್ಲಿ ಅವಳು 24ನೇ ಸ್ಥಾನದಲ್ಲಿದ್ದಳು . ನಂತರ 2017ರಲ್ಲಿ ಅವಳು ಮೊದಲ ಬಾರಿಗೆ ಬೆಂಗಳೂರು ಟೈಮ್ಸ್ 2017ರ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡರು


2014ರಲ್ಲಿ ಮಾಡಲಿಂಗ್ ಆರಂಭಿಸಿದ ರಶ್ಮಿಕಾ ಮಂದಣ್ಣ ಅದೇ ವರ್ಷ ಅವರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ತಮ್ಮ ದಾಗಿಸಿದಳು ಮತ್ತು ಕ್ಲೀನ್ ಅಂಡ್ ಕ್ಲಿಯರ್ಬ್ರಾಂಡ್ ಅಂಬಾಸೆಡರ್ ಕೂಡ ಆಗಿದ್ದಳು. ಆನಂತರ ಅವಳು ಲ್ಯಾಂಬೌಡ್ ಬೆಂಗಳೂರಿನ ಅತ್ಯುತ್ತಮ ರೂಪದರ್ಶಿ ಹುಡುಕಾಟ 2018ರಲ್ಲಿ ಟಿವಿಎಸ್ ನ ಪ್ರಶಸ್ತಿ ಪಡೆದಳು.
ಈ ಸ್ಪರ್ಧೆಯಲ್ಲಿ ಕಿರಿಕ್ ಪಾರ್ಟಿ ಚಲನಚಿತ್ರ ತಯಾರಕರನ್ನು ಆಕರ್ಷಿಸಿತು ನಂತರ. ಆಕೆಯು 2016ರ ಆರಂಭದಲ್ಲಿ ನಾಯಕಿ ನಟಿಯಾಗಿ ನಟಿಸಿದರು ದಿ ಟೈಮ್ಸ್ ಆಫ್ ಇಂಡಿಯಾದ ಸಂದರ್ಶನ ಒಂದರಲ್ಲಿ ಅವರು ಹೀಗೆ ಹೇಳಿದ್ದಾರೆ “ಕಿರಿಕ್ ಪಾರ್ಟಿಯ ತಯಾರಕರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ 2014ರ ಸ್ಪರ್ಧೆಯಿಂದ ನನ್ನ ಚಿತ್ರವನ್ನು ಕಂಡರು ಅದರಲ್ಲಿ ನಾನು ಕಾಲೇಜು ಸುತ್ತಿನಲ್ಲಿ ನೃತ್ಯ ಮಾಡುತ್ತಿದ್ದೆ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡರು ನಾನು ಯಾವಾಗಲೂ ಚಿತ್ರದಲ್ಲಿ ನಟಿಸಬೇಕೆಂದು ಬಯಸಿದ್ದು” ಈ ರೀತಿಯಾಗಿ ಅವಳು ಹೇಳಿದ್ದಾಳೆ.


ಚಿತ್ರ ಜೀವನ:
ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಚಲನಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಕಾಲೇಜು ಪ್ರೇಯಸಿ ಫ್ಯಾನ್ಸಿ ಜೋಸೆಫ್ ಪಾತ್ರದಲ್ಲಿ ನಟಿಸಿದರು ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಒಳ್ಳೆಯ ಪ್ರಶಸ್ತಿಗೆ ಪಾತ್ರವಾಯಿತು ಜೊತೆಗೆ ರಶ್ಮಿಕಾ ಅಭಿನಯವು ಮೆಚ್ಚುಗೆಯನ್ನು ಪಡೆಯಿತು ಹಾಗೂ 2016ರ ಅತ್ಯುತ್ತಮ ನಟಿ (ಚೊಚ್ಚಲ) ಯಾಗಿ ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪಡೆದುಕೊಂಡರು ಆಮೇಲೆ ಮಾರ್ಚ್ 2017ರ ಬೆಳಿಗ್ಗೆ ರಶ್ಮಿಕ ಅವಳು ಪುನೀತ್ ರಾಜಕುಮಾರ್ ಅವರೊಂದಿಗೆ ಹರ್ಷ ನಿರ್ದೇಶನದ ಚಲನಚಿತ್ರ ಅಂಜನಿಪುತ್ರ ದಲ್ಲಿ ನಟಿಸಿದರು ಇವಳು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.

ಆ ನಂತರ ರಶ್ಮಿಕ ಹಿಂದೆ ತಿರುಗಿ ನೋಡಿದ್ದೆ ಇಲ್ಲ ಯಶಸ್ಸಿನ ಮೇಲೆ ಯಶಸ್ಸು, ಯಶಸ್ಸಿನ ಮೇಲೆ ಯಶಸ್ಸು ಹೀಗೆ ಯಶಸ್ಸನ್ನು ಸತತವಾಗಿ ಕಾಣುತ್ತಾ ಕನ್ನಡ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದಾರೆ. 2018ರಲ್ಲಿ ತೆರೆಕಂಡ ತೆಲುಗು ಚಿತ್ರ ಗೀತ ಗೋವಿಂದo ಅಭೂತಪೂರ್ವ ಯಶಸ್ಸು ಕಂಡಿತು ಈ ಚಿತ್ರಕ್ಕೆ ಬಜೆಟ್ ಹಾಕಿರುವುದು ಐದು ಕೋಟಿ ಆದರೆ ಲಾಭಗಳಿಸಿರೋದು 132 ಕೋಟಿ. ಇದರಿಂದ ಎಲ್ಲಾ ತೆಲುಗು ನಿರ್ಮಾಪಕರು ತುಂಬಾ ಸಂತೋಷಪಟ್ಟಿದ್ದಾರೆ, 2021 ರಲ್ಲಿ ತೆರೆಕಂಡ ತೆಲುಗು ಚಿತ್ರ ಪುಷ್ಪ ಕೂಡ ಭಾರಿ ಯಶಸ್ಸು ಗಳಿಸಿದೆ ಈ ಚಿತ್ರಕ್ಕೆ ಬಜೆಟ್ 250 ಕೋಟಿ. 373 ಕೋಟಿ ಬಾಕ್ಸ್ ಆಫೀಸ್ ಲಾಭವನ್ನು ಗಳಿಸಿದೆ.


ತೆಲುಗು ಚಿತ್ರರಂಗದಲ್ಲಿ ರಶ್ಮಿಕ ಬೆಳೆದಿರುವ ಬಗೆ ಹೇಗೆ ಎಂದರೆ ತೆಲುಗು ಪ್ರೇಕ್ಷಕರು ರಶ್ಮಿಕಳನ್ನು ತಮ್ಮ ಮನೆಯ ಮಗಳು ಎಂದು ಹೇಳುತ್ತಾರೆ ಯಾವುದೇ ಕಾರಣಕ್ಕೂ ರಶ್ಮಿಕ ಬೇರೆಯವಳು ಎಂದು ಅವರು ಒಪ್ಪಿಕೊಳ್ಳಲು ಕಸುವಿಸಿಕೊಳ್ಳುತ್ತಾರೆ ಅದೇ ಥರ ತೆಲುಗು ನಿರ್ಮಾಪಕರು ಕೂಡ ರಶ್ಮಿಕಾ ಅಂದರೆ ಅಚ್ಚುಮೆಚ್ಚು ಯಾಕೆಂದರೆ ರಶ್ಮಿಕ ಚಿತ್ರದಲ್ಲಿ ಕಾಣಿಸಿಕೊಂಡರೆ ಯಶಸ್ಸು ಖಂಡಿತ ಎಂದು ನಿರ್ಮಾಪಕರು ನಂಬಿದ್ದಾರೆ ಅದು ನಿಜ ಕೂಡ.

ಬಿಗ್ ಬಿ ಜೊತೆಗೆ ರಶ್ಮಿಕ
ಹೌದು ರಶ್ಮಿಕ ಈಗ ತಮ್ಮ ಕರಿಯರ್ ಉತ್ತುಂಗದಲ್ಲಿದ್ದಾರಳೆ . ಅವರಳಿ ಗೆ ಹಿಂದಿ ಚಿತ್ರರಂಗದ ಬಿಗ್ ಸ್ಟಾರ್ ಅಮಿತಾ ಬಚ್ಚನ್ ಅವರ ಜೊತೆಗೆ ಅಭಿನಯಿಸುವ ಅವಕಾಶ ಒದಗಿ ಬಂದಿದೆ ಅವಳು ಹಿಂದಿ ಚಿತ್ರದಲ್ಲಿ ಅಮಿತಾ ಬಚ್ಚನ್ ಅವರ ಮಗಳಾಗಿ ನಟಿಸುತ್ತಿದ್ದಾರಳೆ . ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪ್ರೇಕ್ಷಕರು ಚಿತ್ರವನ್ನು ನೋಡಲು ಆತುರದಿಂದ ಕಾಯುತ್ತಿದ್ದಾರೆ. ಯಶಸ್ಸು ಗ್ಯಾರಂಟಿ. ಕೆಲವು ಜನರು ಹಿಂದಿ ಚಿತ್ರರಂಗದ ಅಮಿತಾಬ್ ಬಚ್ಚನ್ ರಶ್ಮಿಕಾ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡು ತಮ್ಮ ಯಶಸ್ಸನ್ನು ಮತ್ತೆ ಪರೀಕ್ಷಿಸಲಿದ್ದಾರೆ ಮತ್ತೆ ಯಶಸ್ಸನ್ನು ಕಾಣಲು ಕಾತುರದಿಂದಿದ್ದಾರೆ ಎಂದು ಹೇಳುತ್ತಿದ್ದಾರೆ ಯಾಕಂದ್ರೆ ರಶ್ಮಿಕ ಇಸ್ ಲಕ್ಕಿ ಗರ್ಲ್. ಇದನ್ನ ಇನ್ನೊಂದು ಅರ್ಥದಲ್ಲಿ ಹೇಳೋದು ಅಂದ್ರೆ ರಶ್ಮಿಕ ಇದ್ದಲ್ಲಿ ಲಕ್ಕು ಇರುತ್ತೆ ರಶ್ಮಿಕಾ ಇದ್ದಲ್ಲಿ ಯಶಸ್ಸು ಇರುತ್ತೆ.

ವೈಯಕ್ತಿಕ ಜೀವನ
ರಶ್ಮಿಕ ಮಂದಣ್ಣ ಅವಳ ಮೊದಲ ಚಿತ್ರ ಕಿರಿಕ್ ಪಾರ್ಟಿಯಲ್ಲಿ ನಟಿಸಿರುವ ರಕ್ಷಿತ್ ಶೆಟ್ಟಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಳು. ಕಿರಿಕ್ ಪಾರ್ಟಿ ಚಿತ್ರವನ್ನು ಮಾಡುವಾಗ ಅವರು ಡೇಟಿಂಗ್ ಮಾಡಿದರು ಮತ್ತು 3rd ಜುಲೈ 2018 ನಿಶ್ಚಿತಾರ್ಥ ಮಾಡಿಕೊಂಡರು. ರಶ್ಮಿಕಾ ತನ್ನ ವೃತ್ತಿ ಬದುಕಿನಲ್ಲಿ ಮುಂದುವರಿಯಲು ಸಾದ್ಯವಾಗದಿರಬಹುದೆಂದು ಅಥವಾ ಮದುವೆಯಾದರೆ ಚಿತ್ರರಂಗದಲ್ಲಿ ಅವಕಾಶಗಳು ಸಿಗುವುದಿಲ್ಲ ಎಂಬ ಸತ್ಯವನ್ನು ಅರಿತು ಮುಂದೆ ಹೊಂದಾಣಿಕೆಯ ಸಮಸ್ಯೆಗಳನ್ನು ಉಲ್ಲೇಖಿಸಿ ಇಬ್ಬರು ಸಪ್ಟೆಂಬರ್ 2018ರಲ್ಲಿ ಪರಸ್ಪರ ನಿಶ್ಚಿತಾರ್ಥವನ್ನು ಮುರಿದರು.

ರಶ್ಮಿಕ ಬಗ್ಗೆ ಬರಿತಾ ಹೋದ್ರೆ ಒಂದು ದೊಡ್ಡ ಪುಸ್ತಕ ಬರೆಯಬಹುದು ಸದ್ಯಕ್ಕೆ ಇಷ್ಟು ಸಾಕು.

                               ರಶ್ಮಿಕಾ ಇನ್ನೂ ದೊಡ್ಡದಾಗಿ ಬೆಳೆಯಲಿ ಎಂದು ಪ್ರಜಾ ಟೈಮ್ಸ್ ಹಾರೈಸುತ್ತದೆ.

                                ವಿಕ್ರಮ ಅವರ ಧ್ವನಿಯಲ್ಲಿ ಮಾಮರವೆಲ್ಲೋ ಕೋಗಿಲೆಯಲ್ಲೋ ಕೇಳಿ ಆನಂದಿಸಿ



ವಿಕ್ರಮ ಅವರ ಧ್ವನಿಯಲ್ಲಿ ಮಾತಿನಲ್ಲಿ ಹೇಳನರೇನೋ ಕೇಳಿ ಆನಂದಿಸಿ

LEAVE A REPLY

Please enter your comment!
Please enter your name here