ಬ್ಯಾಟರಾಯನಪುರ ಕ್ಷೇತ್ರ : ಗೆಲುವಿಗೆ ಹತ್ತಿರ ಬಂದಿರುವ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ.

0
292

ಪ್ರತಿ ವಿಧಾನಸಭಾ ಚುಣಾವಣೆ ಬಂದಾಗಲೂ ಸಹ ಕರ್ನಾಟಕದ ಯಾವುದೇ ಕ್ಷೇತ್ರದಲ್ಲೂ ಮತದಾರರ ಒಲವು, ಪಕ್ಷಗಳ ಗೆಲವನ್ನು ಮುಖ್ಯವಾಗಿ ರಾಜಕೀಯ ಬೆಳವಣಿಗೆಗಳನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಚಿತ್ರಣವೇ ಬೇರೆಯಾಗಿದೆ.

ಮೊದಮೊದಲು ಇದು ಕಾಂಗ್ರೆಸ್ ನ ಭಧ್ರಕೋಟೆ ಭಧ್ರಕೋಟೆ ಎಂದು ಕೊಗುತ್ತಿರುವವರು ಈಗ ತೆಪ್ಪಗೆ ಕುಳಿತಿದ್ದಾರೆ. ಕಾಂಗ್ರೆಸ್ ನ ಭದ್ರಕೋಟೆ ಈ ಬಾರಿ ಛಿದ್ರ ಛಿದ್ರವಾಗಿ ಹೋಗುವಂತೆ ಕಾಣುತ್ತಿದೆ.

ಮ್ಮೇಶ್ ಗೌಡ ಜೊತೆಗೆ ಪ್ರಚಾರದಲ್ಲಿ ಭಾಗಿಯಾದ ಏ ರವಿ ಮತ್ತು ಮುನೀಂದ್ರ

ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರು ಬರುತ್ತಿರುವ ಭರಾಟೆ ಮತ್ತು ವೇಗ ಕಂಡು ಕಾಂಗ್ರೆಸ್ ನ ಕಾರ್ಯಕರ್ತರಲ್ಲಿ ಭಾರಿ ಕಸಿವಿಸಿ ಉಂಟುಮಾಡಿದೆ. ಮೊದಮೊದಲು ಏ ರವಿ ಹಾಗು ಮುನೀಂದ್ರ  ಅವರೂ ಕೂಡ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿರುವುದರಿಂದ ಅವರಿಗೆ ಅಸಮಾಧಾನವಿದೆ ಇಬ್ಬರೂ ತಮ್ಮೇಶ್ ಗೌಡರಿಗೆ ಬೆಂಬಲ ಕೊಡುವುದಿಲ್ಲ ತಮ್ಮೇಶ್ ಗೌಡರಿಗೆ ಪಕ್ಷದದಲ್ಲಿಯೇ ಬೆಂಬಲದ ಕೊರತೆಯಾಗುತ್ತದೆ ಎಂದು ಎಲ್ಲರೂ ಮಾತಾಡಿಕೊಂಡಿದ್ದರು. ಏ ರವಿ ಹಾಗು ಮುನೀಂದ್ರ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಾರೆ ಎಂದು ಬಹುತೇಕ ಜನರು ಮತ್ತು ಕಾರ್ಯಕರ್ತರು ಮಾತಾಡಿಕೊಂಡಿದ್ದರು.

ಮುನೀಂದ್ರ ಅವರ ಬೆಂಬಲಿಗರಂತೂ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಲು ಸೋಶಿಯಲ್ ಮೀಡಿಯಾಗಳ ಮೂಲಕ ಒತ್ತಾಯ ಮಾಡಿದ್ದರು ಅದರಂತೆ  ಏ ರವಿಯವರ ಬೆಂಬಲಿರೂ ಕೂಡ ರವಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಬಯಸಿದ್ದರು.

ಯೂನಿಯನ್ ಫೈನಾನ್ಸ್ ಮಿನಿಸ್ಟರ್ ಶ್ರೀಮತಿ ನಿರ್ಮಲಾ ಸೀತಾರಾಮನ ಅವರು ಬ್ಯಾಟರಾಯನಪುರ ಮತಕ್ಷೇತ್ರದ ಶೋಭಾ ಸಿಟಿ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆ ಮಾತನಾಡಿ ತಮ್ಮೇಶ್ ಗೌಡ ಪರವಾಗಿ ಮತ ಯಾಚಿಸಿದರು

ಆದರೆ ಕೆಲವೇ ದಿನಗಳಲ್ಲಿ ಬ್ಯಾಟರಾಯಣಪುರದ ಚಿತ್ರಣವೇ ಬದಲಾಗಿ ಹೋಗಿದೆ. ಏ ರವಿ ಹಾಗು ಮುನೀಂದ್ರ ತಮ್ಮ ವ್ಯಯಕ್ತಿಕ ವಿಚಾರಗಳನ್ನು ಬಿಟ್ಟು ತಮ್ಮೇಶ್ ಗೌಡರ ಬೆಂಬಲಕ್ಕೆ ನಿಂತಿದ್ದಾರೆ. ಪಕ್ಷವನ್ನು ಬೆಳೆಸಲು ಮುಂದಾಗಿದ್ದಾರೆ. ಇದರಿಂದ ತಮ್ಮೇಶ್ ಗೌಡರಿಗೆ ಆನೆ ಬಾಲವೇ ಬಂದಂತಾಗಿದೆ. ಮೊದಲೇ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಮತ್ತಷ್ಟು ಹುಮಸ್ಸು ಬಂದಿದೆ.  ಈ ಭಾರಿ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಬಿದ್ದೆ ಬೀಳುತ್ತೆ ಅನ್ನೋದು ಬಿಜೆಪಿ ಕಾರ್ಯಕರ್ತ ಹಾಗು ಇಲ್ಲಿಯ ಮತದಾರನ ಮಾತು. 

ತಮ್ಮೇಶ್ ಗೌಡರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿರುವ ಚಿತ್ರಗಳು

ತಮ್ಮೇಶ್ ಗೌಡರು ಕ್ಷೇತ್ರದಲ್ಲಿ ರಾತ್ರಿ ಹಗಲೆನ್ನದೆ ಪ್ರಚಾರದಲ್ಲಿ ತೊಡಗಿದ್ದಾರೆ. ಅದೇ ರೀತಿ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರೂ ಕೂಡ ಬಹು ಉತ್ಸಾಹದಿಂದ ಭಾರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೆ ರೇಂಜ್ ಲ್ಲಿ ಇನ್ನು ಕೆಲವೇ ದಿವಸ ಪ್ರಚಾರ ಕೈಗೊಂಡರೆ ಗೆಲುವು ಖಚಿತ.

ತಮ್ಮೇಶ್ ಗೌಡರ ಇನ್ನೊಂದು ಪ್ಲಸ್ ಪಾಯಿಂಟ್ ಅಂದರೆ ಕೇಸರಿ ಫೌಂಡೇಶನ್ ಮೂಲಕ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಮಾಜಿಕ ಕೆಲಸ. ಸಾಮಾಜಿಕ ಕಾರ್ಯಕರ್ತರಾಗಿ ಕ್ಷೇತ್ರದಲ್ಲಿ ಶಾಸಕರಾಗುವ ಮುಂಚೆಯೇ ಮನೆ ಮನೆಗೂ ಪರಿಚಿತರಾಗಿದ್ದಾರೆ.

ಕರೋನ ಸಮಯದಲ್ಲಿ ಕ್ಷೇತ್ರದಲ್ಲಿ ಅವರು ಜನರಿಗೆ ಮಾಡಿದ ಸಹಾಯ ಬಹುತೇಕ ಕ್ಷೇತ್ರದಲ್ಲಿ ಯಾರೂ ಮರೆಯಲಾರರು. ಮೊದಲಿನಿಂದಲೂ ABVP ಯಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಿರುವ ಇವರಿಗೆ ಅಭಿವೃದ್ಧಿಯ ಮೆಟ್ಟಿಲು ಗಳನ್ನು ಹೇಗೆ ಹತ್ತಬೇಕೆಂಬುದು ಚೆನ್ನಾಗಿ ತಿಳಿದುಕೊಂಡಿದ್ದಾರೆ. 2018ರಲ್ಲಿ ಇನ್ನೇನು ಕ್ಷೇತ್ರ ಬಿಜೆಪಿ ಪಾಲಾಯಿತು ಎನ್ನುವಷ್ಟರಲ್ಲಿ ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿತ್ತು. ಆದರೆ ಈ ಸಲ ಬಿಜೆಪಿ ಭಾರಿ ಅಂತರದಿಂದ ಗೆಲುವು ಸಾಧಿಸಲು ಉತ್ಸುಕತೆಯಿಂದ ಕಾದು ಕುಳಿತಿದೆ.

ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿರುವುದು

ನರೇಂದ್ರ ಮೋದಿ ಯಾವತ್ತೂ ಹೇಳುವ ಮಾತೆಂದರೆ “ಕಾರ್ಯಕರ್ತರೇ ನಮ್ಮ ಪಕ್ಷದ ಬೆನ್ನೆಲುಬು” ಎಂದು. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸ್ವಲ್ಪ ಸುತ್ತಾಡಿ ಬಂದರೆ ಅದು ನಿಜವೆನಿಸುತ್ತದೆ. ಇಲ್ಲಿಯ ಬಿಜೆಪಿ ಕಾರ್ಯಕರ್ತರು  ಉತ್ಸಾಹದಿಂದ  ಮಾಡುವ ಕೆಲಸ ನೋಡಿದರೆ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರು ಗೆಲುವಿಗೆ ತುಂಬಾ ಹತ್ತರವಿದ್ದಾರೆ.

ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿರುವುದು

ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ ಕೊಡ ಕ್ಷೇತ್ರಕ್ಕೆ ತುಂಬಾ ಕೆಲಸ ಮಾಡಿದ್ದಾರೆ  ಮತ್ತು ಅವರ ದ್ರಷ್ಟಿಕೋನ.  ಅದರಲ್ಲಿ ಕೆಲವು ಯೋಜನೆಗಳು ಈ ರೀತಿ ಇದೆ.

೧) ಉತ್ತಮ ಶೈಕ್ಷಣಿಕ ಕೇಂದ್ರಗಳನ್ನುಸ್ಥಾಪಿಸುವುದು.

೨) ಉತ್ತಮ ಮಲ್ಟಿ ಸ್ಪೆಸಿಯಾಲಿಟಿ ಆಸ್ಪತ್ರೆ ಕಟ್ಟುವುದು.

೩) ಎಲ್ಲರಿಗೂ ಆರೋಗ್ಯ ವಿಮೆ ಒದಗಿಸುವುದು .

೪) ಗರ್ಭಿಣಿಯರಿಗೆ ಮುಂದುವರಿದ (ಅಡ್ವಾನ್ಸಡ್ )ಸ್ಕ್ಯಾನಿಂಗ್ ಸೆಂಟರ್ ಗಳನ್ನು ಸ್ಥಾಪಿಸುವುದು.

೫) ಕ್ಷೇತ್ರದಲ್ಲಿ ಮುಂದುವರೆದ (ಅಡ್ವಾನ್ಸಡ್ ) ರೋಗನಿರ್ಣಯ (ಡೈಗನೋಸ್ಟಿಕ್) ಸೆಂಟರ್ ಗಳನ್ನು ಸ್ಥಾಪಿಸಿವುದು.

೬) ಕ್ಷೇತ್ರದಲ್ಲಿ ನಿಯಮಿತ ಅರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುವುದು.

೭) ಸ್ವಯಂ ಸೇವಕ ವೈದ್ಯರ ಕೋಶ (ಸೆಲ್) ಪ್ರಾರಂಭಿಸಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಿಯಮಿತವಾಗಿ ಕಣ್ಣು, ದಂತ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಮಾಡುವದು.

೭) ಕ್ಷೇತ್ರದಲ್ಲಿ ಹೊಸ ಸ್ವಚ್ಛವಾದ ಟಾಯ್ಲೆಟ್ ಗಳನ್ನು ಕಟ್ಟುವುದು.

೮) ಪರಿಸರ ವ್ಯವಸ್ಥೆಗೆ ಅನುಗುಣವಾಗಿ ಕಸವನ್ನು ವಿಲೇವಾರಿ (ಡಿಸ್ಪೋಸ್) ಮಾಡುವುದು.

೯) ಹದಿನೈದು ವರ್ಷಗಳಿಂದ ಯಾರು ಕ್ಷೇತ್ರದಲ್ಲಿ ನೆಲಸಿರುತ್ತಾರೆ ಅವರಿಗೆ ಸರಕಾರದಿಂದ ಮನೆ ಮಾಡಿ ಕೊಡುವುದು.

Byatarayanapura MLA

ಇವೆಲ್ಲ ಅವರು ಮಾಡಬೇಕೆಂದಿರುವ ಎಲ್ಲರಿಗೂ ಮೆಚ್ಚುಗೆಯಾದ ಯೋಜನೆಗಳು. 

ಸದ್ಯಕ್ಕೆ ಕ್ಷೇತ್ರದಲ್ಲಿ ಬಹುತೇಕ ಎಲ್ಲ ವರ್ಗದ ಮತ್ತು ಎಲ್ಲ ಧರ್ಮದ ಮತದಾರರು ಬಿಜೆಪಿ ವಿಜಯೋತ್ಸವವನ್ನು ಸಂಭ್ರಮಿಸಲು ಕಾದು ಕುಳಿತಂತೆ ಕಾಣುತ್ತದೆ.

ವರದಿ : ವಿಕ್ರಮ

ಪ್ರಜಾ ಟೈಮ್ಸ್

www.prajatimes.com


LEAVE A REPLY

Please enter your comment!
Please enter your name here